ETV Bharat / state

ಬೆಂಗಳೂರು: ತಾಯಿಯೊಂದಿಗೆ ಅನ್ಯೋನ್ಯವಾಗಿರುತ್ತಾನೆ ಎಂದು ಬಾಣಸಿಗನ ಹತ್ಯೆ.. ಕೊಲೆ ಬಳಿಕ ಆರೋಪಿ ನಾಪತ್ತೆ - ಬೆಂಗಳೂರು ಕ್ರೈಂ ನ್ಯೂಸ್​

Bengaluru crime: ತನ್ನ ತಾಯಿಯೊಂದಿಗೆ ಅನ್ಯೋನ್ಯವಾಗಿರುತ್ತಾನೆ ಎಂದು ಕೋಪಗೊಂಡ ಮಗ ಬಾಣಸಿಗನ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಬಾಣಸಿಗನ ಹತ್ಯೆ
ಬಾಣಸಿಗನ ಹತ್ಯೆ
author img

By

Published : Jul 29, 2023, 11:00 AM IST

ಬೆಂಗಳೂರು: ತಾಯಿಯೊಂದಿಗೆ ಅನ್ಯೋನ್ಯವಾಗಿ ಇದ್ದಾನೆ ಎಂದು ಆಕೆಯ ಮಗ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ತಡರಾತ್ರಿ ಮಾಗಡಿರಸ್ತೆಯ ಗೋಪಾಲಪುರದ ಮನೆಯೊಂದರಲ್ಲಿ ನಡೆದಿದೆ. ರವಿ ಭಂಡಾರಿ (44) ಎಂಬಾತನಿಗೆ ಚಾಕುವಿನಿಂದ ಇರಿದು ಹತ್ಯೆಗೈದಿರುವ ರಾಹುಲ್ ಎಂಬ ಯುವಕ ಪರಾರಿಯಾಗಿದ್ದಾನೆ.

ಮೃತ ರವಿ ಭಂಡಾರಿ ಕಳೆದ ಒಂದು ತಿಂಗಳಿನಿಂದ ಬಸವೇಶ್ವರ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿರುವ ಪಿಜಿಯೊಂದಲ್ಲಿ ಸಹೋದರನೊಂದಿಗೆ ಅಡುಗೆ ಕೆಲಸ ಮಾಡಿಕೊಂಡಿದ್ದ. ಅದೇ ಪಿಜಿಯಲ್ಲಿ ಪದ್ಮಾವತಿ ಎಂಬ ಮಹಿಳೆ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ತನ್ನ ತಾಯಿಯೊಂದಿಗೆ ರವಿ ಭಂಡಾರಿ ಅನ್ಯೋನ್ಯವಾಗಿರುತ್ತಾನೆ, ಮಾತನಾಡುತ್ತಿರುತ್ತಾನೆ ಎಂದು ಪದ್ಮಾವತಿಯ ಮಗ ರಾಹುಲ್ ಕೋಪಗೊಂಡಿದ್ದ.

ಶುಕ್ರವಾರ ಮಧ್ಯಾಹ್ನ 3:30ರ ಸುಮಾರಿಗೆ ಕೆಲಸದಲ್ಲಿದ್ದ ರವಿ ಭಂಡಾರಿಗೆ ಕರೆ ಮಾಡಿ‌ದ್ದ ರಾಹುಲ್, ಮಾತಾಡಬೇಕೆಂದು ತನ್ನ ಮನೆಗೆ ಕರೆಸಿಕೊಂಡಿದ್ದ. ಸಂಜೆ 5:30 ಆದರೂ ರವಿ ಭಂಡಾರಿ ಮರಳದಿದ್ದಾಗ ಆತನ ಸಹೋದರ ಸುರೇಶ್ ಭಂಡಾರಿ ಹಾಗೂ ಪದ್ಮಾವತಿ ಮನೆಗೆ ತೆರಳಿ ನೋಡಿದಾಗ ರವಿ‌ ಭಂಡಾರಿಯನ್ನ ಚಾಕುವಿನಿಂದ ಇರಿದು ಹತ್ಯೆಗೈದಿರುವುದು ತಿಳಿದು ಬಂದಿದೆ. ಸುರೇಶ್ ಭಂಡಾರಿ ನೀಡಿರುವ ದೂರಿನನ್ವಯ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋನ್ ಸ್ವಿಚ್ ಆಫ್ ಮಾಡಿಕೊಂಡಿರುವ ರಾಹುಲ್ ನಾಪತ್ತೆಯಾಗಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ ಎಂದು‌ ಪೊಲೀಸರು ತಿಳಿಸಿದ್ದಾರೆ‌.

