ETV Bharat / state

ಉಪಸಭಾಪತಿ ಚುನಾವಣೆಯಿಂದ ‘ಕೈ’ ಹಿಂದಕ್ಕೆ? ಅವಿರೋಧ ಆಯ್ಕೆ ಸಾಧ್ಯತೆ! - ಅವಿರೋಧ ಆಯ್ಕೆ ಬಹುತೇಕ ಖಚಿತ.!

ಸದ್ಯ 74 ಸದಸ್ಯರನ್ನು ಹೊಂದಿರುವ ಪರಿಷತ್​ನಲ್ಲಿ ಬಹುಮತ ಸಾಬೀತುಪಡಿಸಲು 38 ಸದಸ್ಯರ ಬಲದ ಅಗತ್ಯವಿದೆ. ಬಿಜೆಪಿಯ 32 ಸದಸ್ಯರ ಜತೆ ಜೆಡಿಎಸ್​​ನ 13 ಸದಸ್ಯರು ಬೆಂಬಲ ಸೂಚಿಸಿದರೆ ಅಲ್ಲಿಗೆ 45 ಸದಸ್ಯರ ಬಲದೊಂದಿಗೆ ಉಪಸಭಾಪತಿ ಆಯ್ಕೆ ಆಗಲಿದೆ.

COUNCIL CHAIRMAN election
ಉಪಸಭಾಪತಿ ಚುನಾವಣೆ
author img

By

Published : Jan 27, 2021, 10:44 PM IST

ಬೆಂಗಳೂರು: ವಿಧಾನ ಪರಿಷತ್​​​ನಲ್ಲಿ ಸಂಖ್ಯಾಬಲದ ಕೊರತೆ ಜೊತೆಗೆ ಏಕಾಂಗಿಯಾಗಿರುವ ಹಿನ್ನೆಲೆ ಉಪಸಭಾಪತಿ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಹಿಂದೆ ಸಾಥ್ ಕೊಟ್ಟಿದ್ದ ಜೆಡಿಎಸ್ ಈ ಸಾರಿ ಬಿಜೆಪಿ ಕೈಹಿಡಿಯುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆ ಕಾಂಗ್ರೆಸ್ ತಮ್ಮ ಅಭ್ಯರ್ಥಿಗೆ ಹಿನ್ನೆಡೆಯಾಗುವುದು ಖಚಿತ ಎಂದು ಅರಿತಿದ್ದು, ತಟಸ್ಥವಾಗಿರಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ವಿಧಾನ ಪರಿಷತ್​ನಲ್ಲಿ ಸದಸ್ಯರ ಸಂಖ್ಯಾಬಲ ಪಕ್ಷವಾರು ಗಮನಿಸಿದಾಗ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಒಟ್ಟು 75 ಸದಸ್ಯರ ಬಲದ ಪರಿಷತ್​​ನಲ್ಲಿ ಪಕ್ಷೇತರ ಸದಸ್ಯರೊಬ್ಬರ ಬೆಂಬಲ ಸೇರಿ ಒಟ್ಟು 32 ಸದಸ್ಯರ ಬಲವನ್ನು ಬಿಜೆಪಿ ಹೊಂದಿದೆ. 2ನೇ ದೊಡ್ಡ ಪಕ್ಷ ಕಾಂಗ್ರೆಸ್. ಇದು 29 ಸದಸ್ಯರ ಬಲ ಹೊಂದಿದೆ. ಜೆಡಿಎಸ್ 13 ಸದಸ್ಯರನ್ನು ಒಳಗೊಂಡಿದೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಉಪಸಭಾಪತಿ ಧರ್ಮೇಗೌಡ ಜೆಡಿಎಸ್ ಸದಸ್ಯರಾಗಿದ್ದರು. ಇವರ ನಿಧನದಿಂದ ತೆರವಾದ ಸ್ಥಾನವನ್ನು ಕೂಡ ವಿಧಾನಸಭೆ ಸದಸ್ಯರ ಸಂಖ್ಯಾಬಲ ಆಧರಿಸಿ ಬಿಜೆಪಿ ಗೆದ್ದುಕೊಳ್ಳಲಿದೆ.

ಸದ್ಯ 74 ಸದಸ್ಯರನ್ನು ಹೊಂದಿರುವ ಪರಿಷತ್​ನಲ್ಲಿ ಬಹುಮತ ಸಾಬೀತುಪಡಿಸಲು 38 ಸದಸ್ಯರ ಬಲದ ಅಗತ್ಯವಿದೆ. ಬಿಜೆಪಿಯ 32 ಸದಸ್ಯರ ಜತೆ ಜೆಡಿಎಸ್​​ನ 13 ಸದಸ್ಯರು ಬೆಂಬಲ ಸೂಚಿಸಿದರೆ ಅಲ್ಲಿಗೆ 45 ಸದಸ್ಯರ ಬಲದೊಂದಿಗೆ ಉಪಸಭಾಪತಿ ಆಯ್ಕೆ ಆಗಲಿದೆ.

