ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ತಿಂಗಳ ಹಿಂದೆ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದರು. ನಿತ್ಯ ಸಾವಿರಾರು ಹೊಸ ಪ್ರಕರಣ, ನೂರಾರು ಮಂದಿಯ ಸಾವು ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಸದ್ಯ ಬೆಂಗಳೂರಿಗರು ಕೊರೊನಾದಿಂದ ನಿಟ್ಟುಸಿರು ಬಿಡುವ ಸಮಯ ಸನಿಹವಾಗಿದೆ.
ಬೆಂಗಳೂರಿನಲ್ಲಿ ಕೊರೊನಾದಿಂದ ಗುಣಮುಖರಾಗುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕೊರೊನಾ ಪಾಸಿಟಿವ್ ರೇಟ್ಗಿಂತ ಗುಣಮುಖರಾಗುವವರ ಸಂಖ್ಯೆ ನಿರಂತರ ಹೆಚ್ಚಳವಾಗ್ತಿದೆ.
ಕಳೆದ ಹತ್ತು ದಿನಗಳಿಂದ ಹೆಚ್ಚಿನ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಯಾವ ದಿನ ಎಷ್ಟೆಷ್ಟು ಹೊಸ ಪ್ರಕರಣಗಳು ಬಂದಿವೆ, ಎಷ್ಟು ಮಂದಿ ಗುಣಮುಖರಾಗಿದ್ದಾರೆ ಎಂಬುವುದರ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದ್ದು, ಅವು ಈ ರೀತಿಯಿದೆ.
ಕ್ರ.ಸಂ | ದಿನಾಂಕ | ಪಾಟಿಸಿವ್ | ಗುಣಮುಖ | ಹೆಚ್ಚು |
1 | ಮೇ 20 | 9,408 | 25,776 | 289 |
2 | ಮೇ 21 | 9,591 | 26,956 | 129 |
3 | ಮೇ 22 | 8,214 | 36,030 | 200 |
4 | ಮೇ 23 | 7,494 | 12,407 | 363 |
5 | ಮೇ 24 | 5,699 | 34,378 | 297 |
6 | ಮೇ 25 | 6,243 | 13,210 | 350 |
7 | ಮೇ 26 | 6,433 | 18,342 | 285 |
8 | ಮೇ 27 | 5,949 | 6,643 | 273 |
9 | ಮೇ 28 | 5,736 | 31,237 | 192 |
10 | ಮೇ 29 | 4,889 | 21,126 | 278 |
ಸದ್ಯ ಗುಣಮುಖರ ಸಂಖ್ಯೆ ಏರಿಕೆ ಆಗುತ್ತಿದ್ದು, ಸಕ್ರಿಯ ಪ್ರಕರಣಗಳು ಕಡಿಮೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಲಾಕ್ಡೌನ್ ಫಲಪ್ರದವಾಗಿದೆ.
ಬೆಂಗಳೂರಿಗರು ಕೊಂಚ ನೆಮ್ಮದಿಯಾಗಿ ಉಸಿರಾಡಬಹುದಾಗಿದೆ. ತಜ್ಞರು ಹೇಳುವಂತೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಬಹುಬೇಗ ಸೋಂಕು ನಮ್ಮಿಂದ ದೂರವಾಗಲಿದೆ.