ETV Bharat / state

ಕಾರಾಗೃಹಗಳ ಅಕ್ರಮದ ಮೇಲೆ ಬೆಳಕು ಚೆಲ್ಲಿದ ಸಮಿತಿ ವರದಿ.. - council session in bangalore

ರಾಜ್ಯದ ಬಹುತೇಕ ಕಾರಾಗೃಹಗಳಲ್ಲಿನ ಜಾಮರ್​ಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ಮೊಬೈಲ್ ಸಿಗ್ನಲ್‍ಗಳು ದೊರೆಯುತ್ತಿದ್ದವು. ವಿಡಿಯೋ ಕಾನ್ಫ್‌ರೆನ್ಸ್​ ವ್ಯವಸ್ಥೆಯಲ್ಲಿ ಶೇ.43ರಷ್ಟು ಕೈದಿಗಳನ್ನು ಮಾತ್ರ ವಿಚಾರಣೆ ಮಾಡಲಾಗುತ್ತಿತ್ತು. ಪರಾರಿಯಾಗಿದ್ದ 44 ಕೈದಿಗಳ ಪೈಕಿ ಈವರೆಗೆ ಯಾರನ್ನೂ ಮರು ಬಂಧಿಸಿಲ್ಲ. ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿಲ್ಲ ಎಂಬುದೂ ಸೇರಿದಂತೆ ಕಾರಾಗೃಹದಲ್ಲಿನ ಅಕ್ರಮಗಳನ್ನು ವರದಿಯಲ್ಲಿ ಬಯಲಿಗೆಳೆಯಲಾಗಿದೆ.

council session in bangalore
ವಿಧಾನಸಭೆ ಕಲಾಪದ ವೇಳೆ
author img

By

Published : Mar 10, 2020, 11:14 PM IST

ಬೆಂಗಳೂರು: ಕಾರಾಗೃಹಗಳಲ್ಲಿ ಬಳಸಲು ಖರೀದಿಸಿದ್ದ 105 ಹ್ಯಾಂಡ್ ಮೆಟಲ್ ಡಿಟೆಕ್ಟರ್​ಗಳ ಪೈಕಿ 60 ಡಿಟೆಕ್ಟರ್ ಕಾರ್ಯ ನಿರ್ವಹಿಸುತ್ತಿವೆ. ಇನ್ನೂ 59 ಡೋರ್ ಫ್ರೇಮ್ ಡಿಟೆಕ್ಟರ್​ಗಳ ಪೈಕಿ 41 ಉಪಕರಣಗಳು ಮೂಲೆಗುಂಪಾಗಿವೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

council session in bangalore
ವಿಧಾನ ಪರಿಷತ್‌ ಕಲಾಪ..

ವಿಧಾನಸಭೆಯಲ್ಲಿ ಇಂದು (ಮಾ.10) ಮಂಡನೆಯಾದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ 2019-20ರ 2ನೇ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಉಪಕರಣಗಳನ್ನು ದುರಸ್ತಿಗೊಳಿಸಲು ಒಳಾಡಳಿತ ಇಲಾಖೆ ಯಾವ ಕ್ರಮಕೈಗೊಳ್ಳಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.

ಕಾರಾಗೃಹ ಸಿಬ್ಬಂದಿ ಊಟದ ಡಬ್ಬಿ, ಬ್ಯಾಗ್‍ಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಶೋಧಕ ಯಂತ್ರಗಳಿಗೆ ಒಳಪಡಿಸಿರಲಿಲ್ಲ ಎಂಬುದರ ಪ್ರಸ್ತಾಪವನ್ನು ಮಾಡಲಾಗಿದೆ. 2010-15 ಅವಧಿಯಲ್ಲಿ ನಿಷೇಧಿತ ವಸ್ತುಗಳಾದ 4437 ಮೊಬೈಲ್ ಫೋನ್, 3116 ಸಿಮ್ ಕಾರ್ಡ್, 1211 ಮೊಬೈಲ್ ಚಾರ್ಜ್‍ಗಳು, 3307 ಬ್ಯಾಟರಿಗಳು ಹಾಗೂ 43,778 ಕೆಜಿ ಮಾದಕ ವಸ್ತುಗಳನ್ನು ಕಾರಾಗೃಹಗಳ ಪರಿಶೀಲನೆ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿತ್ತು ಎಂಬುದು ಸೇರಿದಂತೆ ಒಳಾಡಳಿತ ಇಲಾಖೆಯಲ್ಲಿನ ಅಕ್ರಮಗಳನ್ನು ವರದಿಯಲ್ಲಿ ಎತ್ತಿ ತೋರಿಸಲಾಗಿದೆ.

ಕಾರಾಗೃಹ ಕೈ ಪಿಡಿಯನ್ನು 1978ರಲ್ಲಿ ಜಾರಿಗೊಳಿಸಿದ ನಂತರ ಅದನ್ನು ಪರಿಷ್ಕರಿಸಲು ಇಲಾಖೆ ಕ್ರಮಕೈಗೊಂಡಿಲ್ಲ. ಕೇಂದ್ರ ಸರ್ಕಾರ ಕಾರಾಗೃಹಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲು 201ರಲ್ಲೇ ನಿರ್ದೇಶನ ನೀಡಿದ್ದರೂ, ಇಲ್ಲಿಯವರೆಗೆ ಸೂಕ್ತ ಕ್ರಮಕೈಗೊಂಡಿಲ್ಲ. ಅನಿರೀಕ್ಷಿತ ತಪಾಸಣೆ, ಶ್ವಾನ ದಳಗಳ ತಪಾಸಣೆಯನ್ನು ಕಾರಾಗೃಹದಲ್ಲಿ ನಿಯಮಿತವಾಗಿ ನಡೆಸಿರಲಿಲ್ಲ.

ರಾಜ್ಯದ ಬಹುತೇಕ ಕಾರಾಗೃಹಗಳಲ್ಲಿನ ಜಾಮರ್​ಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ಮೊಬೈಲ್ ಸಿಗ್ನಲ್‍ಗಳು ದೊರೆಯುತ್ತಿದ್ದವು. ವಿಡಿಯೋ ಕಾನ್ಫ್‌ರೆನ್ಸ್​ ವ್ಯವಸ್ಥೆಯಲ್ಲಿ ಶೇ.43ರಷ್ಟು ಕೈದಿಗಳನ್ನು ಮಾತ್ರ ವಿಚಾರಣೆ ಮಾಡಲಾಗುತ್ತಿತ್ತು. ಪರಾರಿಯಾಗಿದ್ದ 44 ಕೈದಿಗಳ ಪೈಕಿ ಈವರೆಗೆ ಯಾರನ್ನೂ ಮರು ಬಂಧಿಸಿಲ್ಲ. ಕಾರಾಗೃಹಗಳಲ್ಲಿ ಯಾವುದೇ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಿಲ್ಲ. ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿಲ್ಲ ಎಂಬುದೂ ಸೇರಿದಂತೆ ಕಾರಾಗೃಹದಲ್ಲಿನ ಅಕ್ರಮಗಳನ್ನು ವರದಿಯಲ್ಲಿ ಬಯಲಿಗೆಳೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.