ETV Bharat / state

Bengaluru crime: ವಿಷವುಣಿಸಿ 18 ಬೀದಿ ನಾಯಿಗಳ ಹತ್ಯೆ.. ಎಫ್ಐಆರ್ ದಾಖಲು - ಬೀದಿ ನಾಯಿಗಳ ಹತ್ಯೆ

ಬೆಂಗಳೂರಿನಲ್ಲಿ ಸುಮಾರು ಹದಿನೆಂಟು ನಾಯಿಗಳಿಗೆ ವಿಷ ಉಣಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

dogs killed in Bengaluru
dogs killed in Bengaluru
author img

By

Published : Aug 14, 2023, 2:31 PM IST

ಬೆಂಗಳೂರು : ಬೀದಿ ಶ್ವಾನಗಳಿಗೆ ವಿಷವುಣಿಸಿ ಹತ್ಯೆಗೈದ ಅಮಾನವೀಯ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದುವರೆಗೂ ಹದಿನೆಂಟು ನಾಯಿಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನಿಮಲ್ ವೆಲ್​ಫೇರ್ ಆ್ಯಕ್ಟಿವಿಸ್ಟ್ ಒಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ ವಾರ್ಡ್ ಭಾಗದಲ್ಲಿ ನಾಯಿಗಳ ಶವಗಳು ಕಂಡು ಬಂದಿದ್ದು, ಬಹುತೇಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ನಾಯಿಗಳ ಮೃತ ದೇಹವನ್ನು ಹಗ್ಗ ಮತ್ತು ಚೀಲದಲ್ಲಿ ಹಾಕಿ ತುಂಬಿ ದುಷ್ಕರ್ಮಿಗಳು ಎಸೆದಿದ್ದಾರೆ. ಈ ಬಗ್ಗೆ ರಾಜರಾಜೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಶೀಲನೆಯಲ್ಲಿ ಪೊಲೀಸ್​ ಸಿಬ್ಬಂದಿ
ಪರಿಶೀಲನೆಯಲ್ಲಿ ಪೊಲೀಸ್​ ಸಿಬ್ಬಂದಿ

ಇದನ್ನೂ ಓದಿ: ಬೆಂಗಳೂರು: ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ- ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ರಸ್ತೆಯಲ್ಲಿ ನಿಂತಿದ್ದ ನಾಯಿಯೊಂದರ ಮೇಲೆ ವ್ಯಕ್ತಿಯೊಬ್ಬ ಕಾರು ಚಲಾಯಿಸಿ ವಿಕೃತಿ ಮೆರೆದಿದ್ದ ಘಟನೆ ಆಗಸ್ಟ್ 8ರಂದು ರಾತ್ರಿ ಬೆಳ್ಳಂದೂರು - ಇಬ್ಬಲೂರು ಮುಖ್ಯ ರಸ್ತೆಯಲ್ಲಿ ನಡೆದಿತ್ತು. ರಾತ್ರಿ 9:45ರ ಸುಮಾರಿಗೆ ಕಾರಿನಲ್ಲಿ ಬಂದಿದ್ದ ಆರೋಪಿ ಬೀದಿ ನಾಯಿ ರಸ್ತೆಯಲ್ಲಿ ನಿಂತಿರುವುದನ್ನ ನೋಡಿಯೂ ಸಹ ಉದ್ದೇಶಪೂರ್ವಕವಾಗಿ ಕಾರನ್ನ ಹರಿಸಿರುವುದು ರಸ್ತೆಯ ಪಕ್ಕದಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಪಾರ್ಕ್‌ ಮಾಡಿದ್ದ ಕಾರ್‌ನಲ್ಲಿ ನಾಯಿ ಲಾಕ್; ಕಿಟಕಿ ಮುರಿದು ರಕ್ಷಿಸಿದ ಯೋಧರು

ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಅನುಮಾನಾಸ್ಪದವಾಗಿ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಯಿ ಕಂಡುಬಂದಿತ್ತು. ಕಾರಿ​ನ ಕಿಟಕಿಯ ಗಾಜು ಒಡೆದು ಸಿಐಎಸ್​ಎಫ್​ ಯೋಧರು ಆ ನಾಯಿಯನ್ನು ರಕ್ಷಣೆ ಮಾಡಿದ್ದರು. ಅಲ್ಲದೇ ಘಟನೆ ಸಂಬಂಧ ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸಿದ ವ್ಯಕ್ತಿಯನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.