ETV Bharat / state

ಮೊದಲ ಡೋಸ್​ ಪಡೆದವರ ದತ್ತಾಂಶ ಅಪ್​ಲೋಡ್​​ ಸಕ್ಸಸ್​... ಕೋವಿನ್​ ವೆಬ್​​ ಸೇರಿದ 95 ಲಕ್ಷ ಜನರ ದಾಖಲೆ - ಕೋವಿಡ್ ನ್ಯೂಸ್

ರಾಜ್ಯದಲ್ಲಿ ಕೋವಿಡ್​ ವ್ಯಾಕ್ಸಿನ್​ ಅಭಿಯಾನ ಶುರುಮಾಡಿ ಈಗಾಗಲೇ ನಾಲ್ಕು ತಿಂಗಳು ಕಳೆದು ಹೋಗಿದ್ದು, ಎಷ್ಟು ಜನರಿಗೆ ವ್ಯಾಕ್ಸಿನ್​​ ಹಾಕಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇದೀಗ ಕೋವಿನ್​ ವೆಬ್​ ಸೇರಿಕೊಂಡಿದೆ.

Covid vaccination
Covid vaccination
author img

By

Published : May 25, 2021, 12:31 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಆರಂಭಗೊಂಡು ನಿನ್ನೆಗೆ ಬರೋಬ್ಬರಿ 129 ದಿನಗಳು ಕಳೆದಿವೆ. ಇಲ್ಲಿಯವರೆಗೆ 95 ಲಕ್ಷ ಜನರಿಗೆ ಮೊದಲ ಡೋಸ್​, 26 ಲಕ್ಷ ಜನರಿಗೆ ಎರಡನೇ ಸೇರಿ, ಇಲ್ಲಿಯವರೆಗೆ 1.21 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ.

ಲಸಿಕಾ ಅಭಿಯಾನ ನಿರೀಕ್ಷಿತ ವೇಗದಲ್ಲಿ ನಡೆಯಲು ವ್ಯಾಕ್ಸಿನ್​​ ಕೊರತೆ ಅಡ್ಡಿಯಾಗಿದ್ದು, ಮಂದಗತಿಯಲ್ಲಿ ಲಸಿಕೆ ಹಾಕುವ ಕೆಲಸ ನಡೆಯುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿಯೂ ಜನವರಿ 16ರಿಂದ ಕೊರೊನಾ ಲಸಿಕೆ ಹಾಕಲು ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೊರೊನಾ ಯೋಧರಿಗೂ ಲಸಿಕೆ ನೀಡಿಕೆ ಆರಂಭಿಸಲಾಯಿತು.

ಇದಾದ ಬಳಿಕ 45 ವರ್ಷದಿಂದ 59 ವರ್ಷದ ವಯೋಮಾನದವರಿಗೆ ಏಪ್ರಿಲ್ 1ರಿಂದ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳು,ಜಿಲ್ಲಾ ಆಸ್ಪತ್ರೆಗಳು,ಖಾಸಗಿ ಆಸ್ಪತ್ರೆಗಳು ಸೇರಿದಂತೆ 3 ಸಾವಿರಕ್ಕೂ ಅಧಿಕ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕುತ್ತಿದ್ದು, ಇದೀಗ ರಾಜ್ಯದಲ್ಲಿರುವ ಆರೋಗ್ಯ ಉಪ ಕೇಂದ್ರಗಳಲ್ಲೂ ಲಸಿಕಾ ಕೇಂದ್ರಗಳನ್ನಾಗಿ ಮಾಡಿಕೊಳ್ಳಲಾಗಿದೆ. ಇದೀಗ ಮೇ 10ರಿಂದ ರಾಜ್ಯದಲ್ಲಿ 18-44 ವಯೋಮಾನದವರಿಗೆ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಆದರೆ ವ್ಯಾಕ್ಸಿನ್​ ಕೊರತೆ ಉಂಟಾಗಿರುವ ಕಾರಣ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.

ಎಷ್ಟು ಜನರಿಗೆ ಲಸಿಕೆ?

  • ಲಸಿಕೆ ಪಡೆದವರು: ಆರೋಗ್ಯ ಕಾರ್ಯಕರ್ತರು: 7,08,915(ಮೊದಲನೇ ಡೋಸ್)​, 4,66,479(ಎರಡನೇ ಡೋಸ್​​)
  • ಮುಂಚೂಣಿ ವಾರಿಯರ್ಸ್: 55,55,858 (ಮೊದಲನೇ ಡೋಸ್)​, 2,02,541(ಎರಡನೇ ಡೋಸ್​​)
  • 45-59ರ ವಯೋಮಾನದವರು: 80,59,190(ಮೊದಲನೇ ಡೋಸ್), 19,59,977(ಎರಡನೇ ಡೋಸ್​​)
  • 18-44ರ ವಯೋಮಾನದವರು: 2,44,236(ಮೊದಲನೇ ಡೋಸ್)

ದತ್ತಾಂಶ ಸವಾಲು ನಿವಾರಿಸಿದ ಆರೋಗ್ಯ ಕಾರ್ಯಕರ್ತರು:

