ETV Bharat / state

ಬೆಂಗಳೂರಲ್ಲಿ Covid​​ 1st, 2nd ಅಲೆಗೆ ಮೃತರಾದವರೆಷ್ಟು? ವರದಿ ಬಿಡುಗಡೆಗೆ BBMP ಸಿದ್ಧತೆ - bengaluru Covid death report

ಕೋವಿಡ್​ ಎರಡನೇ ಅಲೆ(Covid 2nd)ಯಲ್ಲೂ ಕೂಡ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಕೊರೊನಾಗೆ ಬಲಿಯಾಗಿದ್ದಾರೆ. 70 ವರ್ಷಕ್ಕಿಂತ ಮೇಲ್ಪಟ್ಟ 3,994 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 1,458 ಮಹಿಳೆಯರು ಮತ್ತು 2,536 ಮಂದಿ ಪುರುಷರು ಮೃಪಟ್ಟಿದ್ದಾರೆ.

covid-death-report-released-by-bbmp
ಡೆತ್ ಆಡಿಟ್ ವರದಿ
author img

By

Published : Nov 13, 2021, 3:26 PM IST

Updated : Nov 13, 2021, 6:37 PM IST

ಬೆಂಗಳೂರು: ದೇಶದಲ್ಲಿ ಕೊರೊನಾ ಲಸಿಕೆ‌ (Covid-19 Vaccine) ಲಭ್ಯವಾಗುತ್ತಿದ್ದಂತೆ ಜನರು ಕ್ಯೂ ನಿಂತು ವ್ಯಾಕ್ಸಿನ್​ ಹಾಕಿಸಿಕೊಳ್ಳುತ್ತಿದ್ದರು. ಸೋಂಕಿನಿಂದ ಗುಣಮುಖರಾದವರು ಲಸಿಕೆ ಪಡೆಯಲು ಮೂರು ತಿಂಗಳು ಕಾದಿದ್ದರು. ಆದರೆ ಮೊದಲ ಡೋಸ್ ಪಡೆಯಲು ಆಸಕ್ತಿ ತೋರಿದ್ದ ಜನರು ಎರಡನೇ ಡೋಸ್ (Covid Second Dose) ಹಾಕಿಸಿಕೊಳ್ಳಲು​ ಹಿಂದೇಟು ಹಾಕುತ್ತಿದ್ದಾರೆ.

ಆದಷ್ಟು ಬೇಗ ಲಸಿಕೆ ಪಡೆಯದಿದ್ದರೆ ಜನರಿಗೆ ಸಂಕಷ್ಟ ಎದುರಾಗಲಿದೆ. ಈ ಬಗ್ಗೆ ಬಿಬಿಎಂಪಿ(BBMP) ಎಚ್ಚರಿಕೆ ನೀಡಿದೆ. ಕೊರೊನಾ ಮೊದಲ ಅಲೆ (Covid first Wave), ಎರಡನೇ ಅಲೆ ಸಾವಿನ ಪರಿಶೋಧನಾ ವರದಿ (death audit report) ಬಿಡುಗಡೆಗೆ ಪಾಲಿಕೆ ಸಿದ್ಧತೆ ನಡೆಸುತ್ತಿದೆ. ಮುಂದಿನ ವಾರ ಆರೋಗ್ಯ ಸಚಿವರ ಸಮ್ಮುಖದಲ್ಲಿ ಕೊರೊನಾ ಡೆತ್ ಆಡಿಟ್ ವರದಿ ಬಿಡುಗಡೆ ಮಾಡಲಾಗುತ್ತಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್​(covid-19)ಗೆ ಬಲಿಯಾದವರ ಸಂಖ್ಯೆಯ ಕುರಿತು ಮಾಹಿತಿ ನೀಡಲಾಗುತ್ತಿದೆ.

ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಮಾಹಿತಿ

ಕೋವಿಡ್​ಗೆ (Covid) ಹೆಚ್ಚಾಗಿ ಯಾವ ವಯಸ್ಸಿನವರು ಬಲಿಯಾಗಿದ್ದಾರೆ ಎಂಬ ಅಂಕಿ ಅಂಶಗಳನ್ನ ಪಾಲಿಕೆ ನೀಡಿದೆ. ಮೊದಲ, ಎರಡನೇ ಅಲೆಯಲ್ಲಿ(Covid Second Wave) ಬೆಂಗಳೂರಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಒಟ್ಟು 16,307, ಈ ಪೈಕಿ 4,480 ಮೊದಲ ಅಲೆಯಲ್ಲಿ ಮತ್ತು 11,827 ಮಂದಿ ಎರಡನೇ ಅಲೆಯಿಂದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೊರೊನಾ ಡೆತ್ ಆಡಿಟ್ ವರದಿ ಬಿಡುಗಡೆಯಾಗಲಿದೆ. 'ಈಟಿವಿ ಭಾರತ'(ETV Bharat)ಕ್ಕೆ ಸದ್ಯ ಲಭ್ಯವಾಗಿರುವ ವಿವರ ಇಲ್ಲಿದೆ.

ಮೊದಲ ಅಲೆಯಲ್ಲಿ ಸಾವನ್ನಪ್ಪಿದವರ ವಿವರ:

ಪುರುಷರು : 3,048

ಮಹಿಳೆಯರು : 1,431

ತೃತೀಯ ಲಿಂಗಿಗಳು : 01

ಒಟ್ಟು : 4,480

ಮೊದಲ ಅಲೆಯಲ್ಲಿ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಮೃತಪಟ್ಟಿ​ದ್ದು, 1,459 ಮಂದಿ ಬಲಿಯಾಗಿದ್ದಾರೆ. ಈ ಪೈಕಿ 439 ಮಹಿಳೆಯರು ಮತ್ತು 1,020 ಮಂದಿ ಪರುಷರು ಸೇರಿದ್ದಾರೆ.

ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ವಿವರ:

ಪುರುಷರು : 7,271

ಮಹಿಳೆಯರು : 4,553

ತೃತೀಯ ಲಿಂಗಿಗಳು : 03

ಒಟ್ಟು : 11,827

ಎರಡನೇ ಅಲೆಯಲ್ಲೂ ಕೂಡ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಕೊರೊನಾಗೆ ಬಲಿಯಾಗಿದ್ದಾರೆ. 70 ವರ್ಷಕ್ಕಿಂತ ಮೇಲ್ಪಟ್ಟ 3,994 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 1,458 ಮಹಿಳೆಯರು ಮತ್ತು 2,536 ಮಂದಿ ಪುರುಷರು ಇದ್ದಾರೆ.

ಮೊದಲ ಅಲೆಯಲ್ಲಿ ಸಾವನ್ನಪ್ಪಿದವರ ವಯಸ್ಸಿನ ವಿವರ:

ವಯಸ್ಸು - ಸಾವು
00 – 09 : 10
10 – 19 : 16
20 – 29 : 87
30 - 39 : 217
40 – 49 : 499
50 - 59 : 976
60 - 69 : 1,216
70+ : 1,459

ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ವಯಸ್ಸಿನ ವಿವರ:

ವಯಸ್ಸು - ಸಾವು
00 – 09 : 11
10 – 19 : 12
20 – 29 : 198
30 - 39 : 736
40 – 49 : 1,547
50 - 59 : 2,380
60 - 69 : 2,949
70+ : 3,994

ಇದನ್ನೂ ಓದಿ: Tumkur: ಅಪ್ರಾಪ್ತೆ ಮೇಲೆ ಅತ್ಯಾಚಾರ..ಅಪರಾಧಿಗೆ ಕಠಿಣ ಶಿಕ್ಷೆ

Last Updated : Nov 13, 2021, 6:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.