ETV Bharat / state

ಚುನಾವಣಾ ಪೂರ್ವ ಮೈತ್ರಿ.. ರಾಜ್ಯದ 215 ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಸಿಪಿಐ ಬೆಂಬಲ - ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸಿಪಿಐ ಬೆಂಬಲ ಘೋಷಿಸಿದೆ.

CPI support to Congress
ಸಿಪಿಐ ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿ
author img

By

Published : Apr 23, 2023, 2:56 PM IST

ಸಿಪಿಐ ಕಾಂಗ್ರೆಸ್ ಜಂಟಿ ಮಾಧ್ಯಮಗೋಷ್ಟಿ

ಬೆಂಗಳೂರು: ತಮ್ಮ ಪ್ರತಿನಿಧಿಗಳು ಸ್ಪರ್ಧಿಸಿರುವ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸುವ ನಿರ್ಧಾರವನ್ನು ಸಿಪಿಐ ಪ್ರಕಟಿಸಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಕಾಂಗ್ರೆಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಈ ಮಾಹಿತಿ ಪ್ರಕಟಿಸಲಾಯಿತು.

2023ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ 7 ಕ್ಷೇತ್ರಗಳಿಗೆ ಸಿಪಿಐ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಹಾಗೂ ಬಾಗೇಪಲ್ಲಿಯಲ್ಲಿ ಸ್ಪರ್ಧಿಸಿರುವ ಸಿಪಿಐ (ಎಂ) ಅಭ್ಯರ್ಥಿಗೆ ತಮ್ಮ ಬೆಂಬಲ ಸೂಚಿಸಿರುವ ಸಿಪಿಐ, ಉಳಿದ 215 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಿದೆ. ಇದನ್ನು ಅಧಿಕೃತವಾಗಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದೆ.

CPI support to Congress
ರಾಜ್ಯದ 215 ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಸಿಪಿಐ ಬೆಂಬಲ

40% ಸರ್ಕಾರ‌‌ ವಿರುದ್ಧ ಹೋರಾಟ: ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ "ಸಿಪಿಐ ಬಹುದೊಡ್ಡ ಇತಿಹಾಸ ಇದೆ. ಕಾರ್ಮಿಕ, ಬಡವರು ಪರ ಹೋರಾಟ ಮಾಡಿದ್ದಾರೆ. ನಮ್ಮ ಗುರಿ ಒಂದೇ, ಬಸವರಾಜ ಬೊಮ್ಮಾಯಿ 40% ಸರ್ಕಾರ‌‌ ವಿರುದ್ಧ ಹೋರಾಟ. 80 ಲಕ್ಷ ಹಣ ನೀಡಿ ಸಬ್ ಇನ್ಸ್​ಪೆಕ್ಟರ್ ಹುದ್ದೆ ಖರೀದಿಸಲು ಅಲ್ಲ. ಭ್ರಷ್ಟಾಚಾರ, ಲೂಟಿ ಹೊಡೆಯುತ್ತಿರುವ ಬಿಜೆಪಿ ವಿರುದ್ಧ ಹೋರಾಟ. ಸಂವಿಧಾನದ ರಕ್ಷಣೆ, ಸಮಾನತೆ, ಸಾಮಾಜಿಕ ನ್ಯಾಯ ಕೊಡಿಸಲು ಹೋರಾಟ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಹೋರಾಟ. ಸಿದ್ಧಾಂತ ಸ್ವಲ್ಪ ವ್ಯತ್ಯಾಸ ಇರಬಹುದು. ಆದ್ರೆ ನಮ್ಮ ಗುರಿ ಮಾತ್ರ ಬಡವರ ಪರ ನ್ಯಾಯ ನೀಡುವುದು" ಎಂದರು.

ಸಿಪಿಐ ಪಕ್ಷದವರು ರಾಜ್ಯದಲ್ಲಿ ಏಳು ಅಭ್ಯರ್ಥಿಗಳು ಹಾಕಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲ್ಲ. 215 ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದೆ. ರಾಜ್ಯದಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳ ಬೆಂಬಲ ಸಿಗಲಿದೆ. ಇದು ಕಾಂಗ್ರೆಸ್ ಗೆ ತುಂಬಾ ಸಹಾಯ ಆಗುತ್ತೆ. ಒಟ್ಟಿಗೆ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ. ಸಿಪಿಐ ಹಾಗೂ ಕಾಂಗ್ರೆಸ್ ಸಿದ್ಧಾಂದಲ್ಲಿ ಭಿನ್ನತೆ ಇರಬಹುದು. ಆದರೆ ನಮ್ಮ ಇಬ್ಬರ ಹೋರಾಟ ವಿಚಾರ ಒಂದೇ. ಕಾಂಗ್ರೆಸ್ ಗೆ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.