ಒಂದು ಕೋಟಿಗೂ ಹೆಚ್ಚಿನ ಲಸಿಕೆಯನ್ನು ರಾಜ್ಯದ ನಾಗರಿಕರಿಗೆ ನೀಡಲಾಗಿದೆ. ಲಸಿಕಾ ಕೇಂದ್ರಗಳು, ದೊಡ್ಡ ಸಂಖ್ಯೆ ಉದ್ಯೋಗಿಗಳು ಇರುವ ಸ್ಥಳಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗಿದೆ. ಮೊದಲು ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಂಡು ಜನರು ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಹೋಗುತ್ತಿದ್ದರು. ಹೀಗಾಗಿ ದಾಖಲೆ ಅದಾಗಲೇ ಅಪ್ ಲೋಡ್ ಆಗಿರುತ್ತಿತ್ತು. ನಂತರ ಸ್ಥಳದಲ್ಲೇ ಕೋವಿನ್ ಪೋರ್ಟಲ್​ನಲ್ಲಿ ನೋಂದಣಿ ಮಾಡಿ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ದತ್ತಾಂಶ ಅಪ್ ಲೋಡ್​ಗೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದು, ಅಂತಹವರ ದಾಖಲೆ ಪ್ರತಿ ಪಡೆದು ಲಸಿಕೆ ಹಾಕಿ ಕಳಿಸಲಾಗುತ್ತಿದೆ.

ಇದನ್ನೂ ಓದಿ: ಅನಾಥ ಶವದ ಅಂತ್ಯಕ್ರಿಯೆ ನಡೆಸಿದ ರೈಲ್ವೇ ಹೆಡ್​ಕಾನ್​ಸ್ಟೇಬಲ್​... ಮಾನವೀಯತೆಗೆ ಮೆಚ್ಚುಗೆ

ಸರ್ವರ್ ತಾಂತ್ರಿಕ ಸಮಸ್ಯೆ ಸರಿಯಾದ ನಂತರ ದಾಖಲೆಗಳ ಮಾಹಿತಿಯನ್ನು ಅಪ್​ಲೋಡ್​ ಮಾಡಲಾಗುತ್ತಿದೆ. ಆದರೆ ಇಂತಹ ಸಂದರ್ಭ ವಿರಳ ಎನ್ನಲಾಗಿದೆ. ಸಧ್ಯ ಲಸಿಕೆ ಪಡೆಯುವ ಜನರು ಸರದಿ ಸಾಲಿನಲ್ಲಿ ನಿಂತಾಗ ಮೊದಲು ಟೋಕನ್ ನೀಡಲಾಗುತ್ತದೆ. ಟೋಕನ್ ಪಡೆದವರ ಆಧಾರ್​ ಅಥವಾ ವ್ಯಕ್ತಿಯ ದೃಢೀಕರಣ ದಾಖಲೆಯ ದತ್ತಾಂಶವನ್ನು ಅಪ್​ಲೋಡ್​ ಮಾಡಲಾಗುತ್ತದೆ. ನಂತರ ಅವರ ಮೊಬೈಲ್​ಗೆ ಲಸಿಕೆ ಪಡೆದ ಮಾಹಿತಿ ಬರಲಿದೆ. ಆ ಸಂದೇಶ ಖಚಿತಪಡಿಸಿಕೊಂಡು ಲಸಿಕೆ ನೀಡಿ ಕಳಿಸಲಾಗುತ್ತದೆ.

ಇನ್ನು ದತ್ತಾಂಶ ದಾಖಲಾತಿಗೆ ತಾಂತ್ರಿಕ ಸಮಸ್ಯೆ ಎದುರಾದಾಗಲೂ ಲಸಿಕೆ ಹಾಕಿ ಕಳಿಸಲಾಗುತ್ತದೆ. ಅಂತಹವರ ಮೊಬೈಲ್​ಗೆ ಅಂದು ಸಂಜೆ ಅಥವಾ ಮರುದಿನವೇ ಲಸಿಕೆ ಪಡೆದ ಸಂದೇಶ ಬರಲಿದೆ. ಸಂದೇಶ ಸ್ವೀಕರಿಸಿದ ಎಲ್ಲರಿಗೂ ಆನ್ ಲೈನ್​ನಲ್ಲಿ ಲಸಿಕೆ ಪಡೆದ ದೃಢೀಕರಣ ಪತ್ರ ಪಡೆಯಬಹುದಾಗಿದೆ. ಈ ಸಂದರ್ಭದಲ್ಲಿ ಕೆಲ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದರೂ, ತಾಳ್ಮೆಯಿಂದ ಆರೋಗ್ಯ ಕಾರ್ಯಕರ್ತರು ಸಮಸ್ಯೆ ಸರಿಪಡಿಸಿ ದಾಖಲಾತಿ ಅಪ್​ಲೋಡ್​ ಮಾಡುತ್ತಿದ್ದಾರೆ.