ಈಗಾಗಲೇ ಪರಿಷತ್​​​ನಲ್ಲಿ ಸಂಪೂರ್ಣ ಬಲ ಸಿಗುವವರೆಗೂ ಸಭಾಪತಿ ಸ್ಥಾನವನ್ನು ಅಲಂಕರಿಸದಿರಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆ ಉಪ ಸಭಾಪತಿ ಸ್ಥಾನಕ್ಕೆ ತಮ್ಮ ಅಭ್ಯರ್ಥಿ ಕಣಕ್ಕಿಳಿಸಿ ಜೆಡಿಎಸ್ ಬೆಂಬಲದೊಂದಿಗೆ ಗೆದ್ದು, ಸಭಾಪತಿ ಸ್ಥಾನವನ್ನು ಜೆಡಿಎಸ್​​​ಗೆ ಬಿಟ್ಟುಕೊಡುವ ನಿರ್ಧಾರ ಕೂಡ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸೋಲು ಖಚಿತ

ಅಭ್ಯರ್ಥಿ ಕಣಕ್ಕಿಳಿಸಿದರೆ ಸೋಲು ಖಚಿತ ಎನ್ನುವ ಅರಿವಿರುವ ಕಾಂಗ್ರೆಸ್ ರಾಜ್ಯ ನಾಯಕರು ತಾವು ಮುಖಭಂಗಕ್ಕೆ ಒಳಗಾಗಬಾರದು ಎನ್ನುವ ನಿರ್ಧಾರ ತಾಳಿದ್ದು, ತಟಸ್ಥವಾಗಿರಲು ನಿರ್ಧರಿಸಿದ್ದಾರೆ. ಅಲ್ಲದೇ ಇದುವರೆಗೂ ಉಪಸಭಾಪತಿ ಸ್ಥಾನ ಜೆಡಿಎಸ್ ಬಳಿ ಇದ್ದ ಕಾರಣ ಅವರಿಗೆ ಯಾವುದೇ ವ್ಯತ್ಯಾಸ ಕೂಡ ಆಗುವುದಿಲ್ಲ.

ಈಗಾಗಲೇ ಸಭಾಪತಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿರುವ ಕಾಂಗ್ರೆಸ್​​​ಗೆ ಇರುವ ಒಂದೇ ಸಮಸ್ಯೆ ಉಪಸಭಾಪತಿ ನೇಮಕ ಆಗವವರೆಗೂ ಸಭಾಪತಿಗಳು ಸುರಕ್ಷಿತವಾಗಿ ಆ ಸ್ಥಾನದಲ್ಲಿ ಮುಂದುವರಿಯಬಹುದು. ಅದಾದ ತಕ್ಷಣ ಸಭಾಪತಿ ಪದಚ್ಯುತಿ ವಿಚಾರ ಬಿಜೆಪಿ ಪ್ರಸ್ತಾಪಿಸಲಿದೆ. ಜೆಡಿಎಸ್ ಕೂಡ ಬೆಂಬಲಿಸಿರುವ ಹಿನ್ನೆಲೆ ಅನಾಯಾಸವಾಗಿ ಸಭಾಪತಿಗಳನ್ನು ಕೆಳಗಿಳಿಸಬಹುದು. ಆದರೆ ಇಂತಹ ಅವಮಾನ ಎದುರಿಸುವ ಬದಲು ಉಪಸಭಾಪತಿ ರಾಜೀನಾಮೆ ನೀಡುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಉಪಸಭಾಪತಿ ಚುನಾವಣೆ

ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 8(1)ರ ಅನ್ವಯ ಉಪಸಭಾಪತಿಯವರ ಸ್ಥಾನಕ್ಕೆ ಚುನಾವಣೆಯನ್ನು ಸಭಾಪತಿ ಶುಕ್ರವಾರ 29ರಂದು ನಿಗದಿಪಡಿಸಿ ಆದೇಶಿಸಿದ್ದಾರೆ. ನಿಗದಿಪಡಿಸಿದ ದಿನಾಂಕದ ಒಂದು ದಿನ ಮೊದಲು ಅಂದರೆ 28ರಂದು ಮಧ್ಯಾಹ್ನ 3 ಗಂಟೆಯೊಳಗೆ ಸದಸ್ಯನನ್ನು ಉಪಸಭಾಪತಿಯನ್ನಾಗಿ ಆರಿಸುವ ಬಗ್ಗೆ ಕಾರ್ಯದರ್ಶಿಯವರಿಗೆ ಹೆಸರಿಸಿ, ವಿಧಾನಸೌಧದ ಕೊಠಡಿ ಸಂಖ್ಯೆ -156 ಸಿ ಅಲ್ಲಿ ಲಿಖಿತವಾಗಿ ಸೂಚನೆಯನ್ನು ಅಭ್ಯರ್ಥಿಯು ಅವರ ಹೆಸರನ್ನು ಸೂಚಿಸುವವರೊಂದಿಗೆ ಅಥವಾ ಅನುಮೋದಕರೊಂದಿಗೆ ಖುದ್ದಾಗಿ ಸಲ್ಲಿಸಕ್ಕದ್ದು ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆ ನಾಳೆಯೇ ಉಪಸಭಾಪತಿ ಆಯ್ಕೆ ಅವಿರೋಧವಾಗಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿ ಸಭಾಪತಿ ಸ್ಥಾನದ ಆಕಾಂಕ್ಷಿಗಳಿಗೆ ಬಿಸಿ ತುಪ್ಪವಾಗಲಿದೆಯಾ ಜೆಡಿಎಸ್​​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.