ಚುನಾವಣಾ ಪೂರ್ವ ಮೈತ್ರಿ ಘೋಷಣೆ: ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, "ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ 40% ಕಮಿಷನ್ ಆರೋಪವನ್ನು ಗುತ್ತಿಗೆದಾರರು ಮಾಡಿದ್ದಾರೆ. ಕೋಮು ಗಲಭೆಯಲ್ಲಿ ಸಾವು ಆದ್ರೆ ನೀಡುವ ಅನುದಾನದಲ್ಲಿ ತಾರತಮ್ಯ ಮಾಡಿದ್ದಾರೆ. ಧರ್ಮದ ಹೆಸರಿನಲ್ಲಿ ಸಿಎಂ ತಾರತಮ್ಯ ಮಾಡಿದ್ದಾರೆ. ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಮತೀಯವಾದ ಹೆಚ್ಚಿಸಿದ್ದಾರೆ. ಜನ ವಿರೋಧಿ ಬಿಜೆಪಿಯನ್ನ ಸೋಲಿಸುವುದು ನಮ್ಮ ಗುರಿ. ಜತೆಗೆ ಅತಂತ್ರ ಸ್ಥಿತಿ ವಿಧಾನಸಭೆ ತಡೆಯಲು ಸಿಪಿಐ ಕಾಂಗ್ರೆಸ್​ಗೆ ಬೆಂಬಲ ನೀಡಿದೆ. ನಾವು 7 ಕಡೆ ಸ್ಪರ್ಧೆ ಮಾಡಿದ್ದೇವೆ. ಮೇಲುಕೋಟೆಯಲ್ಲಿ ದರ್ಶನ ಪುಟ್ಟಣ್ಣಯ್ಯ ಗೆ ಸಿಪಿಐ ಬೆಂಬಲ ನೀಡಿದೆ‌. ಬಾಗೇಪಲ್ಲಿಯಲ್ಲಿ ಸಿಪಿಐಎಂ ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ ಬೆಂಬಲ ಕೊಡಲಾಗಿದೆ. ಕಾಂಗ್ರೆಸ್ ಜೊತೆಗೆ ಸಿಪಿಐ ಚುನಾವಣಾ ಮೈತ್ರಿ ಘೋಷಣೆ ಮಾಡುತ್ತಿದ್ದೇವೆ" ಎಂದರು.

ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಸುರ್ಜೇವಾಲ: ಲಕ್ಷ್ಮಣ ಸವದಿ ಡಿಸಿಎಂ ಆಗಿದ್ದವರು, ಲಿಂಗಾಯತ ಸಮುದಾಯದವರನ್ನು ನಾವಲ್ಲ ಹೊರಹಾಕಿದ್ದು. ಲಿಂಗಾಯತ ಸಿಎಂ ಆಗಿದ್ದ ಶೆಟ್ಟರ್ ರನ್ನು ಹೊರಹಾಕಿದ್ದು ನಾವಲ್ಲ. ಲಿಂಗಾಯತ ಮಾಜಿ ಸಿಎಂ, ಡಿಸಿಎಂ ಗೆ ಅವಮಾನ ಮಾಡಿದ್ದು ನಾವಲ್ಲ. ಲಿಂಗಾಯತ ಸಿಎಂ ರಾಜ್ಯ ಹಾಳು ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ರಾಜ್ಯ ಕೈ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಎಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಎಲ್ಲರೂ ಸಾಧನೆ ಮಾಡಿದ್ದವರು. ಬಿಜೆಪಿ ಶಾಸಕ ನೆಹರು ಓಲೇಕಾರ್​ ಅವರು ಬೊಮ್ಮಾಯಿ ಸರ್ಕಾರ 40% ಸರ್ಕಾರ ಎಂದು ಹೇಳಿದ್ದರು. ಓಲೇಕಾರ್ ಹೇಳಿದ್ದನ್ನೇ ಸಿದ್ದರಾಮಯ್ಯ ಹೇಳಿದ್ದಾರೆ. ಬೊಮ್ಮಾಯಿ ಅವರೇ ನೀವು ವೀರೇಂದ್ರ ಪಾಟೀಲ್, ಎಸ್. ನಿಜಲಿಂಗಪ್ಪ ಅವರಿಂದ 1% ಕಲಿಯಿರಿ. ಬೊಮ್ಮಾಯಿ ಸರ್ಕಾರ ರಾಜ್ಯಕ್ಕೆ ಕೆಟ್ಟ ಹೆಸರು ತಂದಿದೆ. ಅವರದ್ದೇ ನಾಯಕರಾದ ಬಿ ಎಸ್ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಹಿರಿಯ ನಾಯಕರಾದ ಬಿಎಸ್​ವೈ ಶೋಭಾ ಕರಂದ್ಲಾಜೆ ಕೆಳಗೆ ಕೆಲಸ ಮಾಡುವ ಹಾಗೆ ಮಾಡಿದ್ದಾರೆ ಎಂದು ಟೀಕಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಅನಂತ ಸುಬ್ಬರಾವ್ ಹಾಗೂ ಜ್ಯೋತಿ ಅನಂತ ಸುಬ್ಬಾರಾವ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ತೆಕ್ಕೆಗೆ ಬಿಜೆಪಿ ಬಂಡಾಯ ಅಭ್ಯರ್ಥಿ: ಜಾರಕಿಹೊಳಿ ಸಮ್ಮುಖದಲ್ಲಿ ಕೈ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.