ಬೆಂಗಳೂರು: ನಗರದ ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿಯ ನೂತನ ಕೋವಿಡ್ ಸುರಕ್ಷಾ ಕೇಂದ್ರವನ್ನು ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟಿಸಿದರು.
ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅಶೋಕ್, 40 ಬೆಡ್ ಸೌಲಭ್ಯವಿರುವ ಬಿಬಿಎಂಪಿ ರೆಫರಲ್ ಆಸ್ಪತ್ರೆ, 20 ಬೆಡ್ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಹಾಗೂ 20 ನಾರ್ಮಲ್ ಬೆಡ್ ವ್ಯವಸ್ಥೆ ಇರುವ ಆಸ್ಪತ್ರೆ, ಮಕ್ಕಳಿಗಾಗಿ ವಿಶೇಷ ಕೇಂದ್ರ ಪ್ರಾರಂಭ ಮಾಡುತ್ತಿದ್ದೇವೆ. 50 ಬೆಡ್ ಇರುವ ಮಕ್ಕಳ ಕೇಂದ್ರ ಪ್ರಾರಂಭ ಮಾಡಲಾಗ್ತಿದೆ. ಪೋಷಕರಿಗೂ ಉಳಿಯಲು ಅವಕಾಶ ನೀಡಲಾಗುತ್ತೆ. ಮಕ್ಕಳಿಗೆ ಆಗೋ ಸಮಸ್ಯೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗ್ತಿದೆ ಎಂದರು.
ಕಳೆದ ಹತ್ತು ದಿನಗಳಿಂದ ನಮ್ಮ ಅಧಿಕಾರಿಗಳು ಡಾಕ್ಟರ್ಗಳು ಶ್ರಮವಹಿಸಿ ಈ ಕೇಂದ್ರ ಮಾಡಿದ್ದೇವೆ. ಆಕ್ಸಿಜನ್ ಕಡಿಮೆ ಪ್ರಮಾಣದಲ್ಲಿ ಬೇಕಿರುವ ರೋಗಿಗಳಿಗೆ ಈ ಕೋವಿಡ್ ಆರೈಕೆ ಕೇಂದ್ರ ಉಪಯೋಗ ಆಗಲಿದೆ. ಡಾಕ್ಟರು, ಸ್ಪೆಷಲಿಸ್ಟುಗಳು ಇಲ್ಲಿ ಇರಲಿದ್ದಾರೆ. ಮುಂದೆ ಮೂರನೇ ಅಲೆಗೂ ಕೂಡಾ ಸಿದ್ಧತೆಗಳನ್ನು ಮಾಡಿಕೊಳ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಲಸಿಕೆ ಕೊರತೆ ಆಗಿಲ್ಲ. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗ್ತಿದೆ ಎಂದರು.
ಲಾಕ್ಡೌನ್ ವಿಸ್ತರಣೆ ಮಾಡುವುದು ಒಳಿತು. ಈಗ ಕೋವಿಡ್ ಕೇಸ್ಗಳ ಸಂಖ್ಯೆ ಕಡಿಮೆ ಆಗ್ತಿದೆ. ಮೊದಲು ಲಾಕ್ ಡೌನ್ ಮಾಡಿದಾಗ ವಿಪಕ್ಷದವರು ವ್ಯಂಗ್ಯ ಮಾಡ್ತಾ ಇದ್ದರು. ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಟ್ವೀಟ್ ಮಾಡ್ತಿದ್ಧಾರೆ. ನಾವು ಜನರ ಜೊತೆ ಇದ್ದೇವೆ. ಲಾಕ್ಡೌನ್ ವಿಸ್ತರಣೆ ಆಗಬೇಕು ಅಂತ. ನಾನೂ ಕೂಡಾ ಸಿಎಂಗೆ ಸಲಹೆ ನೀಡ್ತೀನಿ. ಲಾಕ್ಡೌನ್ ಮುಮದುವರಿಕೆ ಅವಶ್ಯಕತೆ ಇದೆ ಎಂದು ವಿವರಿಸಿದರು.
ಆಹಾರ ಗುಣಮಟ್ಟ ಪರಿಶೀಲನೆ:
ಬೆಂಗಳೂರಿನ ಬನಶಂಕರಿ ಇಂದಿರಾ ಕ್ಯಾಂಟೀನ್ನಲ್ಲಿ ಪಲಾವ್ ಮತ್ತು ಅನ್ನ ಸಾಂಬಾರ್ ತಿನ್ನುವ ಮೂಲಕ ಆಹಾರ ಗುಣಮಟ್ಟ ಚೆಕ್ ಮಾಡಿದ ಸಚಿವ ಆರ್. ಅಶೋಕ್, ಕ್ಯಾಂಟೀನ್ ನಲ್ಲಿ ಜನರಿಗೆ ನೀಡುತ್ತಿರುವ ಆಹಾರ ಗುಣಮಟ್ಟ ಉತ್ತಮವಾಗಿರಬೇಕು ಎಂದು ಸಲಹೆ ನೀಡಿದರು.