ETV Bharat / state

ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಆನೇಕಲ್​​ ಪೊಲೀಸರು

author img

By

Published : Mar 29, 2020, 2:21 PM IST

Updated : Mar 29, 2020, 3:24 PM IST

ವೃತ್ತಿಯನ್ನೂ ಮೀರಿ ಕಡುಬಡವರೇ ತುಂಬಿದ್ದ ತಾತ್ಕಾಲಿಕ ಕಾರ್ಮಿಕರ ಸ್ಥಳಗಳಿಗೆ ಮೂರು ಹೊತ್ತು ಊಟದ ಸರಬರಾಜಿನ ಜೊತೆಗೆ ಬಾಟಲ್​​ಗಳಲ್ಲಿ ಸ್ಯಾನಿಟೈಸರ್​​ ಹಾಗೂ ಮುಖಕ್ಕೆ ಮಾಸ್ಕ್​​ಗಳನ್ನು ಆನೇಕಲ್​ ಪೊಲೀಸರು ವಿತರಿಸಿದ್ದಾರೆ.

CPI K Vishwanath, who provided shelter to refugees
ಕರ್ತವ್ಯದ ಜೋತಗೆ ಮಾನವಿಯತೆ ಮೇರೆದ ಆನೇಕಲ್​​ ಪೊಲೀಸರು

ಆನೇಕಲ್: ಕೊರೊನಾ ಲಾಕ್​ಡೌನ್​ ಪರಿಣಾಮದಿಂದಾಗಿ ಅಂತರರಾಜ್ಯ ಕೂಲಿ ಕಾರ್ಮಿಕರ ತಾಣಗಳಲ್ಲಿ ಆಹಾರದ ಕೊರತೆಯಷ್ಟೇ ಅಲ್ಲದೆ ಸ್ಯಾನಿಟೈಸರ್ಸ್, ಮಾಸ್ಕ್ ಕೊರತೆಯನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಜಿಗಣಿ ವೃತ್ತ ನಿರೀಕ್ಷಕ ಕೆ ವಿಶ್ವನಾಥ್ ಸಮರ್ಥವಾಗಿ ನಿವರ್ಹಿಸಿ ಯಶ ಕಂಡಿದ್ದಾರೆ.

ವೃತ್ತಿಯನ್ನೂ ಮೀರಿ ಕಡುಬಡವರೇ ತುಂಬಿದ್ದ ತಾತ್ಕಾಲಿಕ ಕಾರ್ಮಿಕರ ತಾಣಗಳಿಗೆ ಮೂರು ಹೊತ್ತೂ ಊಟದ ಸರಬರಾಜಿನ ಜೊತೆಗೆ ಬಾಟಲಿಗಳಲ್ಲಿ ಸ್ಯಾನಿಟೈಸರ್ಸ್, ಹಾಗೂ ಮುಖಕ್ಕೆ ಮಾಸ್ಕ್​​ಗಳನ್ನು ವಿತರಿಸಿದರು. ಹರಪ್ಪನಹಳ್ಳಿ, ಆನೇಕಲ್, ಹೆಬ್ಬಗೋಡಿ, ಜಿಗಣಿಯ ಹಲವಾರು ಕಡೆ ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಎರಡೊತ್ತು ಊಟವನ್ನು ನಿನ್ನೆಯಿಂದಲೇ ನೀಡುತ್ತಿದ್ದು ಸಾಗಣೆಗೆ ವೆಚ್ಚವನ್ನೂ ಭರಿಸಿದ್ದಾರೆ.

ಬನ್ನೇರುಘಟ್ಟ ಶಿವನಹಳ್ಳಿಯ ರಾಮಕೃಷ್ಣಾಶ್ರಮ, ಮತ್ತಿತರರ ಸಹಕಾರ ಕೋರಿ ಇತರ ಪೊಲೀಸ್ ಠಾಣೆಗಳಿಗೂ ಸ್ಯಾನಿಟೈಸರ್ಸ್ ಹಾಗು ಮಾಸ್ಕ್ ಗಳನ್ನು ವಿತರಿಸಿದ್ದಲ್ಲದೆ ಖುದ್ದು ಊಟೋಪಚಾರ ವಿತರಣೆಯನ್ನು ವಹಿಸಿಕೊಂಡಿದ್ದು ಇಲಾಖಾ ಕೆಲಸಗಳ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.

Last Updated : Mar 29, 2020, 3:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.