ETV Bharat / state

ಮುರುಘಾಮಠದ ಜಮೀನು ಮಾರಾಟ ಆರೋಪ: ಮುರುಘಾ ಶರಣರ ವಿರುದ್ಧ ಬಾಡಿ ವಾರಂಟ್ ಜಾರಿ - etv bharat kannada

ಮುರುಘಾ ಮಠಕ್ಕೆ ಸೇರಿದ ಜಮೀನು ಅಕ್ರಮ ಮಾರಾಟ ಆರೋಪದ ಮೇಲೆ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಬೆಂಗಳೂರಿನ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯವು ಬಾಡಿ ವಾರೆಂಟ್‌ ಜಾರಿ ಮಾಡಿದೆ.

court-issued-body-warrant-against-murugha-mutt-swamiji
ಮುರುಘಾ ಶರಣರ ವಿರುದ್ಧ ಬಾಡಿ ವಾರೆಂಟ್ ಜಾರಿ
author img

By

Published : Jan 6, 2023, 9:40 PM IST

ಬೆಂಗಳೂರು: ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಚಿತ್ರದುರ್ಗ ಮುರುಘಾ ಮಠಕ್ಕೆ ಸೇರಿದ 7 ಎಕರೆ 18 ಗುಂಟೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಲ್ಲಿ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನಗರದ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ಬಾಡಿ ವಾರಂಟ್‌ ಹೊರಡಿಸಿದೆ. ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅವರನ್ನು, ಚಿತ್ರದುರ್ಗ ಜಿಲ್ಲಾ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌, ಫೆಬ್ರವರಿ 9ರಂದು ಕೋರ್ಟ್‌ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.

ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರಿನ ಹೃದಯಭಾಗದ ಗಾಂಧಿನಗರದಲ್ಲಿ ಚಿತ್ರದುರ್ಗ ಮರುಘರಾಜೇಂದ್ರ ಬೃಹನ್ಮಠಕ್ಕೆ ಸೇರಿದ 'ತಿಪ್ಪಶೆಟ್ಟಿ' ಎಂಬ ಹೆಸರಿನ ಶಾಖಾ ಮಠ ಇದೆ. ಈ ಮಠಕ್ಕೆ ಬೆಂಗಳೂರು ದಕ್ಷಿಣ ಕೆಂಗೇರಿ ಹೋಬಳಿಯ ಸೂಲಿಕರೆ ಗ್ರಾಮದಲ್ಲಿ ಸರ್ವೇ ನಂಬರ್ 34ರಲ್ಲಿ 7 ಎಕರೆ 18 ಗುಂಟೆ ಜಮೀನಿದೆ. ಮಠದ ಈ ಬೆಲೆಬಾಳುವ ಸ್ವತ್ತು, ಮಠಕ್ಕೆ ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷರಾಗಿದ್ದಾರೆ. ಈ ಜಮೀನನ್ನು ಆನಂದಕುಮಾರ್ ಎಂಬುವರಿಗೆ ಅಕ್ರಮ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ತುಮಕೂರಿನ ಪಿ.ಎಸ್.ಪ್ರಕಾಶ್‌ ಬಿನ್‌ ಸಂಗಪ್ಪ ಎಂಬುವರು 2013ರಲ್ಲಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶರಣರು ಮೊದಲ ಆರೋಪಿ ಮತ್ತು ಆನಂದಕುಮಾರ್ ಎರಡನೇ ಆರೋಪಿಯಾಗಿದ್ದರು.

ಕಡಿಮೆ ದರಕ್ಕೆ ಮಾರಾಟ: ಆರೋಪಿಗಳಾದ ಶರಣರು ಮತ್ತು ಆನಂದಕುಮಾರ್ 7 ಎಕರೆ 18 ಗುಂಟೆ ಜಮೀನನ್ನು ಅಕ್ರಮವಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಕ್ರಯ ಮಾಡಿಸಿಕೊಂಡಿರುತ್ತಾರೆ. ಈ ಜಮೀನನ್ನು ಮಾರಾಟ ಮಾಡುವ ಮುನ್ನ ಈ ವಿಷಯವನ್ನು ಶರಣರು ಭಕ್ತರ ಗಮನಕ್ಕೆ ತಂದಿರುವುದಿಲ್ಲ. ಅಂತೆಯೇ ಯಾವುದೇ ಸಾರ್ವಜನಿಕ ಪ್ರಕಟಣೆಯನ್ನೂ ನೀಡಿರುವುದಿಲ್ಲ ಎಂದು ಪ್ರಕಾಶ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಶಿಕ್ಷಣ ಕಾಯಿದೆಯ ಕೆಲವು ಸೆಕ್ಷನ್‌ ಅಸಾಂವಿಧಾನಿಕ ಎಂದು ಪ್ರಕಟಿಸಿದ ಹೈಕೋರ್ಟ್: ಸರ್ಕಾರಕ್ಕೆ ತೀವ್ರ ಹಿನ್ನಡೆ

ಈ ಜಮೀನಿನ ಬೆಲೆ 2008ರಲ್ಲಿ 1 ಎಕರೆಗೆ 50 ಲಕ್ಷ ರೂಪಾಯಿ ಮೌಲ್ಯ ಹೊಂದಿದ್ದು, 7 ಎಕರೆಗೆ ಸುಮಾರು 3.72 ಕೋಟಿ ಆಗಿರುತ್ತದೆ. ಸಬ್‌ ರಿಜಿಸ್ಟ್ರಾರ್ ಕಚೇರಿಗೆ ನೋಂದಣಿ ಶುಲ್ಕವಾಗಿಯೇ 30 ಲಕ್ಷ ರೂಪಾಯಿ ಕಟ್ಟಬೇಕಾಗಿರುತ್ತದೆ. ಆದರೆ, ಇಷ್ಟೂ ಜಮೀನನ್ನು ಕೇವಲ 49 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಈ ಜಮೀನಿನ ಬೆಲೆ ಪ್ರಸ್ತುತ 1 ಕೋಟಿ ರೂಪಾಯಿ ಇದೆ. ಇದರಿಂದ ಮಠಕ್ಕೆ ಸುಮಾರು 7 ಕೋಟಿ ರೂಪಾಯಿ ನಷ್ಟ ಉಂಟಾಗಿರುತ್ತದೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ಇದನ್ನೂ ಓದಿ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಾಗಣ್ಣಗೌಡ ನೇಮಕ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್​​ ನೋಟಿಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.