ಬೆಂಗಳೂರು: ಕೆಲ ಆಯ್ದ ಸರ್ಕಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೆಕೆಂಡ್ ಡೋಸ್ ಕೋವ್ಯಾಕ್ಸಿನ್ ಇಂದಿನಿಂದ ಲಭ್ಯವಾಗಿದೆ. ಈ ಮೊದಲು ಸೆಕೆಂಡ್ ಡೋಸ್ ಕೋವ್ಯಾಕ್ಸಿನ್ ಸಿಗದೆ ಸಾವಿರಾರು ಮಂದಿ ಪರದಾಡುತ್ತಿದ್ದರು. ಸದ್ಯಕ್ಕೆ ಸಿಲಿಕಾನ್ ಸಿಟಿ ಮಂದಿಗೆ ಬಿಗ್ ರಿಲೀಫ್ ಸಿಗಲಿದೆ. ಬಿಬಿಎಂಪಿ 8 ವಲಯಗಳಲ್ಲಿ ಕೆಲವು ಆಯ್ದ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಹಾಕುವ ವ್ಯವಸ್ಥೆ ಮಾಡಲಾಗಿದೆ.
27 ಸರ್ಕಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಮೇ 31 ರಿಂದ ಲಭ್ಯವಿರಲಿದೆ ಹಾಗು 2ನೇ ಡೋಸ್ಗೆ ಕಾಯುತ್ತಿರುವವರು ನೇರವಾಗಿ ವಾಕ್ ಇನ್ ಮೂಲಕ ಬಂದು ಲಸಿಕೆ ಪಡೆಯಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನಿನ್ನೆ ಮಾಹಿತಿ ನೀಡಿದ್ದರು.
ಕೋವ್ಯಾಕ್ಸಿನ್ 2ನೇ ಡೋಸ್ ಎಲ್ಲೆಲ್ಲಿ ಲಭ್ಯವಾಗಿರಲಿದೆ?:
1.ಬೊಮ್ಮನಹಳ್ಳಿ ವಲಯ:
- ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ - ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರ
- ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ - ಅರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ
2.ದಾಸರಹಳ್ಳಿ ವಲಯ:
- ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ- ನೆಲಮಹೇಶ್ವರಿ ಪ್ರಾಥಮಿಕ ಆರೋಗ್ಯ ಕೇಂದ್ರ
3.ಬೆಂಗಳೂರು ಪೂರ್ವ ವಲಯ:
- ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ - ಸಿವಿ ರಾಮನ್ ಪ್ರಾಥಮಿಕ ಆರೋಗ್ಯ ಕೇಂದ್ರ
- ಹೆಬ್ಬಾಳ ವಿಧಾನಸಭಾ ಕ್ಷೇತ್ರದ - ಗಂಗಾನಗರ ಪ್ರಾಥಮಿಕ ಆರೋಗ್ಯ ಕೇಂದ್ರ
- ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ - ರಾಬರ್ಟ್ಸನ್ ಸ್ಟ್ರೀಟ್ ಪ್ರಾಥಮಿಕ ಆರೋಗ್ಯ ಕೇಂದ್ರ
- ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ - ಕಾಚರಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ
- ಶಾಂತಿನಗರ ವಿಧಾನಸಭಾ ಕ್ಷೇತ್ರದ - ಶಾಂತಲನಗರ ಪ್ರಾಥಮಿಕ ಆರೋಗ್ಯ ಕೇಂದ್ರ
- ಶಿವಾಜಿನಗರ ವಿಧಾನಸಭಾ ಕ್ಷೇತ್ರದ - ಬೌರಿಂಗ್ ಆಸ್ಪತ್ರೆ
4.ಮಹದೇವಪುರ ವಲಯ:
- ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ - ಕೆ.ನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರ
- ಮಹದೇವಪುರ ವಿಧಾನಸಭಾ ಕ್ಷೇತ್ರದ - ದೊಡ್ಡನೆಕುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ
5.ಆರ್.ಆರ್.ನಗರ ವಲಯ:
- ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ - ಮತ್ತಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ
- ಯಶವಂತಪುರ ವಿಧಾನಸಭಾ ಕ್ಷೇತ್ರದ - ಕೆಂಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ
6.ಬೆಂಗಳೂರು ದಕ್ಷಿಣ ವಲಯ:
- ಬಸವನಗುಡಿ ವಿಧಾನಸಭಾ ಕ್ಷೇತ್ರದ - ವಿದ್ಯಾಪೀಠ ಪ್ರಾಥಮಿಕ ಆರೋಗ್ಯ ಕೇಂದ್ರ
- ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ - ಆಡುಗೋಡಿ ಪ್ರಾಥಮಿಕ ಆರೋಗ್ಯ ಕೇಂದ್ರ
- ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ - ದಾಸಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ
- ಜಯನಗರ ವಿಧಾನಸಭಾ ಕ್ಷೇತ್ರದ - ಜಯನಗರ ಆಸ್ಪತ್ರೆ
- ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ - ಕೆ.ಎಸ್ ಲೇಔಟ್ ಪ್ರಾಥಮಿಕ ಆರೋಗ್ಯ ಕೇಂದ್ರ
- ವಿಜಯನಗರ ವಿಧಾನಸಭಾ ಕ್ಷೇತ್ರದ - ಬಾಪೂಜಿನಗರ ಪ್ರಾಥಮಿಕ ಆರೋಗ್ಯ ಕೇಂದ್ರ
7.ಬೆಂಗಳೂರು ಪಶ್ಚಿಮ ವಲಯ:
- ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ - ವಿಕ್ಟೋರಿಯಾ ಆಸ್ಪತ್ರೆ
- ಗಾಂಧಿನಗರ ವಿಧಾನಸಭಾ ಕ್ಷೇತ್ರದ - ಕೆ.ಸಿ ಜನರಲ್ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ
- ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ - ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ
- ಮಹಾಲಕ್ಷ್ಮಿಪುರ ವಿಧಾನಸಭಾ ಕ್ಷೇತ್ರದ - ಶಂಕರನಗರ ಪ್ರಾಥಮಿಕ ಆರೋಗ್ಯ ಕೇಂದ್ರ
- ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ - ಪಿ.ಜಿ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ
- ರಾಜಾಜಿನಗರ ವಿಧಾನಸಭಾ ಕ್ಷೇತ್ರದ - ರಾಜಾಜಿನಗರ ಪ್ರಾಥಮಿಕ ಆರೋಗ್ಯ ಕೇಂದ್ರ
8.ಯಲಹಂಕ ವಲಯ:
- ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ - ತಿಂಡ್ಲು ಪ್ರಾಥಮಿಕ ಆರೋಗ್ಯ ಕೇಂದ್ರ
- ಯಲಹಂಕ ವಿಧಾನಸಭಾ ಕ್ಷೇತ್ರದ - ಎಂ.ಎಸ್ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರ