ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಹೊಸದಾಗಿ 14,304 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 26,18,735 ಕ್ಕೆ ಏರಿದೆ. ಇಂದು 29,271 ಮಂದಿ ಡಿಸ್ಚಾರ್ಜ್ ಆಗಿದ್ದು ಈವರೆಗೆ 22,90,861 ಜನರು ಗುಣಮುಖರಾಗಿದ್ದಾರೆ.
ಸದ್ಯ 2,98,299 ರಷ್ಟು ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡಾವಾರು 12.30 ರಷ್ಟಿದೆ. ಸಾವಿನ ಶೇಕಡಾವಾರು ಪ್ರಮಾಣ 3.24 ರಷ್ಟಿದೆ. ವೈರಸ್ಗೆ 464 ಮಂದಿ ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 29,554 ಕ್ಕೆ ಏರಿದೆ.
ರಾಜ್ಯದಲ್ಲಿ ದಿನೇ ದಿನೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು, ಈವರೆಗೆ 1370 ಮಂದಿ ಕಪ್ಪುಶಿಲೀಂಧ್ರಕ್ಕೆ ತುತ್ತಾಗಿದ್ದಾರೆ. ಇದರಲ್ಲಿ 51 ಮಂದಿ ಮೃತಪಟ್ಟಿದ್ದು, 27 ಜನರು ಗುಣಮುಖರಾಗಿದ್ದಾರೆ.
1,292 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡದಲ್ಲೇ 14 ಮಂದಿ, ಬೆಂಗಳೂರು ನಗರದಲ್ಲಿ 6, ಕಲಬುರಗಿ 5, ದಕ್ಷಿಣ ಕನ್ನಡ 4, ಹಾಸನ 3 ಹಾಗೂ ಕೊಪ್ಪಳ, ಕೋಲಾರ, ದಾವಣಗೆರೆ, ಬೆಂ. ಗ್ರಾಮಾಂತರ ಜಿಲ್ಲೆಗಳು ತಲಾ ಇಬ್ಬರು, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ರಾಯಚೂರು, ಯಾದಗಿರಿಯಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ.