ETV Bharat / state

ಬೆಂಗಳೂರು ಜೋಡಿ ಕೊಲೆ ಕೇಸ್: ಜಿ-ನೆಟ್ ಮಾಲೀಕನ ಬಂಧನ; ಸಿಸಿಟಿವಿಯಲ್ಲಿ ಆರೋಪಿಗಳ ಚಲನವಲನ ಸೆರೆ

ಬೆಂಗಳೂರಿನ ಅಮೃತಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಎಂಡಿ ಹಾಗೂ ಸಿಇಒ ಕೊಲೆ ಪ್ರಕರಣ ಸಂಬಂಧ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಅಮೃತಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದರು.

another-accused-arrested-in-bengaluru-double-murder-case
ಜೋಡಿ ಕೊಲೆ ಪ್ರಕರಣ: ಸುಪಾರಿ ನೀಡಿದ ಜಿ-ನೇಟ್ ಮಾಲೀಕನ ಬಂಧನ: ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
author img

By

Published : Jul 13, 2023, 10:29 AM IST

Updated : Jul 13, 2023, 12:28 PM IST

ಬೆಂಗಳೂರು ಜೋಡಿ ಕೊಲೆ ಕೇಸ್: ಜಿ-ನೆಟ್ ಮಾಲೀಕನ ಬಂಧನ; ಸಿಸಿಟಿವಿಯಲ್ಲಿ ಆರೋಪಿಗಳ ಚಲನವಲನ ಸೆರೆ

ಬೆಂಗಳೂರು : ನಗರವನ್ನೇ ಬೆಚ್ಚಿಬೀಳಿಸಿದ್ದ ಜೋಡಿ‌ ಕೊಲೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಕೊಲೆಗೀಡಾದ ಎಂ.ಡಿ ಹಾಗೂ ಸಿಇಒ ಈ ಹಿಂದೆ ಕೆಲಸ‌ ಮಾಡುತ್ತಿದ್ದ ಕಂಪನಿ ಮಾಲೀಕನನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಅರುಣ್ ಕುಮಾರ್ ಬಂಧಿತ ಆರೋಪಿ.

ಅರುಣ್ ಕುಮಾರ್ ಜಿ-ನೆಟ್ ಕಂಪನಿ ಮಾಲೀಕನಾಗಿದ್ದರು. ಜಿ-ನೆಟ್ ಕಂಪನಿಯಲ್ಲಿ ಫಣೀಂದ್ರ ಹೆಚ್ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿನು ಕುಮಾರ್ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. 8 ತಿಂಗಳ ಹಿಂದೆ ಫಣೀಂದ್ರ ಹಾಗೂ ವಿನು ಕುಮಾರ್ ಕೆಲಸ ತೊರೆದು ಅಮೃತಹಳ್ಳಿಯಲ್ಲಿ ತಮ್ಮದೇ ಆದ ಹೊಸ ಕಂಪನಿ‌ ಸ್ಥಾಪಿಸಿದ್ದರು. ಹೊಸ ಕಂಪನಿ ಸ್ಥಾಪನೆಯಿಂದ ಅರುಣ್ ಕುಮಾರ್​ಗೆ ವ್ಯವಹಾರದಲ್ಲಿ ನಷ್ಟವಾಗಿತ್ತು. ಇದೇ ಕಾರಣಕ್ಕೆ ಜೋಕರ್ ಫೆಲಿಕ್ಸ್ ಅಲಿಯಾಸ್ ಶಬರೀಶ್ ಸುಪಾರಿ ಕೊಟ್ಟು ಹತ್ಯೆ‌ ಮಾಡಿಸಿದ್ದಾರೆ ಎಂಬ ಅನುಮಾನದ ಮೇರೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಕೃತ್ಯದಲ್ಲಿ ಶಾಮೀಲಾಗಿರುವುದರಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆಸರು ಬದಲಿಸಿಕೊಂಡಿದ್ದ: ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿ ಫೆಲಿಕ್ಸ್​ನ ಒಂದೊಂದೇ ಕಥೆ ಬೆಳಕಿಗೆ ಬರುತ್ತಿದೆ. ಶಿವಮೊಗ್ಗ ನಿವಾಸಿಯಾಗಿದ್ದ ಶಬರೀಶ್ ಬೆಂಗಳೂರಿಗೆ ಬಂದು ಫೆಲಿಕ್ಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ರ್ಯಾಪರ್ ಹಾಗೂ ರೀಲ್ಸ್ ನಲ್ಲಿ ಹುಚ್ಚುತನದ ವರ್ತನೆಯಿಂದಲೇ ಫೇಮಸ್ ಆಗಿದ್ದ. ಜಿನೆಟ್ ನಲ್ಲಿ ಕೆಲಸ ಬಿಟ್ಟ ಬಳಿಕ ಮುಂಬೈ ಮತ್ತು ಕಾಶಿಯಲ್ಲಿ ಕೆಲಸ ಮಾಡುತ್ತಿದ್ದ. ವಿಚಿತ್ರವಾಗಿ ವೇಷ ತೊಟ್ಟು ರೀಲ್ಸ್ ಮಾಡ್ತಿದ್ದ. ಇದೇ ಕಾರಣಕ್ಕೆ ಹೆಚ್ಚಾಗಿ ಫೆಲಿಕ್ಸ್ ಸ್ಮಶಾನದಲ್ಲಿ ವಾಸ, ಗಾಂಜಾ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ.

