ETV Bharat / state

ಕಾಲೇಜು ಪ್ರವೇಶಕ್ಕೆ ಕೋವಿಡ್ ಲಸಿಕೆ ಕಡ್ಡಾಯ: ನಿಯಮ ಪಾಲಿಸಲು ಹೈಕೋರ್ಟ್ ಸಲಹೆ - ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಕಡ್ಡಾಯ

ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಾಲೇಜು ಪ್ರವೇಶಿಸುವ ಮೊದಲು ಕನಿಷ್ಠ ಒಂದು ಡೋಸ್​ ಕೊರೊನಾ ಲಸಿಕೆಯನ್ನಾದರೂ ಪಡೆದಿರಬೇಕೆಂದು ಹೈಕೋರ್ಟ್​ ಆದೇಶಿಸಿದೆ.

http://10.10.50.85//karnataka/02-September-2021/kn-bng-05-hc-covidvaccine-7208962_02092021200203_0209f_1630593123_311.JPG
ಹೈಕೋರ್ಟ್
author img

By

Published : Sep 2, 2021, 8:41 PM IST

ಬೆಂಗಳೂರು: ಕಾಲೇಜು ಪ್ರವೇಶಿಸಲು ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಕೊರೊನಾ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆಯುವುದನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಸರ್ಕಾರದ ನಿಯಮ ಪಾಲಿಸುವಂತೆ ಸಲಹೆ ನೀಡಿದೆ.

ಈ ಕುರಿತು ಮಂಗಳೂರಿನ ವೈದ್ಯ ಡಾ.ಶ್ರೀನಿವಾಸ ಬಿ.ಕಕ್ಕಿಲಾಯ, ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಬಿ.ಎನ್. ಹರಿಕೃಷ್ಣ ಮತ್ತಿತರರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಪ್ರಸ್ತಕ ಸಾಲಿನಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಜುಲೈ 16ರಂದು ಸರ್ಕಾರದ ಆದೇಶ ಹೊರಡಿಸಿದೆ. ಆದರೆ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾಲೇಜು ಪ್ರವೇಶಿಸಲು ಕೊರೊನಾ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಎಂದು ಷರತ್ತು ವಿಧಿಸಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸೂಚಿಸಿದೆ.

ಈ ಆದೇಶವು ಲಸಿಕೆ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುವಂತಿದೆ. ಸರ್ಕಾರದ ಆದೇಶವು ಸಂವಿಧಾನದ ಪರಿಚ್ಛೇಧ 14 ಮತ್ತು 21 ಕಲ್ಪಿಸಿರುವ ಸಮಾನತೆ ಮತ್ತು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದರು.

ಇದನ್ನೂ ಓದಿ:ರಾಜ್ಯದಲ್ಲಿ ಕೋವಿಡ್ ಪ್ರಮಾಣ ಸ್ಥಿರ: 1,240 ಹೊಸ ಸೋಂಕಿತರು ಪತ್ತೆ

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ವೈದ್ಯರೇ ಈ ರೀತಿ ಪಿಐಎಲ್ ಸಲ್ಲಿಸಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಪೋಲಿಯೋ ಲಸಿಕೆಗೂ ಕೂಡ ಇದೇ ರೀತಿ ವಿರೋಧ ಮಾಡಲಾಗುತ್ತಿದೆ. ವಿರೋಧ ವ್ಯಕ್ತಪಡಿಸಿದ ದೇಶಗಳಲ್ಲಿ ಪೋಲಿಯೋ ಈಗಲೂ ಉಳಿದುಕೊಂಡಿದೆ ಎಂದಿತು. ಅಲ್ಲದೇ, ಲಸಿಕೆ ಹಾಕುತ್ತಿರುವುದು ಕೊರೊನಾ ತಡೆಯುವುದಕ್ಕೆ. ಆದರೆ, ನೀವು ಮಾತ್ರ ವಿರೋಧಿಸುತ್ತಿದ್ದೀರಿ. ಲಸಿಕೆ ಇರುವುದು ಮನುಕುಲದ ರಕ್ಷಣೆಗೆ. ಹಾಗಾಗಿ ಸರ್ಕಾರದ ನಿಯಮ ಪಾಲಿಸಿ, ಲಸಿಕೆ ಹಾಕಿಸಿಕೊಂಡು ತರಗತಿಗಳಿಗೆ ಹಾಜರಾಗಿ ಎಂದು ಅರ್ಜಿದಾರರಿಗೆ ಸಲಹೆ ನೀಡಿತು. ನಂತರ, ಅರ್ಜಿಯನ್ನು ಕೋವಿಡ್‌ಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ವಿಶೇಷ ಪೀಠಕ್ಕೆ ವರ್ಗಾಯಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.