ಕೆಲ ತಾಂತ್ರಿಕ ಸಮಸ್ಯೆ: ರಾಜ್ಯದಲ್ಲಿ ಆಧಾರ್​ ಸಂಖ್ಯೆ, ವೈಯಕ್ತಿಕ ಗುರುತು ದೃಢೀಕರಿಸುವ ದಾಖಲೆ ಹಾಗು ಮೊಬೈಲ್ ಸಂಖ್ಯೆ ಗೊಂದಲ ಹಾಗೂ ಕೆಲ ತಾಂತ್ರಿಕ ತೊಂದರೆಯಿಂದ‌ ಕೆಲವರಿಗೆ ಲಸಿಕೆಯ ಮೊದಲ ಡೋಸ್ ಪಡೆದವರ ಮೊಬೈಲ್​ಗೆ ಇನ್ನು ಸಂದೇಶ ಬಂದಿಲ್ಲ, ದತ್ತಾಂಶ ಸರಿಯಾಗಿ ಅಪ್​ಲೋಡ್​ ಆಗದೇ ಇರುವ ಕಾರಣಕ್ಕೆ ಸಮಸ್ಯೆ ಎದುರಾಗಿದೆ. ಅವರೆಲ್ಲರೂ ಎರಡನೇ ಡೋಸ್ ಪಡೆಯಲು ಹೋದಾಗಲೇ ದತ್ತಾಂಶ ಅಪ್​ಲೋಡ್​ ಆಗದೇ ಇರುವ ಮಾಹಿತಿ ಬೆಳಕಿಗೆ ಬಂದಿದೆ.

ಮೊದಲ ಡೋಸ್ ಪಡೆದಾಗ ಬರೆದುಕೊಟ್ಟಿದ್ದ ಚೀಟಿ, ಫೋಟೊಗಳನ್ನು ತೋರಿಸಿ ಎರಡನೇ ಡೋಸ್ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇಂತಹ ಪ್ರಕರಣ ತೀರ ವಿರಳವಾಗಿದೆ, ಇದು ಲಸಿಕಾ ಅಭಿಯಾನಕ್ಕೆ ಅಂತಹ ಸಮಸ್ಯೆಯನ್ನು ಸೃಷ್ಟಿಸಿಲ್ಲ.

ಶೇ.99.90 ಕ್ಕೂ ಹೆಚ್ಚಿನ ಪ್ರಮಾಣದ ದತ್ತಾಂಶ ಅಪ್​ಲೋಡ್​ ಆಗಿದ್ದು, ಲಸಿಕಾ ಅಭಿಯಾನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಲಸಿಕೆಯ ನೋಡಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

18-44ರ ವಯಸ್ಸಿನ ಲಸಿಕಾ ಅಭಿಯಾನಕ್ಕೆ ತೊಂದರೆ: ಸಧ್ಯಕ್ಕೆ 18-44 ವಯೋಮಾನದವರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿದ್ದು, ಲಸಿಕೆ ಸಿಕ್ಕಿದೆಯೆಂದು ಹಾಕಿಸಿಕೊಂಡರೆ ಅವರಿಗೆ ಪ್ರಮಾಣ ಪತ್ರದ ಸಮಸ್ಯೆ ಎದುರಾಗಲಿದೆ. ಈ ವಯೋಮಾನದ ದತ್ತಾಂಶವನ್ನು ಕೋವಿನ್ ವೆಬ್​ಸೈಟ್​ ಸಧ್ಯಕ್ಕೆ ಪರಿಗಣಿಸುತ್ತಿಲ್ಲ, ಕೇವಲ ಎರಡನೇ ಡೋಸ್​ಗೆ ಆಧ್ಯತೆ ಹಾಗು 45+ಗೆ ಆಧ್ಯತೆ ನೀಡಿರುವ ಕಾರಣ ಕೋವಿನ್​ ವೆಬ್​ಗೆ 18-44 ವಯೋಮಾನದ ದತ್ತಾಂಶ ತಾತ್ಕಾಲಿಕವಾಗಿ ಅಪ್ ಲೋಡ್ ಆಗುತ್ತಿಲ್ಲ. ಹಾಗಾಗಿ ಈಗ ಪ್ರಮಾಣ ಪತ್ರ ಸಿಕ್ಕದೇ ಇದ್ದಲ್ಲಿ ಎರಡನೇ ಡೋಸ್​ಗೆ ತೊಂದರೆಯಾಗಲಿದೆ. ಹಾಗಾಗಿ ಈ ಸಮಸ್ಯೆ ನಿವಾರಣೆಯಾಗುವವರೆಗೂ 18-44 ವಯೋಮಾನದವರಿಗೆ ಲಸಿಕೆ ನೀಡುವುದಿಲ್ಲ ಎನ್ನಲಾಗಿದೆ. ಆದರೆ ಇದು ಆರೋಗ್ಯ ಕಾರ್ಯಕರ್ತರು ಮತ್ತು ಮುಂದೂಣಿ ವಾರಿಯರ್ಸ್​​ಗೆ ಅನ್ವಯವಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.