ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಟೂರ್ನಿ ಕೆಪಿಎಲ್ ಎಂಟನೇ ಆವೃತ್ತಿಗೆ ದಿನಗಣನೆ ಶುರುವಾಗಿದ್ದು, ಇಂದು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಮಳೆ ಮತ್ತು ಇನ್ನಿತರ ಅಂಶಗಳನ್ನು ಗಮನದಲ್ಲಿರಿಸಿಕೊಂಡಿದ್ದು, ಈ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಕೇವಲ 15 ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನಲ್ಲಿ ಆಗಸ್ಟ್ 16 ರಿಂದ ಶುರುವಾಗುವ ಈ ಮ್ಯಾಚ್ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಅಂತ್ಯಗೊಳ್ಳಲಿದೆ.
ಈ ಬಾರಿಯೂ ಪ್ರತಿ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರಗೊಳ್ಳಲಿದೆ. ಸದ್ಯ ಕಳೆದ ಬಾರಿಯಂತೆ ಈ ಬಾರಿಯೂ ಏಳು ತಂಡಗಳಿದ್ದು, ಈಗಾಗಲೇ ತಮಗೆ ಬೇಕಾದಂತಹ ಇಬ್ಬರು ಆಟಗಾರರನ್ನು ಏಳು ತಂಡಗಳು ರೀಟೈನ್ ಮಾಡಿಕೊಂಡಿದೆ.
ವಿವರ:
ಬಿಜಾಪುರ್ ಬುಲ್ಸ್: ಭರತ್ ಚಿಪ್ಲಿ, ಕರಿಯಪ್ಪ ಕೆಸಿ.
ಮೈಸೂರು ವಾರಿಯರ್ಸ್: ಸುಚಿತ್.ಜೆ, ವೈಶಾಕ್ ವಿಜಯ್ ಕುಮಾರ್.
ಬಳ್ಳಾರಿ ಟಸ್ಕರ್ಸ್: ಸಿಎಂ ಗೌತಮ್, ದೇವದತ್ ಪಡಿಕ್ಕಲ್.
ಬೆಳಗಾವಿ ಪ್ಯಾಂಥರ್ಸ್: ಶುಭಾಂಗ್ ಹೆಗಡೆ, ಅವಿನಾಶ್ ಡಿ.
ಬೆಂಗಳೂರು ಬ್ಲಾಸ್ಟರ್ಸ್ಸ್: ಕೌಶಿಕ್ ವಿ, ಮನೋಜ್ ಭಂಡಗೆ.
ಶಿವಮೊಗ್ಗ ಲಯನ್ಸ್: ನಿಹಾಲ್ ಉಳ್ಳಲ್, ಪೃಥ್ವಿರಾಜ್ ಶೇಖವತ್.
ಹುಬ್ಬಳ್ಳಿ ಟೈಗರ್ಸ್: ವಿನಯ್ ಕುಮಾರ್, ಪ್ರವೀಣ್ ದುಬೆ.