ETV Bharat / state

Bengaluru crime: ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಸಂಚು.. ಕುಖ್ಯಾತ ರೌಡಿಗಳ ವಿರುದ್ಧ ಎಫ್ಐಆರ್ - ಈಟಿವಿ ಭಾರತ್​ ಕನ್ನಡ ನ್ಯೂಸ್

ಬೆಂಗಳೂರಿನ ರೌಡಿಗಳಾದ ಸೈಕಲ್ ರವಿ, ಬೇಕರಿ ರಘು ಮತ್ತು ಸಹಚರರ ವಿರುದ್ಧ ಕೊಲೆ ಯತ್ನ ಪ್ರಕರಣ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಸಂಚು
ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಸಂಚು
author img

By ETV Bharat Karnataka Team

Published : Aug 23, 2023, 3:46 PM IST

ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಹತ್ಯೆಗೆ ಸಂಚು ರೂಪಿಸಿರುವ ಆರೋಪದಡಿ ಕುಖ್ಯಾತ ರೌಡಿ ಆಸಾಮಿಗಳಾದ ಸೈಕಲ್ ರವಿ, ಬೇಕರಿ ರಘು ಮತ್ತು ಸಹಚರರ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಗಜೇಂದ್ರ ಎಂಬುವವರು ದೂರು ನೀಡಿದ್ದಾರೆ.

ನಗರದಲ್ಲಿ ರೌಡಿ ಚಟುವಟಿಕೆಗಳು, ದ್ವೇಷದ ಆಕ್ರಮಣ, ಹತ್ಯೆ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಇತ್ತೀಚಿಗೆ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡಲಾರಂಭಿಸಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಹನುಮಂತನಗರ ಠಾಣಾ ವ್ಯಾಪ್ತಿಯ ರೌಡಿ ಬೇಕರಿ ರಘು ಎಂಬಾತನನ್ನು ಕರೆಸಿದ್ದ ಸಿಸಿಬಿ ಪೊಲೀಸರು, ವಿಚಾರಣೆ ನಡೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು.

ಆದರೆ ಮಾರನೇ ದಿನ ಅಂದರೆ ಆಗಸ್ಟ್ 20 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಭಾನುವಾರ ಗಜೇಂದ್ರ ಅವರು ರಾಮಚಂದ್ರಪುರ ಪಾರ್ಕ್ ಬಳಿ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಕೆಲವರು ಗಜೇಂದ್ರ ಅವರ ಹತ್ಯೆಗೆ ಯತ್ನಿಸಿದ್ದರು. ಈ ಸಂದರ್ಭದಲ್ಲಿ ತಪ್ಪಿಸಿಕೊಂಡು ಬಂದ ಗಜೇಂದ್ರ ಅವರು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ 'ಸೈಕಲ್ ರವಿ ಮತ್ತು ಬೇಕರಿ ರಘು ಮುಂದೆ ಕಾರಿನಲ್ಲಿದ್ದು, ಅವರು ಕೊಲೆ ಮಾಡಲು ಹೇಳಿದ್ದಾರೆ ಎಂದು ದೂರು ನೀಡಿದ್ದಾರೆ. ಸದ್ಯ ಈ ದೂರಿನನ್ವಯ ಪ್ರಕರಣ ದಾಖಲಿಸಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಶೀಲ ಶಂಕಿಸಿ ಪತ್ನಿಯ ಹತ್ಯೆ : ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಪತಿರಾಯನೊಬ್ಬ ಪೊಲೀಸ್ ಠಾಣೆಗೆ ಹೋಗಿ‌ ತಾನೇ ಶರಣಾಗಿದ್ದ ಘಟನೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ನಗರದ ಕೆಎಸ್‌ಆರ್‌ಟಿಸಿ ಲೇಔಟ್ ನಿವಾಸಿ ಲೋಕೇಶ್ ಆರಾಧ್ಯ ಆರೋಪಿ, ಪತ್ನಿ ಪಲ್ಲವಿ ಹತ್ಯೆಯಾದ ಮಹಿಳೆ. 9 ವರ್ಷಗಳ ಹಿಂದೆ ಮದುವೆಯಾಗಿದ್ದ ಲೋಕೇಶ್ ಮತ್ತು ಪಲ್ಲವಿಗೆ 7 ವರ್ಷದ ಪುತ್ರನಿದ್ದಾನೆ. ಆರೋಪಿ ಪತಿ ಲೋಕೇಶ್ ಆಗಾಗ್ಗೆ ಹೆಂಡತಿಯ ಶೀಲವನ್ನು ಶಂಕಿಸಿ ಜಗಳ ಮಾಡುತ್ತಿದ್ದ. ಹಲವು ಬಾರಿ ಕುಟುಂಬಸ್ಥರು ಸಂಧಾನ ನಡೆಸಿ ಜಗಳವನ್ನು ತಣಿಸಿದ್ದರು. ಆದರೆ, ಜೂನ್​ 15 ರಂದು ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಇಬ್ಬರು ಮಹಿಳೆಯ ಹತ್ಯೆಗೆ ಯತ್ನ : ವ್ಯಕ್ತಿಯೊಬ್ಬ ಮಹಿಳೆಯರಿಬ್ಬರನ್ನು ಉಪಾಯದಿಂದ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕತ್ತು ಬಿಗಿದು ಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಸಮೀಪ ಮಂಗಳವಾರ ನಡೆದಿದೆ. ಬಡಗನ್ನೂರು ಗ್ರಾಮದ ಸುರೇಖಾ (54) ಮತ್ತು ಗೋಳಿತ್ತೊಟ್ಟುವಿನ ಗಿರಿಜಾ (52) ಹಲ್ಲೆಗೊಳಗಾದ ಮಹಿಳೆಯರಾಗಿದ್ದಾರೆ. ಈ ಸಂಬಂಧ ಸುಳ್ಯದ ಆರೋಪಿ ಸುರೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಸಂಪ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಕೊಲೆ ಪ್ರಕರಣದಲ್ಲಿ ತಂದೆ, ಮಗ ಜೈಲು: ಮನನೊಂದ ತಾಯಿ ನೇಣಿಗೆ ಶರಣು, ಜೈಲಿನಲ್ಲೇ ತಂದೆಗೆ ಹೃದಯಾಘಾತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.