ETV Bharat / state

ಬೆಂಗಳೂರಿನಲ್ಲಿ ಸ್ನೇಹಿತನ ಮದುವೆಗೆ ಬಂದು ಬಡಿದಾಡಿಕೊಂಡ ಉದ್ಯಮಿಗಳ ಮಕ್ಕಳು! - ಪಕ್ಕದ ಮನೆಯ ಸ್ನಾನದ ಗೃಹ ಇಣುಕಿದ ಯುವಕ

ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಉದ್ಯಮಿಗಳ ಮಕ್ಕಳಿಬ್ಬರು ಹೊಡೆದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಕುರಿತು ಆರ್.ಟಿ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

bengaluru
ಬೆಂಗಳೂರು
author img

By

Published : Jun 11, 2023, 2:17 PM IST

ಬೆಂಗಳೂರು : ಸ್ನೇಹಿತನ ಮದುವೆ ರಿಸೆಪ್ಶನ್​ಗೆ ಬಂದಿದ್ದ ಉದ್ಯಮಿಗಳ ಮಕ್ಕಳು ಮದ್ಯದ ಅಮಲಿನಲ್ಲಿ ಬಡಿದಾಡಿಕೊಂಡ ಘಟನೆ ಶನಿವಾರ ಬೆಳಗಿನ ಜಾವ ಹೆಬ್ಬಾಳದ ಹೋಟೆಲ್​ವೊಂದರಲ್ಲಿ ನಡೆದಿದೆ. ಬಿಯರ್ ಬಾಟಲಿಯಿಂದ ತನ್ನ ತಲೆಗೆ ಹೊಡೆಯಲಾಗಿದೆ ಎಂದು ಆರೋಪಿಸಿರುವ ದರ್ಶನ್ ಗೋವಿಂದರಾಜು ಎಂಬಾತ ಆರ್.ಟಿ.ನಗರ ಠಾಣೆಯಲ್ಲಿ ವೇದಾಂತ್ ದುಗಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದರ್ಶನ್ ಗೋವಿಂದರಾಜು ಅವರು ಉದ್ಯಮಿ ಹಾಗೂ ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಅವರ ಪುತ್ರ. ಹಾಗೆಯೇ, ವೇದಾಂತ್ ದುಗಾರ್ ಅವರು ವಿಎಆರ್ ಫೆಸಿಲಿಟೀಸ್ ಮಾಲೀಕ ಸಂಜಯ್ ದುಗಾರ್ ಮಗ. ವೇದಾಂತ್ ದುಗಾರ್ ಮತ್ತು ದರ್ಶನ್ ಇಬ್ಬರು ಸ್ನೇಹಿತರು. ಕಳೆದ ಕೆಲ ದಿನದ ಹಿಂದೆ ರೆಸ್ಟೋರೆಂಟ್​ವೊಂದರಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾಗ ದರ್ಶನ್, ವೇದಾಂತ್ ದುಗಾರ್​ನನ್ನು ಮಾತನಾಡಿಸದೇ ಹೋಗಿದ್ದನಂತೆ. ಶನಿವಾರ ಬೆಳಗ್ಗೆ ಫೋರ್ ಸೀಸನ್ ಹೋಟೆಲ್​ನಲ್ಲಿ ಪುನಃ ಮುಖಾಮುಖಿಯಾದಾಗ ಅದೇ ವಿಚಾರವಾಗಿ ಕಿರಿಕ್ ಆರಂಭವಾಗಿದೆ‌. "ಎಲ್ಲರೂ ನನ್ನನ್ನು ಮಾತನಾಡಿಸ್ತಾರೆ, ನೀನ್ಯಾಕೆ ಮಾತನಾಡಿಸಲ್ಲ? ಎಂದು ದರ್ಶನ್ ಬಳಿ ವೇದಾಂತ್ ದುಗಾರ್ ಪ್ರಶ್ನಿಸಿದ್ದಾನೆ. ಈ ವೇಳೆ ದರ್ಶನ್, 'ಅದು ನನ್ನಿಷ್ಟ ಎಂದಿದ್ದಾನೆ". ದರ್ಶನ್ ಮಾತನಾಡುತ್ತಿದ್ದಂತೆ ಬಿಯರ್ ಬಾಟಲಿಯಿಂದ ವೇದಾಂತ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಪಾರ್ಕಿಂಗ್ ವಿಚಾರಕ್ಕೆ ಗಲಾಟೆ : ಯಾದಗಿರಿಯಲ್ಲಿ ಜಗಳ ಬಿಡಿಸಲು ಬಂದ ವ್ಯಕ್ತಿಗೆ ಚೂರಿ ಇರಿದು ಕೊಲೆ

ಘಟನೆಯ ಬಳಿಕ ವೇದಾಂತ್ ಮುಂಬೈಗೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದು, ಆರ್.ಟಿ. ನಗರ ಠಾಣೆಯಲ್ಲಿ ವೇದಾಂತ್ ದುಗಾರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹಳೆ ವೈಷಮ್ಯ : ಕಾರು ನಿಲ್ಲಿಸುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಪಕ್ಕದ ಮನೆಯ ಸ್ನಾನಗೃಹ ಇಣುಕಿದ ಯುವಕ : ಇನ್ನೊಂದೆಡೆ, ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವಾಗ ಇಣುಕಿ ನೋಡುತ್ತಿದ್ದ ವಿಕೃತ ಮನಸ್ಥಿತಿಯ ಆರೋಪಿಯನ್ನು ಮಾರತ್​ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ನಿತಿನ್ ಬಂಧಿತ ಆರೋಪಿ. ಜೂನ್ 9 ರಂದು ಮಧ್ಯಾಹ್ನ 1.35ರ ಸುಮಾರಿಗೆ ಮಾರತ್​ಹಳ್ಳಿಯ ಮುನ್ನೇಕೊಳಲುನಲ್ಲಿ ಘಟನೆ ನಡೆದಿತ್ತು.

ಇದನ್ನೂ ಓದಿ : ಚರಂಡಿ ನೀರು ಹರಿಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ : ಗಾಯಾಳುಗಳು ಆಸ್ಪತ್ರೆಗೆ ದಾಖಲು

ಮಹಿಳೆ ವಾಸವಿದ್ದ ಮನೆಯ ಪಕ್ಕದಲ್ಲಿಯೇ ಆರೋಪಿ ವಾಸವಿದ್ದ. ಮಧ್ಯಾಹ್ನ ದೂರುದಾರ ಮಹಿಳೆ ಸ್ನಾನ ಮಾಡುತ್ತಿದ್ದಾಗ ಆರೋಪಿಯು ಕಿಟಕಿಯಿಂದ ಇಣುಕಿ ನೋಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಆರೋಪಿಯನ್ನು ಕಂಡ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ತಕ್ಷಣ ಕುಟುಂಬಸ್ಥರು ನಿತಿನ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ‌.

ಇದನ್ನೂ ಓದಿ : ಬೈಕ್ ಪಾರ್ಕ್ ವಿಚಾರಕ್ಕೆ ಗಲಾಟೆ : ಯುವಕನ ಕೈಕಾಲು ಕಟ್ಟಿ ಹತ್ಯೆ ಮಾಡಿದ ರೂಮ್‌ಮೇಟ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.