ಪತ್ನಿಯ ಹತ್ಯೆಗೈದ ಪತಿ.. ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ಪತಿ ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಕಳೆದ ಎರಡು ದಿನಗಳ ಹಿಂದೆ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಶಿವಾನಂದ ನಗರದಲ್ಲಿ ನಡೆದಿತ್ತು. ಗೀತಾ (33) ಎಂಬಾಕೆಯ ತಲೆಗೆ ಬಲವಾದ ಆಯುಧದಿಂದ ಹೊಡೆದು, ಕೊಲೆ ಮಾಡಿ ಬಳಿಕ ಆರೋಪಿ ಪತಿ ಶಂಕರ್ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ.

13 ವರ್ಷಗಳ ಹಿಂದೆ ಶಂಕರ್ ಹಾಗೂ ಹೊಸೂರು ಮೂಲದ ಗೀತಾಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಗೀತಾಳಿಗೆ ಬೇರೊಬ್ಬನೊಂದಿಗೆ ವಿವಾಹೇತರ ಸಂಬಂಧವಿದೆ ಎಂದು ಇತ್ತೀಚೆಗೆ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಇಬ್ಬರು ಮತ್ತೆ ಜಗಳವಾಡಿದ್ದರು. ಕೋಪಕೊಂಡ ಪತಿ ಗೀತಾಳ ಹತ್ಯೆಗೈದು ಆಕೆಯ ತಾಯಿಗೆ ಕರೆ ಮಾಡಿ, ಹತ್ಯೆಗೈದಿರುವುದಾಗಿ ತಿಳಿಸಿ ಕರೆ ಸ್ಥಗಿತಗೊಳಿಸಿದ್ದ. ಗೀತಾಳ ತಾಯಿ ಹೊಸೂರಿನಿಂದ ಮಗಳ ಮನೆಗೆ ಬಂದು ನೋಡಿದಾಗ ಕೊಲೆಯಾಗಿರುವುದು ತಿಳಿದು ಬಂದಿತ್ತು.

ಪತ್ನಿಗೆ ಬೇರೆ ಸಂಬಂಧವಿದೆ ಎಂದು ಬೇಸತ್ತಿದ್ದ ಶಂಕರ್, ಹತ್ಯೆಯ ಬಳಿಕ ತನ್ನ ಬಳಿ ಆಕೆಯ ಅಕ್ರಮ ಸಂಬಂಧದ ವಿಡಿಯೋಗಳಿವೆ. ತಾನು ಪೊಲೀಸರ ಮುಂದೆ ಶರಣಾಗುತ್ತಿದ್ದೇನೆ. ಮಕ್ಕಳನ್ನು ನೀವು‌ ನೋಡಿಕೊಳ್ಳಬೇಕು ಎಂದು ತಮ್ಮ ಬಳಿ ಹೇಳಿ ತೆರಳಿದ್ದಾನೆ ಎಂದು ಸ್ಥಳೀಯರು ಹೇಳಿದ್ದರು.

ಇದನ್ನೂ ಓದಿ: ಪ್ರೀತಿಗೆ ಅಡ್ಡಿ ಆರೋಪ.. ಕೊಡಲಿಯಿಂದ ಪತಿಯನ್ನೇ ತುಂಡರಿಸಿ ಕೊಂದ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.