ಬೆಂಗಳೂರು: ಕೋವಿಶೀಲ್ಡ್ 2ನೇ ವ್ಯಾಕ್ಸಿನೇಷನ್ ಪಡೆಯಲು ಅಂತರದ ಸಮಯವನ್ನ ಪರಿಷ್ಕರಣೆ ಮಾಡಲಾಗಿದೆ.
ರಾಜ್ಯದಲ್ಲಿ ಮೊದಲ ಡೋಸ್ ಪಡೆದ ಜನರು ಎರಡನೇ ಡೋಸ್ಗೆ ಆಸ್ಪತ್ರೆಗಳ ಮುಂದೆ ಕ್ಯೂ ನಿಲ್ಲುವಂತಾಗಿದೆ. ಇತ್ತ 18 ವರ್ಷ ಮೇಲ್ಪಟ್ಟ 44 ವರ್ಷ ಒಳಗಿನ ಜನರಿಗೆ ಲಸಿಕೆಯನ್ನ ಸ್ಥಗಿತಗೊಳ್ಳಿಸಲಾಗಿದೆ. ಈ ನಡುವೆ ರಾಷ್ಟ್ರೀಯ ರೋಗ ನಿರೋಧಕ ತಾಂತ್ರಿಕ ಸಲಹಾ ಸಮಿತಿ ಮತ್ತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಸಮಿತಿ ಶಿಫಾರಸಿನ ಆಧಾರದ ಮೇಲೆ, ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಅನ್ನು 12 ರಿಂದ 16 ವಾರಗಳ ಅಂತರದಲ್ಲಿ ನೀಡಲು ಸಲಹೆ ನೀಡಿದೆ.
ಹೀಗಾಗಿ, ಈ ಹಿಂದೆ 2 ಡೋಸ್‌ಗಳ ನಡುವಿನ ಕೋವಿಶೀಲ್ಡ್ ಲಸಿಕೆ ಪಡೆಯುವ ಅವಧಿಯನ್ನು 6 ರಿಂದ 8 ವಾರಗಳ ಬದಲಿಗೆ 12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ. ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನಂತರ 12 ವಾರಗಳನ್ನು ಪೂರ್ಣಗೊಳಿಸದ ಜನರು ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡದಂತೆ ಕೋರಿದೆ.
ಕೋವಿಶೀಲ್ಡ್ ಲಸಿಕೆಗೆ (COVISHIELD) ಮಾತ್ರ ಅನ್ವಯಿಸಲಿದೆ.. ಕೋ ವ್ಯಾಕ್ಸಿನ್ ( COVAXIN) ಲಸಿಕೆಗೆ ಅಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ..