ETV Bharat / state

ವಾರಾಂತ್ಯದಲ್ಲಿ ಆಫ್ರಿಕನ್ ಪ್ರಜೆಗಳ ಉಪಟಳ.. ಮಾದಕ ಪದಾರ್ಥ ಮಾರುತ್ತಿದ್ದ ನೈಜೀರಿಯನ್ ಪ್ರಜೆಯ ಬಂಧನ - etv bharat kannada crime news

Bengaluru crime: ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ನೈಜೀರಿಯನ್​ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯನ್ ಪ್ರಜೆಯ ಬಂಧನ
ನೈಜೀರಿಯನ್ ಪ್ರಜೆಯ ಬಂಧನ
author img

By

Published : Jul 24, 2023, 12:10 PM IST

ಬೆಂಗಳೂರು: ನಗರದಲ್ಲಿ ಕೆಲ ಆಫ್ರಿಕನ್ ಪ್ರಜೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ಎಲ್ಲೆಂದರಲ್ಲಿ ನಶೆಯಲ್ಲಿ ತೂರಾಡುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಶನಿವಾರ ಸಹ ಮಹಾತ್ಮ ಗಾಂಧಿ ರಸ್ತೆಯ ಕಾವೇರಿ ಎಂಪೋರಿಯಂ ಸರ್ಕಲ್ ಬಳಿ ಕೆಲ ಆಫ್ರಿಕನ್ ಪ್ರಜೆಗಳು ದುರ್ವರ್ತನೆ ತೋರಿದ್ದಾರೆ. ಕೆಲ ಮಹಿಳೆಯರು ಅಮಲಿನಲ್ಲಿ ತೂರಾಡುತ್ತಿದ್ದುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದರು. ಈ ವೇಳೆ ಸಾರ್ವಜನಿಕರ ವಿರುದ್ಧ ಹರಿಹಾಯ್ದ ಆಫ್ರಿಕನ್ ಪ್ರಜೆಗಳು ಕೈಯಲ್ಲಿ ಕಲ್ಲು ಹಿಡಿದು ಸಿಕ್ಕ ಸಿಕ್ಕವರನ್ನ ಬೆದರಿಸಿರುವ ದೃಶ್ಯಗಳು ಸ್ಥಳೀಯರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯ ಬಂಧನ: ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನ ವಿವಿ ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಜಾನ್ ಇಗ್ವಾಯತ್ (30) ಬಂಧಿತ ಆರೋಪಿ. ಆರೋಪಿ ಹಾಗೂ ಮತ್ತೋರ್ವ ನೈಜೀರಿಯಾ ಪ್ರಜೆ ವಿದ್ಯಾರ್ಥಿ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದರು. ಆದರೆ ಗೋವಾದಿಂದ ಮಾದಕ ವಸ್ತುಗಳನ್ನು ತಂದು ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಹಾಗೂ ಪಾರ್ಟಿಗಳಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಆರೋಪಿಗಳ ಕುರಿತು ಮಾಹಿತಿ ಪಡೆದು ದಾಳಿ ನಡೆಸಿದ ವಿವಿ ಪುರಂ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳು ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಮಾದಕ ಪದಾರ್ಥ ಸೇರಿದಂತೆ ಸುಮಾರು 2 ಕೋಟಿ ಮೌಲ್ಯದ 1 ಕೆ.ಜಿ 20 ಗ್ರಾಂ ಎಂಡಿಎಂಎ, ದ್ವಿಚಕ್ರ ವಾಹನ, ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ.

ಯುವತಿಗೆ ಕಿರುಕುಳ ನೀಡಿದ್ದ ರ‍್ಯಾಪಿಡೋ ಬೈಕ್ ಕ್ಯಾಪ್ಟನ್ ಬಂಧನ.. ರ‍್ಯಾಪಿಡೋ ಬೈಕ್​ ರೈಡ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಬೈಕ್ ಕ್ಯಾಪ್ಟನ್​ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಬೈಕ್​ ಕ್ಯಾಪ್ಟನ್​ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ ಯುವತಿ ಟ್ವೀಟ್ ಮೂಲಕ ರ‍್ಯಾಪಿಡೋ ಸೇವೆ ಮತ್ತು ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದಳು.

ಶುಕ್ರವಾರ ಮಧ್ಯಾಹ್ನ ಟೌನ್ ಹಾಲ್​ನಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ತಮ್ಮ ಮನೆಗೆ ತೆರಳಲು‌ ಸಂತ್ರಸ್ತೆ ರ‍್ಯಾಪಿಡೋ ಆಟೋ ಬುಕ್ ಮಾಡಿದ್ದಳು. ಆದರೆ ಪದೇ ಪದೇ ಕ್ಯಾನ್ಸಲ್ ಆಗುತ್ತಿದ್ದರಿಂದ, ಬಳಿಕ ಬೈಕ್ ರೈಡ್​ ಬುಕ್​ ಮಾಡಿದ್ದಳು. ಆ್ಯಪ್​ನಲ್ಲಿ ತೋರಿಸಿದ ನಂಬರಿನ ವಾಹನ ರಿಪೇರಿಯಲ್ಲಿದೆ ಎಂದಿದ್ದ ಚಾಲಕ‌ ಬೇರೆ ಬೈಕಿನಲ್ಲಿ‌ ಬಂದಿದ್ದ. ಬಳಿಕ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಒಂದೇ ಕೈಯಲ್ಲಿ ಚಾಲನೆ ಮಾಡುತ್ತ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಳು.

ಡ್ರಾಪ್ ಮಾಡಿದ ನಂತರವೂ ಯುವತಿಗೆ ಪದೇ ಪದೆ ಕರೆ ಮಾಡಿದ್ದ ರ‍್ಯಾಪಿಡೋ ಬೈಕ್​ ಕ್ಯಾಪ್ಟನ್,​ ಅಸಂಬದ್ಧವಾಗಿ ಸಂದೇಶಗಳನ್ನು ಮೊಬೈಲ್​ಗೆ ಕಳುಹಿಸಿದ್ದಾನೆ. ಇದರಿಂದ ನೊಂದ ಯುವತಿ, ಮೆಸೇಜ್​ನ ಸ್ಕ್ರೀನ್ ಶಾಟ್ ಸಮೇತ ಟ್ವೀಟ್ ಮಾಡಿ, ತನಗಾದ ಅನುಭವವನ್ನು ಹಂಚಿಕೊಂಡಿದ್ದಳು. ಟ್ವೀಟ್ ಗಮನಿಸಿದ ಪೊಲೀಸರು ಆಕೆಯನ್ನ ಸಂಪರ್ಕಿಸಿ ಮಾಹಿತಿ ಪಡೆದು ಆರೋಪಿಯನ್ನು ಭಾನುವಾರ ಬಂಧಿಸಿದ್ದಾರೆ.

ಇದನ್ನೂ ಓದಿ: ದರೋಡೆಗೆ ಹೊಂಚು ಹಾಕಿದ್ದವರ ಹೆಡೆಮುರಿ ಕಟ್ಟಿದ ಜಗಳೂರು ಪೊಲೀಸರು.. ನಿಧಿಗಾಗಿ ಶೋಧ ಮಾಡ್ತಿದ್ದ 6 ಜನರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.