ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಆಯುಷ್ ಗುಪ್ತಾ ಹಾಗೂ ಪ್ರದೀಪ್ ಯಾದವ್ ನೆದರ್ಲೆಂಡ್ಸ್ ಮತ್ತು ವೆಸ್ಟ್ ಇಂಡಿಸ್ ನಡುವಣ ಪಂದ್ಯಕ್ಕೆ ಆನ್ಲೈನ್ ಮೂಲಕ ಬೆಟ್ಟಿಂಗ್ ಆಡಿಸುತ್ತಿದ್ದರು. ಈ ವೇಳೆ, ದಾಳಿ ಮಾಡಿದ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ ಅವರಿಂದ 10.45ಲಕ್ಷ ನಗದು ಹಾಗೂ ಮೂರು ಮೊಬೈಲ್ಗಳನ್ನ ಸೀಜ್ ಮಾಡಿದ್ದಾರೆ.
ಈ ಬಾರಿ ಐಪಿಎಲ್ ಸೀಸನ್ ವೇಳೆ ಹೆಚ್ಚಾಗಿ ಬೆಟ್ಟಿಂಗ್ ನಡೆದಿದ್ದು, ಸಿಸಿಬಿ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 2022 ಐಪಿಎಲ್ ಸೀಸನ್ನಲ್ಲಿ ಬೆಟ್ಟಿಂಗ್ ಸಂಬಂಧಿಸಿದಂತೆ ಒಟ್ಟು 29 ಕೇಸ್ ದಾಖಲಿಸಿ 33 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಒಟ್ಟಾರೆಯಾಗಿ ಆರೋಪಿಗಳಿಂದ 81 ಲಕ್ಷ ಸೀಜ್ ಮಾಡಲಾಗಿದೆ. ಇದರಲ್ಲಿ ನಗರದ ವೆಸ್ಟ್ ಮತ್ತು ಸೌತ್ ಡಿವಿಷನ್ನಲ್ಲಿ ಅತಿ ಹೆಚ್ಚು ಬೆಟ್ಟಿಂಗ್ ನಡೆದಿದೆ. ಬಸವನಗುಡಿ ಠಾಣಾ ವ್ಯಾಪ್ತಿಯೊಂದರಲ್ಲಿ ಆರು ಬೆಟ್ಟಿಂಗ್ ಕೇಸ್ ದಾಖಲಾಗಿದೆ.
ಓದಿ: ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತ್ತಿತ್ತು: ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