ಬೆಂಗಳೂರು: ಕೆಪಿಎಲ್ ಕ್ರಿಕೆಟ್ನಲ್ಲಿ ಬೆಟ್ಟಿಂಗ್ ನಡೆದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಎರಡು ತಂಡಗಳ ನಾಲ್ವರು ಆಟಗಾರರ ವಿಚಾರಣೆ ನಡೆಸುತ್ತಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಹಿನ್ನೆಲೆಯಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಪಾಕ್ ಅವರನ್ನು ಸಿಸಿಬಿ ಬಂಧಿಸಿದ್ದು ವಿಚಾರಣೆ ನಡೆಯುತ್ತಿದೆ. ಈತ ನೀಡಿದ ಮಾಹಿತಿ ಮೇರೆಗೆ ಕೆಪಿಎಲ್ ತಂಡದಲ್ಲಿ ಭಾಗವಹಿಸುವ ತಂಡಗಳ ಪೈಕಿ ಇಬ್ಬರು ಆಟಗಾರರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.
ಅಲಿ ಜೊತೆಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ಆಟಗಾರರ ವಿಚಾರಣೆ ನಡೆಯುತ್ತಿದ್ದು, ಅವರು ಯಾವ ತಂಡದ ಪರ ಆಟವಾಡುತ್ತಿದ್ದರು? ಹಾಗು ಅವರ ಹೆಸರುಗಳ ಮಾಹಿತಿಯನ್ನು ಸಿಸಿಬಿ ಗೌಪ್ಯವಾಗಿಟ್ಟಿದೆ. ಪ್ರಕರಣದ ತನಿಖೆ ಮುಗಿದ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.