ETV Bharat / state

ಅಗತ್ಯ ವಸ್ತು ಬೆಲೆ ಎರಿಕೆ ಕುರಿತ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್ - ಕಲಾಪ ಸಲಹಾ ಸಮಿತಿ ಪುನಾರಚನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಎಸ್ ಆರ್‌ ಪಾಟೀಲ್ ವಿಧಾನ ಪರಿಷತ್​ನಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದಾರೆ..

council  adjournment motion by sr patil
ವಿಧಾನ ಪರಿಷತ್​ ಕಲಾಪ
author img

By

Published : Sep 14, 2021, 5:20 PM IST

ಬೆಂಗಳೂರು : ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಕುರಿತು ಚರ್ಚೆ ನಡೆಸಲು ನಿಯಮ 59ರ ಅಡಿಯಲ್ಲಿ ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಎಸ್ ಆರ್‌ ಪಾಟೀಲ್ ವಿಧಾನ ಪರಿಷತ್​ನಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದಾರೆ.

ವಿಧಾನ ಪರಿಷತ್​ ಕಲಾಪ

ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ, ಪ್ರಶ್ನೋತ್ತರ ಕಲಾಪಕ್ಕೂ ಮೊದಲೇ ಪ್ರತಿಪಕ್ಷ ನಾಯಕ ಎಸ್ ಆರ್‌ ಪಾಟೀಲ್ ನಿಯಮ 59ರ ಅಡಿ ನಿಲುವಳಿ ಸೂಚನೆ ಮಂಡಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.

ಇದು ರೈತಾಪಿ ವರ್ಗದ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕೃಷಿ ಉತ್ಪಾದನೆ ಕುಂಠಿತವಾಗಿದೆ. ಜನಸಾಮಾನ್ಯರಿಗೆ ತೊಂದರೆಯಾಗಿದೆ. ಇದು ಸಾರ್ವಜನಿಕ‌ ಮಹತ್ವದ ವಿಷಯವಾಗಿದ್ದು, ಚರ್ಚೆಗೆ ಅವಕಾಶ ಕೋರಿದರು. ನಿಲುವಳಿ ಸೂಚನೆಯನ್ನು ಅಂಗೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ ನಿಯಮ 68ಕ್ಕೆ ಮಾರ್ಪಡಿಸಿ ಅವಕಾಶ ಕೊಡಲಾಗುತ್ತದೆ ಎಂದು ರೂಲಿಂಗ್ ನೀಡಿದರು.

ಸಭಾಪತಿ ಪ್ಯಾನಲ್ ಪುನಾರಚನೆ : ಸಭಾಪತಿ, ಉಪ ಸಭಾಪತಿ ಸದನದಲ್ಲಿ ಇರದ ಸಮಯದಲ್ಲಿ ಸದನ ನಡೆಸಲು ಸಭಾಪತಿ ಪೀಠದಲ್ಲಿ ಹಿರಿಯ ಸದಸ್ಯರಿಗೆ ಅವಕಾಶ ಕಲ್ಪಿಸುವ ಸಭಾಪತಿ ಪ್ಯಾನಲ್ ಅನ್ನು ಪುನಾಃ ರಚಿಸಲಾಗಿದೆ. ಕೆ ಸಿ ಕೊಂಡಯ್ಯ, ಹೆಚ್. ವಿಶ್ವನಾಥ್, ಮರಿತಿಬ್ಬೇಗೌಡ, ತೇಜಸ್ವಿನಿಗೌಡ ಅವರು ಸಭಾಪತಿ, ಉಪಸಭಾಪತಿಗಳು ಇಲ್ಲದಿರುವಾಗಿ ಸಭಾಪತಿ ಪೀಠದಲ್ಲಿ ಕುಳಿತು ಸದನ ನಡೆಸಿಕೊಡಲಿದ್ದಾರೆ ಎಂದು ಸಭಾಪತಿಗಳು ಪ್ರಕಟಿಸಿದರು.

ಕಲಾಪ ಸಲಹಾ ಸಮಿತಿ ಪುನಾರಚನೆ : ವಿಧಾನ ಪರಿಷತ್ ಕಲಾಪ ಸಲಹಾ ಸಮಿತಿಯನ್ನು ಪುನಾರಚಿಸಲಾಗಿದೆ. ಸಭಾಪತಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಉಪ ಸಭಾಪತಿ ಪ್ರಾಣೇಶ್, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಪ್ರತಿಪಕ್ಷ ಸಚೇತಕ ನಾರಾಯಣಸ್ವಾಮಿ, ಹಿರಿಯ ಸದಸ್ಯರಾದ ಕೆ ಪ್ರತಾಪ್ ಚಂದ್ರ ಶೆಟ್ಟಿ, ಮರಿತಿಬ್ಬೇಗೌಡ, ಬಿ ಕೆ ಹರಿಪ್ರಸಾದ್, ಶಶಿಲ್ ನಮೋಶಿ ಹಾಗೂ ವಿಶೇಷ ಆಹ್ವಾನಿತರಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಾನೂನು ಸಚಿವ ಜೆ‌ಸಿ ಮಾಧುಸ್ವಾಮಿ ಇರಲಿದ್ದಾರೆ ಎಂದು ಸಭಾಪತಿಗಳು ಪ್ರಕಟಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.