ETV Bharat / state

ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ: ಜನವರಿ 3 ರಿಂದ ಮಕ್ಕಳಿಗೆ ಕೋವಿಡ್​ ಲಸಿಕೆ - ಸಚಿವ ಸುಧಾಕರ್​ ಘೋಷಣೆ

COVID vaccination for children age between 15-18: ರಾಜ್ಯಾದ್ಯಂತ 15-18 ವರ್ಷದ ಮಕ್ಕಳಿಗೆ ಜನವರಿ 03ರಿಂದ ಮೊದಲ ಹಂತದಲ್ಲಿ ಕೋವಿಡ್​ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್​ ಮಾಹಿತಿ ನೀಡಿದ್ದಾರೆ.

Covid vaccination for children by January 3rd
ಜನವರಿ 3 ರಿಂದ ಮಕ್ಕಳಿಗೆ ಕೋವಿಡ್​ ಲಸಿಕೆ
author img

By

Published : Dec 26, 2021, 4:11 PM IST

ಬೆಂಗಳೂರು: ಮೊದಲನೇ ಹಂತದಲ್ಲಿ 15 -18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭಿಸಲಿದ್ದು, ಜನವರಿ 3 ರಿಂದ ಮೊದಲ ಹಂತದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಚಾಲನೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್​ ಮಹತ್ವದ ಘೋಷಣೆ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 15-18 ವರ್ಷದ 45 ಲಕ್ಷ ಜನ ಮಕ್ಕಳಿದ್ದಾರೆ. ಅವರಿಗೆಲ್ಲ ಲಸಿಕೆ ನೀಡಲಾಗುತ್ತದೆ. 3ನೇ ಡೋಸ್ ಜನವರಿ 10ರಿಂದ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ 3ನೇ ಡೋಸ್ ನೀಡಲಾಗುತ್ತದೆ. ಪ್ರತಿ ಜಿಲ್ಲೆ, ಪ್ರತಿ ರಾಜ್ಯದಲ್ಲಿ ಕೋವಿಡ್ ವಾರಿಯರ್ಸ್‌ಗೆ 3ನೇ ಡೋಸ್ ನೀಡುತ್ತೇವೆ. ಕೇಂದ್ರದಿಂದ ಮಾರ್ಗಸೂಚಿ ಇನ್ನೂ ಬಂದಿಲ್ಲ. ಮಾರ್ಗಸೂಚಿ ಬರುತ್ತಿದ್ದಂತೆ ಅದರ ಪ್ರಕಾರ ಮಕ್ಕಳಿಗೆ ಲಸಿಕೆ ನೀಡುತ್ತೇವೆ ಎಂದರು.

ರಾಜ್ಯದಲ್ಲಿ ಈಗಾಗಲೇ ಮೊದಲ ಡೋಸ್ ಶೇ.97ರಷ್ಟು ಆಗಿದೆ. ಬಾಕಿ ಉಳಿದ ಶೇ.3ರಷ್ಟು ಮೊದಲ ಡೋಸ್ ಅನ್ನು ಶೀಘ್ರವೇ ಹಾಕಲಾಗುತ್ತದೆ. ರಾಜ್ಯದಲ್ಲಿ ಲಸಿಕೆ ಹಾಕಲು ಸಮರೋಪಾದಿಯಲ್ಲಿ ಕೆಲಸ ನಡೆಸುತ್ತಿದೆ. ದೇಶದಲ್ಲಿ ಒಮಿಕ್ರಾನ್ 400ರ ಗಡಿ ದಾಟಿದೆ. ಒಮಿಕ್ರಾನ್ ಪ್ರಮಾಣ ಹೆಚ್ಚಳವಾಗೋ ಎಲ್ಲಾ ಸಾಧ್ಯತೆ ಇದೆ. ಹಾಗಾಗಿ ಮುಂಜಾಗ್ರತಾ ಕ್ರಮ ಅನಿವಾರ್ಯ ಎಂದರು.

ಸೋಂಕು ಹೆಚ್ಚಾಗುವ ಮುನ್ನವೇ 2 ಡೋಸ್ ತೆಗೆದುಕೊಳ್ಳಿ, ಇದರಿಂದ ಸಾವು-ನೋವು ಕಡಿಮೆ ಆಗಲಿದೆ. ಪರಿಸ್ಥಿತಿ ಎದುರಿಸಲು 4000 ಐಸಿಯು ಬೆಡ್ ಸಿದ್ಧಗೊಳಿಸಿದ್ದೇವೆ. 7051 ಐಸಿಯು ಬೆಡ್‌ಗಳನ್ನು ರೆಡಿ ಮಾಡಲು ಹೇಳಿದ್ದೇವೆ. ಒಮಿಕ್ರಾನ್ ಎದುರಿಸಲು ಉಪಕರಣಗಳನ್ನು ತೆಗೆದುಕೊಳ್ಳಲು ತಜ್ಞರ ಸಮಿತಿ ಹೇಳಿದೆ. ಅದರಂತೆ ಒಮಿಕ್ರಾನ್ ಶೀಘ್ರ ಪತ್ತೆಗೆ ಥರ್ಮೋಫಿಶೆರ್ ಖರೀದಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.