ETV Bharat / state

ಬೆಂಗಳೂರಲ್ಲಿ ಅಬ್ಬರಿಸುತ್ತಿದೆ ಕೋವಿಡ್: ಅಗತ್ಯಬಿದ್ರೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ.. - Bengaluru covid cases increased

ಮೂರಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣ ಕಂಡುಬರುವ ಪ್ರದೇಶಗಳನ್ನು ಕ್ಲಸ್ಟರ್​ಗಳನ್ನಾಗಿ ಮಾಡಲಾಗುತ್ತಿದೆ. ಆದರೂ ಸೋಂಕು ವೇಗವಾಗಿ ಹರಡುತ್ತಿದ್ದು, ಭೀತಿಗೆ ಕಾರಣವಾಗಿದೆ. ಆದರೆ, ಆಸ್ಪತ್ರೆ ಸೇರುತ್ತಿರುವವರ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ ವಿಚಾರವಾಗಿದೆ.

corona
ಕೊರೊನಾ
author img

By

Published : Jan 3, 2022, 8:22 PM IST

ಬೆಂಗಳೂರು: ಒಮಿಕ್ರಾನ್ ಏರಿಕೆಯಾಗುತ್ತಿರುವ ಭೀತಿಯ ನಡುವೆಯೇ ನಗರದ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ವಾರದ ಅಂತರದಲ್ಲಿ ಸಾವಿರಕ್ಕೆ ಏರಿಕೆಯಾಗಿದೆ. ಇಂದು 1041 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 9,575 ತಲುಪಿದೆ. ಮೂವರು ಮೃತಪಟ್ಟಿದ್ದು, ಇಂದು 134 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಗು ಸಿಸಿಸಿ ಕೇಂದ್ರದಲ್ಲಿ ಜನವರಿ 2ರ ವರೆಗೆ ಜನರಲ್ ಬೆಡ್​ನಲ್ಲಿ 17 ಮಂದಿ, ಹೆಚ್​ಡಿಯುನಲ್ಲಿ 30, ಐಸಿಯು ಬೆಡ್‌ನಲ್ಲಿ 6 ಮಂದಿ, ಐಸಿಯು+ವೆಂಟಿಲೇಟರ್​ನಲ್ಲಿ 1, ಒಟ್ಟು 54 ಹಾಸಿಗೆಗಳಲ್ಲಿ ಕೋವಿಡ್ ರೋಗಿಗಳು ದಾಖಲಾಗಿದ್ದಾರೆ. ಸೋಂಕು ಹರಡುವಿಕೆಯಲ್ಲಿ ಕೋವಿಡ್ ಮೊದಲು ಹಾಗೂ 2ನೇ ಅಲೆಗಿಂತಲೂ 3ನೇ ಅಲೆಯಲ್ಲಿ ವೇಗವಾಗಿ ಹರಡುತ್ತಿದೆ.

ಮೂರಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣ ಕಂಡುಬರುವ ಪ್ರದೇಶಗಳನ್ನು ಕ್ಲಸ್ಟರ್​ಗಳನ್ನಾಗಿ ಮಾಡಲಾಗುತ್ತಿದೆ. ಆದರೂ ವೇಗವಾಗಿ ಹರಡುತ್ತಿದ್ದು, ಭೀತಿಗೆ ಕಾರಣವಾಗಿದೆ. ಆದರೆ, ಆಸ್ಪತ್ರೆ ಸೇರುತ್ತಿರುವವರ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ ವಿಚಾರವಾಗಿದೆ.

ಒಮಿಕ್ರಾನ್ ಅತಿಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ 8ನೇ ಸ್ಥಾನದಲ್ಲಿದ್ದು, ಈವರೆಗೆ 64 ಪ್ರಕರಣಗಳು ದೃಢಪಟ್ಟಿವೆ.

ಬಿಬಿಎಂಪಿ ವಲಯವಾರು ಕೋವಿಡ್-19 ಸಹಾಯವಾಣಿ ಸಂಖ್ಯೆಗಳು ಹೀಗಿವೆ.

1. ಬೊಮ್ಮನಹಳ್ಳಿ 8884666670
2. ದಾಸರಹಳ್ಳಿ‌ 94806 83132
3. ಬೆಂಗಳೂರು ಪೂರ್ವ 9480685163
4. ಮಹದೇವಪುರ 08023010102
5. ಆರ್. ಆರ್. ನಗರ 08028601050.
6. ದಕ್ಷಿಣ 8431816718
7. ಪಶ್ಚಿಮ 08068248454
8. ಯಲಹಂಕ 9480685961

ಇದನ್ನೂ ಓದಿ: ಚಿಕ್ಕಮಗಳೂರಿನ ಕಾಲೇಜಿನಲ್ಲಿ ಮತ್ತೆ ಸ್ಕಾರ್ಫ್​- ಕೇಸರಿ ಶಾಲು ವಿವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.