ಆರೋಪಿಗಳು ಎಸ್ಕೇಪ್ ಆಗುವ ಸಿಸಿಟಿವಿ ದೃಶ್ಯ : ಏರೋನಿಕ್ಸ್ ಕಂಪನಿ ಎಂಡಿ ಫಣೀಂದ್ರ ಹಾಗೂ ಸಿಇಒ ವಿನುಕುಮಾರ್ ಅವರನ್ನು ಅಮೃತಹಳ್ಳಿಯ ಅವರ ಕಚೇರಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಂತಕರು ಎಸ್ಕೇಪ್ ಆಗಿದ್ದೇ ರೋಚಕವಾಗಿದೆ. ಬೈಕ್‌ನಲ್ಲಿ ಬಂದಿದ್ದ ಹಂತಕರು ಬಳಿಕ ಬರಿಗಾಲಲ್ಲೇ ಎಸ್ಕೇಪ್ ಆಗಿದ್ದರು. ಒಂದು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದು ದಾರಿಗಳ ಬಗ್ಗೆ ಸಂಚು ರೂಪಿಸಿಕೊಂಡಿದ್ದರು. ಹಿಂಬದಿ ಡೋರ್ ತೆಗೆದು ಕಾಂಪೌಂಡ್ ಹಾರಿ ಎಸ್ಕೇಪ್ ಅಲ್ಲಿಂದ ಮುಖ್ಯರಸ್ತೆಗೆ ಬಂದು ಓಲಾ ಬುಕ್ ಮಾಡಿದ್ದ ಅವರು ಏರಿಯಾ ಬಿಟ್ಟಿದ್ದರು. ಕೊಲೆ ನಂತರ ಫೆಲಿಕ್ಸ್ ಅಂಡ್ ಟೀಂ ಪರಾರಿ ಆಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ವಿನಯ್ ಕುಮಾರ್ ರೆಡ್ಡಿ ತನ್ನ ಪ್ಯಾಂಟ್​​ನಲ್ಲಿ ಡ್ರ್ಯಾಗರ್ ಇಟ್ಟುಕೊಂಡು ಎಸ್ಕೇಪ್ ಆಗುತ್ತಿದ್ದಾಗ ಡ್ರ್ಯಾಗರ್ ಇಟ್ಟುಕೊಳ್ಳಲು ಸಂತೋಷ್ ಸಹಾಯ ಮಾಡಿದ್ದಾನೆ. ಏನೂ ಗೊತ್ತಿಲ್ಲದಂತೆ ಜೋಕರ್ ಫೆಲಿಕ್ಸ್ ಹಿಂದೆ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಸಿಇಒ, ಎಂಡಿ ಜೋಡಿ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

Last Updated : Jul 13, 2023, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.