ಬೆಂಗಳೂರು: ಕೋವಿಡ್ - 19 ಶಂಕಿತರ ಮಾದರಿಯನ್ನು ಸಂಗ್ರಹಿಸುವುದಕ್ಕೆ ಸ್ಮಾರ್ಟ್ ಕಿಯೋಸ್ಕ್ ' COVSACK' COVID-19 Sample Collection Kiosk, ಅನ್ನು ಹೈದರಾಬಾದ್ ಮೂಲದ ಡಿಆರ್ಡಿಎಲ್ ತಯಾರಿಸಿದೆ.
ಇದನ್ನು ಪ್ರಾಯೋಗಿಕವಾಗಿ ಹೈದರಾಬಾದ್ನ ಇಎಸ್ಐ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಕಿಯೋಸ್ಕ್ ಅನ್ನು ಡಿಆರ್ ಡಿಎಲ್ ವಿಜ್ಞಾನಿ ಡಾ. ಜಯತೀರ್ಥ ಜೋಶಿ ಆವಿಷ್ಕರಿಸಿದ್ದಾರೆ.
ಆರೋಗ್ಯ ಸಿಬ್ಬಂದಿ ಯಾವುದೇ ಪಿಪಿಇ ಕಿಟ್ ಉಪಯೋಗಿಸದೆ ಈ ಕಿಯೋಸ್ಕ್ ಬಳಸಿ ಶಂಕಿತ ಕೋವಿಡ್ 19 ಮಾದರಿಗಳನ್ನು ಸಂಗ್ರಹಿಸಬಹುದು, ಇದು ಕೊರೊನಾ ವೈರಸ್ ಆರೋಗ್ಯ ಸಿಬ್ಬಂದಿಗೆ ತಗುಲದಂತೆ ಕಾಪಾಡುತ್ತದೆ ಎಂದು ಸಂಸ್ಥೆ ಹೇಳಿದೆ.
ಕಿಯೋಸ್ಕ್ ಒಳಗೆ ರೋಗನಿರೋಧಕ ದ್ರವವನ್ನು ರಂಧ್ರದ ಮೂಲಕ ಸಿಂಪಡಿಸಿ, ಸ್ವಾಬ್ ಸಂಗ್ರಹಕ್ಕೆ ಅನುಕೂಲ ಮಾಡಿ ಕೊಡಲಿದೆ.