ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸದ್ಯ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಜೂನ್ 14ರ ಬೆಳಗ್ಗೆ 6 ಗಂಟೆ ತನಕ ಲಾಕ್ಡೌನ್ ನಿಯಮ ಯಥಾಸ್ಥಿತಿ ಇರಲಿದೆ. ಲಾಕ್ಡೌನ್ ಮುಗಿದ ನಂತರ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಬಿಎಂಟಿಸಿ ಸಿಬ್ಬಂದಿಗೆ ವಿಶೇಷ ಸೂಚನೆ ಹೊರಡಿಸಲಾಗಿದೆ.
ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುವ ಆಡಳಿತ, ತಾಂತ್ರಿಕ ಹಾಗೂ ಚಾಲಕರು, ನಿರ್ವಾಹಕ ಸಿಬ್ಬಂದಿ ಲಾಕ್ಡೌನ್ ಮುಗಿದ ನಂತರ ಕರ್ತವ್ಯಕ್ಕೆ ಹಾಜರಾಗುವಾಗ ಕಡ್ಡಾಯವಾಗಿ ಕೆಲ ವರದಿಯೊಂದಿಗೆ ಬರಬೇಕಿದೆ.
- ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರವನ್ನ ತೆಗೆದುಕೊಂಡು ಬರಬೇಕು.
- ಕೋವಿಡ್ ಮೊದಲನೇ ಲಸಿಕೆಯನ್ನ ಕಡ್ಡಾಯವಾಗಿ ಪಡೆದುಕೊಂಡಿರಬೇಕು. ಹಾಗೂ ಅದರ ಪ್ರಮಾಣಪತ್ರವನ್ನು ಸಹ ತೆಗೆದುಕೊಂಡು ಬರಬೇಕು.
- ಒಂದು ವೇಳೆ, 2ನೇ ಲಸಿಕೆಯನ್ನು ಪಡೆದುಕೊಂಡಿದ್ದು, ಪ್ರಮಾಣ ಪತ್ರವನ್ನ ಹಾಜರು ಪಡಿಸಿದ್ದಲ್ಲಿ ಅಂತಹವರಿಗೆ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತೆ.
ಸಿಬ್ಬಂದಿ ಈ ಮೇಲಿನ ವರದಿಗಳೊಂದಿಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಅಂತವರಿಗೆ ಅವಕಾಶವನ್ನು ನೀಡುವುದಿಲ್ಲ ಎಂದು ಆದೇಶಿಸಲಾಗಿದೆ.
ಓದಿ: ಸಿಎಂ ವಿರೋಧಿ ಪಡೆ ಶಾಸಕಾಂಗ ಪಕ್ಷದ ಸಭೆಗೆ ಪಟ್ಟು.. ಬಿಜೆಪಿ ಹೈಕಮಾಂಡ್‌ಗೆ ಬಿಎಸ್‌ವೈ ಬಿಸಿ ತುಪ್ಪ..