ETV Bharat / state

Bengaluru crime: ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ.. ಸಿಲಿಕಾನ್​ ಸಿಟಿಯಲ್ಲಿ ನಕಲಿ ಐಪಿಎಸ್ ಅಧಿಕಾರಿ ಬಂಧನ

author img

By

Published : Jun 11, 2023, 10:17 PM IST

ವಂಚನೆ ಮಾಡುತ್ತಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನು ಕಾಟನ್‌ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಕಲಿ ಐಪಿಎಸ್ ಅಧಿಕಾರಿ ಬಂಧನ
ನಕಲಿ ಐಪಿಎಸ್ ಅಧಿಕಾರಿ ಬಂಧನ

ಬೆಂಗಳೂರು : ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಹಲವರಿಗೆ ವಂಚನೆ ಮಾಡಿದ್ದ ನಕಲಿ ಐಪಿಎಸ್ ಅಧಿಕಾರಿಯೊಬ್ಬರನ್ನು ಕಾಟನ್‌ಪೇಟೆ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ದೂರು ಮೂಲದ ವಿಶುಕುಮಾರ್ ಬಂಧಿತ ಆರೋಪಿ. ಮಲ್ಲೇಶ್ವರದ ನಿವಾಸಿ ಶ್ರೀನಿವಾಸ್ ಎಂಬುವರು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ ಆರೋಪಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಮತ್ತು ವರ್ಗಾವಣೆ ಮಾಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದರು. ಇದೇ ರೀತಿ ಮಲ್ಲೇಶ್ವರ ನಿವಾಸಿ ಶ್ರೀನಿವಾಸ್ ಅವರಿಗೆ ತಾನು ಸಿಸಿಬಿ ಅಧಿಕಾರಿ ಎಂದು ಪರಿಚಯಿಸಿಕೊಂಡು ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ. ಸದ್ಯ ನನಗೆ ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿ 25 ಲಕ್ಷ ರೂ. ಪಡೆದುಕೊಂಡಿದ್ದರಂತೆ.

ಕೆಲವು ದಿನಗಳ ಬಳಿಕ ಹಣ ವಾಪಸ್ ಕೊಡುವಂತೆ ಕೇಳಿದ್ದಾಗ ನನ್ನನ್ನೇ ದುಡ್ಡು ಕೇಳುತ್ತಿಯಾ, ಒದ್ದು ಒಳಗೆ ಹಾಕುತ್ತೇನೆ ಎಂದು ಧಮ್ಕಿ ಹಾಕಿದ್ದರು. ಆಗ ಅನುಮಾನ ಬಂದು ಸಿಸಿಬಿ ಪೊಲೀಸರ ಬಳಿ ಹೋಗಿ ಈತನ ಬಗ್ಗೆ ವಿಚಾರಿಸಿದ್ದಾಗ ಆರೋಪಿಯ ಬಣ್ಣ ಬಯಲಾಗಿದೆ. ಬಳಿಕ ತಾವು ಮೋಸ ಹೋಗಿರುವುದನ್ನು ಅರಿತ ಶ್ರೀನಿವಾಸ್ ಈ ಸಂಬಂಧ ಕಾಟನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ವಿಶುಕುಮಾರ್ ವರ್ಗಾವಣೆ ದಂಧೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದರು. ತನ್ನ ಹೆಸರನ್ನು ಭುವನ್ ವಿ. ಕುಮಾರ್ ಎಂದು ಬದಲಿಸಿಕೊಂಡು ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಎಲ್ಲರಿಗೂ ಪರಿಚಯ ಮಾಡಿಕೊಂಡಿದ್ದನು. ಅಲ್ಲದೆ, ತನ್ನ ಸಂಬಂಧಿಕರು ಹಿರಿಯ ಐಪಿಎಸ್ ಅಧಿಕಾರಿಗಳಿದ್ದಾರೆ. ಅವರ ಮೂಲಕ ವರ್ಗಾವಣೆ ಮಾಡಿಸಿಕೊಡುತ್ತೇನೆ ಮತ್ತು ಒಳ್ಳೆ ಕಡೆ ಪೋಸ್ಟಿಂಗ್ ಕೊಡಿಸುತ್ತೇನೆ ಎಂದು ನಂಬಿಸುತ್ತಿದ್ದ. ಈತನ ಮಾತಿಗೆ ಮರುಳಾದ ಕೆಲವು ಪೊಲೀಸರು ಪೋಸ್ಟಿಂಗ್ ಮಾಡಿಕೊಡಲು ಹಣ ನೀಡಿದ್ದಾರೆ.

ಹೀಗೆ ಸುಮಾರು ಒಂದೂವರೆ ಕೋಟಿಗೂ ಅಧಿಕ ಹಣವನ್ನು ಪಡೆದಿದ್ದಾರೆ ಎನ್ನಲಾಗಿದೆ. ಹಣ ಪಡೆದ ಬಳಿಕ ಪೋಸ್ಟಿಂಗ್ ವಿಚಾರ ಕೇಳಿದಾಗ ಸಬೂಬು ಹೇಳುತ್ತಿದ್ದರು. ಇದೇ ವೇಳೆ ಈತನ ಬಗ್ಗೆ ಕಾಟನ್‌ಪೇಟೆ ಪೊಲೀಸರಿಗೆ ದೂರು ಬಂದಿದ್ದು, ಕಾರ್ಯಾಚರಣೆಗೆ ಇಳಿದ ಪೊಲೀಸರು ದೂರುದಾರನಿಂದ ಹಣ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಾರೆ. ಹಣ ಪಡೆಯಲು ಬಂದ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದೇ ರೀತಿ ಎಷ್ಟು ಜನರಿಗೆ ವಂಚಿಸಲಾಗಿದೆ? ಯಾರಿಗೆಲ್ಲ ವಂಚಿಸಿದ್ದಾರೆ? ಎಲ್ಲೆಲ್ಲಿ ಎಷ್ಟೆಷ್ಟು ವಂಚಿಸಿದ್ದಾರೆ ಎಂಬಿತ್ಯಾದಿ ಆಯಾಮಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯು ಸಿಸಿಬಿ ಹೆಸರು ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ನಿಧಿ ಸಿಕ್ಕಿದೆ ಎಂದು ನಂಬಿಸಿ ನಕಲಿ ಚಿನ್ನದ ನಾಣ್ಯ ನೀಡಿ ₹5 ಲಕ್ಷ ವಂಚನೆ‌; ಉಡುಪಿಯ ವ್ಯಕ್ತಿಯಿಂದ ಪೊಲೀಸರಿಗೆ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.