ಬೆಂಗಳೂರು : ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಕ್ಲಾಸಿಕ್ ಅಪಾರ್ಟ್ಮೆಂಟ್ನಿಂದ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮೃತಳು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್, 'ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. 14 ವರ್ಷದ ಹುಡುಗಿ ಜೆಸ್ಸಿಕಾ ಎಂಬುವವರು 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಮಾಹಿತಿ ಬರುತ್ತದೆ. ತದನಂತರ ನಮ್ಮ ಸಿಬ್ಬಂದಿ ತಕ್ಷಣವೇ ಅಲ್ಲಿಗೆ ಹೋಗಿ ವಿಚಾರಣೆ ಮಾಡುತ್ತಾರೆ. ಆತ್ಮಹತ್ಯೆಗೆ ಕಾರಣ ಏನು ಅಂತಾ ನಮಗೆ ಗೊತ್ತಾಗಿಲ್ಲ. ತಂದೆ ಸಾಫ್ಟ್ವೇರ್ ಇಂಜಿನಿಯರ್, ತಾಯಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಇಂದು ಬೆಳಗ್ಗೆ ಬಾಲಕಿ ಶಾಲೆಗೆ ಹೋಗಿ ತರಗತಿಗೆ ಕೂರದೆ ಪುನಃ ಮನೆಗೆ ವಾಪಸ್ ಬಂದಿರುತ್ತಾರೆ. ನಂತರ ಟೀಚರ್ ತಾಯಿಗೆ ಕರೆ ಮಾಡಿ ಮಗಳು ಶಾಲೆಗೆ ಬಂದಿಲ್ಲ ಅಂತಾ ಹೇಳಿದ್ದಾರೆ. ಇದು ಸುಮಾರು 10.20ಕ್ಕೆ ಘಟನೆ ನಡೆದಿದೆ. ಈ ಘಟನೆಗೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ.
ಈ ಬಗ್ಗೆ ಪೋಷಕರನ್ನು ಕೇಳಿದ್ರೆ, ಅವರು ಡಿಪ್ರೆಷನ್ನಲ್ಲಿದ್ದಾರೆ. ಬಹಳ ಅಳುತ್ತಿದ್ದಾರೆ. ಅವರು ಏನೂ ಹೇಳುತ್ತಿಲ್ಲ. ಬಹುಶಃ ನಾವು ಅವರನ್ನು ಇನ್ನೂ ತನಿಖೆ ಮಾಡಬೇಕಾಗುತ್ತದೆ. ಸದ್ಯಕ್ಕೆ ಪೋಷಕರು ಕೂಡಾ ಸರಿಯಾದ ಕಾರಣ ಕೊಡುತ್ತಿಲ್ಲ. ಆದರೆ ಪ್ರಾಥಮಿಕವಾಗಿ ನಮಗೆ ತಿಳಿದು ಬಂದಿರುವುದು ಏನೆಂದರೆ, ಬಾಲಕಿ ಶಾಲೆಗೆ ಹೋಗುವುದಾಗಿ ಹೇಳಿ ತರಗತಿಗೆ ತೆರಳದೆ ಮರಳಿ ಮನೆಗೆ ಬರುತ್ತಿರುತ್ತಾಳೆ. ಮನೆಯಲ್ಲಿ ತಂದೆ ತಾಯಿ ಬೆಳಗ್ಗೆಯೇ ಬೇಗ ಎದ್ದು ಕೆಲಸಕ್ಕೆ ಹೋಗುವಂತಹದ್ದು. ಅವರ ಅಕ್ಕ ಕೂಡಾ ಓದುವಂತಹದ್ದು, ಎಲ್ಲರೂ ಕೂಡಾ ಮನೆಯಿಂದ ಹೊರಗೆ ಹೋದಾಗ ಈಕೆ ಒಬ್ಬಳೆ ಮನೆಯಲ್ಲಿ ಇರುತ್ತಿದ್ದಳು ಎಂಬುದು ಗೊತ್ತಾಗಿದೆ. ಹಾಗಾಗಿ ಶಾಲೆಯಿಂದ ಯಾಕೆ ಮರಳಿ ಬರುತ್ತಿದ್ದಳು ಎಂಬುದು ಸರಿಯಾಗಿ ಗೊತ್ತಾಗಿಲ್ಲ. ಇವರು ಮೂಲತಃ ತಮಿಳುನಾಡಿನವರು ಎಂಬುದು ಗೊತ್ತಾಗಿದೆ. ಇತ್ತೀಚಿಗೆ ಮೂರು ವರ್ಷದಿಂದ ಇಲ್ಲಿಗೆ ಬಂದು ನೆಲೆಸಿದ್ದರು ಎಂಬುದು ಗೊತ್ತಾಗಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru crime: ಕುಕ್ಕರ್ನಿಂದ ಹೊಡೆದು ಪ್ರೇಯಸಿಯ ಹತ್ಯೆಗೈದ ಪ್ರಿಯಕರ