ಬೆಂಗಳೂರು: ಕಳೆದ ಮಂಗಳವಾರದಂದು 52 ವರ್ಷದ ಕೋವಿಡ್ ಸೋಂಕಿತ ವ್ಯಕ್ತಿ ಹದಿನೆಂಟು ಆಸ್ಪತ್ರೆಗಳನ್ನು ಸುತ್ತಾಡಿದ್ರೂ ಚಿಕಿತ್ಸೆ ನೀಡಿರಲಿಲ್ಲ. ಇದರಿಂದ ಆ ವ್ಯಕ್ತಿ ಸಾನ್ನಪ್ಪಿದ್ದರು. ನಿನ್ನೆಯೂ ವಿಕ್ಟೋರಿಯಾ ಆಸ್ಪತ್ರೆಯ ಮುಂದೆಯೇ ಆಂಬುಲೆನ್ಸ್ನಲ್ಲಿ ವ್ಯಕ್ತಿ ಜೀವ ಬಿಟ್ಟಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯವಹಿಸಿದ ಆಸ್ಪತ್ರೆಗಳ ವಿರುದ್ಧ ಎಫ್ಐಆರ್ ದಾಖಲಿಸಲು ಬಿಬಿಎಂಪಿ ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ಆರೋಗ್ಯ ಇಲಾಖೆ ನಿನ್ನೆ ಕಾರಣ ಕೇಳಿ ನೋಟಿಸ್ನ್ನು ಸಂಬಂಧಿಸಿದ ಆಸ್ಪತ್ರೆಗಳಿಗೆ ನೀಡಿದೆ. ಬಿಬಿಎಂಪಿ ವತಿಯಿಂದ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.