ETV Bharat / state

ವಕೀಲರ ಸಂಘಗಳ ವಿರುದ್ಧ ಪರಿಷತ್ ಕ್ರಮಕೈಗೊಳ್ಳಬೇಕು : ಹೈಕೋರ್ಟ್

ಅರ್ಜಿ ವಿಚಾರಣೆ ವೇಳೆ ಮೈಸೂರು ಜಿಲ್ಲಾ ವಕೀಲರ ಸಂಘ ವಾದಿಸಿ, ಅಂತಹ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಆದರೆ, ಯಾರೋ ದುಷ್ಕರ್ಮಿಗಳು ನೋಟಿಸ್ ಬೋರ್ಡ್​ನಲ್ಲಿ ಅಂತಹ ಸಂದೇಶ ಹಾಕಿದ್ದರು..

highcourt
highcourt
author img

By

Published : Apr 24, 2021, 10:25 PM IST

ಬೆಂಗಳೂರು : ಆರೋಪಿಗಳ ಪರ ವಕಾಲತ್ತು ಹಾಕದಂತೆ ನಿರ್ಣಯ ಕೈಗೊಳ್ಳುವ ವಕೀಲರ ಸಂಘಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಆದೇಶಿಸಿದೆ.

ಕಳೆದ ವರ್ಷ ಮೈಸೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಭಿತ್ತಿ ಪತ್ರ ಪ್ರದರ್ಶನ ಮಾಡಿದ್ದ ಪ್ರಕರಣದಲ್ಲಿ ಆರೋಪಿ ನಳಿನಿ ಬಾಲಕುಮಾರ್ ಪರ ವಕಾಲತ್ತು ಹಾಕದಂತೆ ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಣಯ ಕೈಗೊಂಡಿದೆ ಎಂದು ಆರೋಪಿಸಿ ತುಮಕೂರಿನ ವಕೀಲ ರಮೇಶ್ ಎಲ್. ನಾಯಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಎ.ಎಸ್. ಮೊಹಮ್ಮದ್ ರಫಿ ವರ್ಸಸ್ ಸ್ಟೇಟ್ ಆಫ್ ತಮಿಳುನಾಡು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಸಾರಾಂಶ ಉಲ್ಲೇಖಿಸಿರುವ ಹೈಕೋರ್ಟ್, ವಕೀಲರ ಸಂಘಗಳು ಆರೋಪಿಗಳ ಪರ ವಕಾಲತ್ತು ಹಾಕದಂತೆ ನಿರ್ಣಯ ಕೈಗೊಳ್ಳುವುದು ಕಾನೂನು ಬಾಹಿರ ಕ್ರಮವಾಗುತ್ತದೆ.

ಹೀಗಾಗಿ, ಮುಂದಿನ ದಿನಗಳಲ್ಲಿ ಯಾವುದೇ ವಕೀಲರ ಸಂಘ ಆರೋಪಿಗಳ ಪರ ವಕಾಲತ್ತು ವಹಿಸದಂತೆ ನಿರ್ಣಯ ಕೈಗೊಂಡಲ್ಲಿ ಪರಿಷತ್ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

ಅರ್ಜಿ ವಿಚಾರಣೆ ವೇಳೆ ಮೈಸೂರು ಜಿಲ್ಲಾ ವಕೀಲರ ಸಂಘ ವಾದಿಸಿ, ಅಂತಹ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಆದರೆ, ಯಾರೋ ದುಷ್ಕರ್ಮಿಗಳು ನೋಟಿಸ್ ಬೋರ್ಡ್​ನಲ್ಲಿ ಅಂತಹ ಸಂದೇಶ ಹಾಕಿದ್ದರು.

ಅದನ್ನು ತಕ್ಷಣವೇ ತೆರವು ಮಾಡಲಾಗಿತ್ತು. ಜತೆಗೆ ಸಂಘದ ವಕೀಲರು ಆರೋಪಿ ಪರ ವಕಾಲತ್ತು ಹಾಕಿದ್ದರು. ಈಗಾಗಲೇ ಆರೋಪಿಗೆ ಜಾಮೀನು ಸಿಕ್ಕಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಕೀಲರ ಸಂಘದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಅರ್ಜಿ ವಿಲೇವಾರಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.