ETV Bharat / state

ಗಡಿಯಲ್ಲಿ ನಿಲ್ಲದ ವಾಹನ ಸಂಚಾರ: ಕಾಲುದಾರಿಯಲ್ಲಿ ಜನರ ಆಗಮನ - anekal bangalore latest news

ಕೋವಿಡ್​ ಎರಡನೇ ಅಲೆ ಹರಡುವುದನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮಗಳನ್ನೇನೋ ರೂಪಿಸಿದೆ. ಆದ್ರೆ ಗಡಿ ಭಾಗ ಆನೇಕಲ್​ನಲ್ಲಿ ನಿಯಮಗಳು ನಾಮಕಾವಸ್ತೆಗೆನ್ನುವ ದೃಶ್ಯಗಳು ಕಂಡುಬಂದಿವೆ.

covid rules violation in anekal
ಗಡಿಯಲ್ಲಿ ನಿಲ್ಲದ ವಾಹನ ಸಂಚಾರ - ಕಾಲುದಾರೀಲಿ ಆಗಮಿಸುತ್ತಿರುವ ಜನ
author img

By

Published : Apr 29, 2021, 8:44 AM IST

ಆನೇಕಲ್: ಕೊರೊನಾ ಕರ್ಫ್ಯೂ ಹೆಸರಿಗೆ ಮಾತ್ರಾನಾ? ಎನ್ನುವಂತಿದೆ. ಇಷ್ಟ ಬಂದಂತೆ ಓಡಾಡುತ್ತಿದ್ದ ವಾಹನ ಸವಾರರನ್ನು ವಾಪಸ್ ಕಳಿಸುವಲ್ಲಿ ಪೊಲೀಸರು ಯಶಸ್ವಿಯಾದರೂ ಕೂಡ ಪ್ರತಿ ವಾಹನ, ವ್ಯಕ್ತಿಯನ್ನು ತಪಾಸಣೆ ನಡೆಸುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ.

ಕಾಲುದಾರೀಲಿ ವಾಹನಗಳ ಮೂಲಕ ಆಗಮಿಸುತ್ತಿರುವ ಜನರು

ತಮಿಳುನಾಡಿನಿಂದ ನೇರವಾಗಿ ಬರುತ್ತಿದ್ದ ವಾಹನಗಳನ್ನು ಮತ್ತೆ ತಮಿಳುನಾಡಿಗೆ ವಾಪಸ್ ಕಳುಹಿಸುವಲ್ಲಿ ಪೊಲೀಸರು ಶ್ರಮಿಸುತ್ತಿದ್ದಾರೆ. ಉಳಿದಂತೆ ಬಂದಿರುವ ವಾಹನಗಳ ತಪಾಸಣೆ ಮಾಡಲು ಸಹ ಸೂಕ್ತ ಪ್ರಮಾಣದ ಅಧಿಕಾರಿಗಳಿಲ್ಲದೇ, ಪೊಲೀಸರಿಂದಲೇ ಲಾಕ್​​ಡೌನ್​​​ ನಡೀತಿದೆ ಎನ್ನುವಂತಾಗಿದೆ. ಅದಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ, ಕಂದಾಯ ಸಿಬ್ಬಂದಿ ಸಂಪೂರ್ಣ ಸಾಥ್‌ ನೀಡಬೇಕಿತ್ತು. ನಾಮಾಕಾವಸ್ತೆಗೆ ಮಾತ್ರ ಕಂದಾಯ ಇಲಾಖೆ ಹಾಗು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದಾರೆ ಎಂದು ಜನರು ದೂರಿದ್ದಾರೆ.

ನೆರೆ ರಾಜ್ಯದಿಂದ ಕಾಲುದಾರಿಯಲ್ಲಿ ಆಗಮಿಸುತ್ತಿರುವ ಜನ:

ಕಳೆದ ಬಾರಿಯೂ ತಮಿಳುನಾಡಿನಲ್ಲಿ ಅತಿ ಹೆಚ್ಚು ಕೋವಿಡ್​​ ಪ್ರಕರಣಗಳು ದಾಖಲಾಗಿತ್ತು. ಎರಡನೇ ಅಲೆಯಲ್ಲಿಯೂ ಗಡಿಪ್ರದೇಶ ಆನೇಕಲ್​​​ಗೆ ಪಕ್ಕದ ರಾಜ್ಯದಿಂದ ಬರುವ ಜನಸಂದಣಿಯಿಂದ ಕೋವಿಡ್​​ ಹೆಚ್ಚು ಕಾಣಿಸಿಕೊಂಡಿದೆ ಎಂಬ ದೂರುಗಳಿವೆ.

ಇದನ್ನೂ ಓದಿ: ನಗರ, ಪಟ್ಟಣ ಪ್ರದೇಶದಲ್ಲಿ ಚೆಕ್​ಪೋಸ್ಟ್, ಸುಮ್ಮನೆ ಓಡಾಡಿದ್ರೆ ಕೇಸ್: ಕಾರವಾರ ಎಸ್​ಪಿ

ಕರ್ನಾಟಕದ ಗಡಿ ಬಳ್ಳೂರು ಗ್ರಾಮದ ಬಳಿ‌ ಕಳ್ಳದಾರಿ ಮೂಲಕ ಮಾಸ್ಕ್ ಹಾಕದೆ ಜನರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತು ಕ್ರಮ ತೆಗೆದುಕೊಳ್ಳಬೇಕಾಗಿರುವ ಪಂಚಾಯತ್​ ಅಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿಗಳ ಮೇಲೆ ಬೆಟ್ಟು ಮಾಡುತ್ತಾರೆ. ಅತ್ತಿಬೆಲೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ-ತಾಲೂಕು ಮುಖ್ಯ ರಸ್ತೆಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಆದರೆ ಎರಡೂ ರಾಜ್ಯದ ಗಡಿಗೆ ಅಂಟಿಕೊಂಡಿರುವ ತೋಪು, ಹೊಲಗಳ ಕಾಲುದಾರಿ ಮೂಲಕ ಜನರ ಸಂಚಾರ ಸರಾಗವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.