ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಮೊದಲ ದಿನದ ಟಾರ್ಗೆಟ್ ಅರ್ಧದಷ್ಟು ಮುಗಿದಿದೆ. ಇಂದು 6,38,891 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದ ಆರೋಗ್ಯ ಇಲಾಖೆ, ಇದರಲ್ಲಿ 3,80,133 ಲಸಿಕೆ ಹಾಕಿದೆ.
ರಾಮನಗರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಯಲ್ಲಿ ಲಸಿಕೆ ಶೇ.60 ರ ಗಡಿ ದಾಟಿದ್ದರೆ, ಇತ್ತ ಕೊಡಗು, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ನಿರೀಕ್ಷೆಗೂ ಮೀರಿ ಲಸಿಕೆ ಅಭಿಯಾನ ನಡೆಯಿತು. ಯಾದಗಿರಿಯಲ್ಲಿ ಶೇ.18 ರಷ್ಟು ಮಾತ್ರ ನಡೆದಿದ್ದು ಕೊನೆಯ ಸ್ಥಾನದಲ್ಲಿದೆ.
ಜಿಲ್ಲಾವಾರು ವ್ಯಾಕ್ಸಿನೇಷನ್ ವಿವರ ನೋಡೋಣ:
ಸರಾಸರಿಗಿಂತ ಕಡಿಮೆ ಲಸಿಕೀಕರಣ ಜಿಲ್ಲೆಗಳು | % | ಉತ್ತಮ ಲಸಿಕೀಕರಣ ಪೂರೈಸಿದ ಜಿಲ್ಲೆಗಳು | % |
ಯಾದಗಿರಿ | 18 | ರಾಮನಗರ | 60 |
ಮೈಸೂರು | 25 | ಮಂಡ್ಯ | 60 |
ಬೆಂಗಳೂರು ನಗರ | 27 | ದಾವಣಗೆರೆ | 69 |
ಕೊಪ್ಪಳ | 32 | ತುಮಕೂರು | 71 |
ಚಿಕ್ಬಳ್ಳಾಪುರ | 32 | ಶಿವಮೊಗ್ಗ | 72 |
ಬಳ್ಳಾರಿ | 34 | ಕಲಬುರಗಿ | 93 |
ವಿಜಯಪುರ | 36 | ದಕ್ಷಿಣ ಕನ್ನಡ | 97 |
ಬೀದರ್ | 37 | ಕೊಡಗು | 100 |
ಗದಗ | 39 | ಉಡುಪಿ | 103 |
ರಾಯಚೂರು | 44 | ಉತ್ತರಕನ್ನಡ | 103 |
ಚಾಮರಾಜನಗರ | 49 | ಹಾಸನ | 128 |
ಬೆಂಗಳೂರು ಗ್ರಾಮಾಂತರ | 50 | ಚಿಕ್ಕಮಗಳೂರು | 136 |
ಬಿಬಿಎಂಪಿ | 55 | ಕೋಲಾರ | 181 |
ಚಿತ್ರದುರ್ಗ | 57 | ಬೆಳಗಾವಿ | 220 |
ಬಾಗಲಕೋಟೆ | 57 | ಧಾರವಾಡ | 225 |
ಹಾವೇರಿ | 273 |