ETV Bharat / state

ಬೆಂಗಳೂರಿನ ಕೋವಿಡ್ ಸೋಂಕಿತರ ಸಂಖ್ಯೆ 1,505ಕ್ಕೆ ಏರಿಕೆ: 73ಕ್ಕೇರಿದ ಮರಣ ಪ್ರಮಾಣ - Bangalore increase to 1,505

ನಗರದಲ್ಲಿ ಇಂದು ಕೂಡಾ ನೂರರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ. 107 ಮಂದಿಯಲ್ಲಿ ಕೋವಿಡ್​​ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,505ಕ್ಕೆ ಏರಿಕೆಯಾಗಿದೆ.

ಕೋವಿಡ್
ಕೋವಿಡ್
author img

By

Published : Jun 23, 2020, 9:45 PM IST

ಬೆಂಗಳೂರು: ನಗರದಲ್ಲಿ ಇಂದು ಕೂಡಾ ನೂರರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ. 107 ಮಂದಿಯಲ್ಲಿ ಕೋವಿಡ್​​ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,505ಕ್ಕೆ ಏರಿಕೆಯಾಗಿದೆ.

32, 67, 40 ವರ್ಷದ ಮೂವರು ಸೋಂಕಿತರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದರೇ, 81,47, 85 ವರ್ಷ ಮೂವರು ತೀವ್ರ ಸೋಂಕಿನ ಲಕ್ಷಣ ಹಾಗೂ ಉಸಿರಾಟದ ಸಮಸ್ಯೆಯಿಂದ ಕೋವಿಡ್​ಗೆ ಬಲಿಯಾಗಿದ್ದಾರೆ.

ಐಸಿಯುನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, 81ಕ್ಕೆ ಏರಿಕೆಯಾಗಿದೆ. ನಗರದ ಕಂಟೈನ್​ನ್ಮೆಂಟ್ ಪ್ರದೇಶಗಳ ಸಂಖ್ಯೆ 502ಕ್ಕೆ ಏರಿಕೆಯಾಗಿದೆ. ಸದ್ಯ 458 ಸಕ್ರಿಯ ಕಂಟೈನ್​ನ್ಮೆಂಟ್ ಪ್ರದೇಶಗಳಿವೆ. ಕೋವಿಡ್ ಸಕ್ರಿಯ ಪ್ರಕರಣಗಳು ಶೇಕಡಾ 68 ರಷ್ಟಿವೆ. ಪ್ರೈಮರಿ ಕಾಂಟ್ಯಾಕ್ಟ್ 2,245 ಹಾಗೂ 6,350 ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ.

ಇಂದು 24 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 435 ಮಂದಿ ಗುಣಮುಖರಾಗಿದ್ದಾರೆ. ಆರು ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ. ಈ ವರೆಗೆ ಒಟ್ಟು ಮೃತಪಟ್ಟವರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.