ETV Bharat / state

ರಸ್ತೆಯಲ್ಲೇ ಕುಳಿತು ಪಾಲಿಕೆ ಸದಸ್ಯೆಯ ಪ್ರತಿಭಟನೆ; ಕಾಮಗಾರಿ ಪರಿಶೀಲಿಸಲು ಆಯುಕ್ತರ ಭೇಟಿಗೆ ಒತ್ತಾಯ - ಬೆಂಗಳೂರು ವಿವಿ ಪುರಂ ವಾರ್ಡ್

ಹೈದರಾಬಾದ್​ನ ಮಧುಕಾನ್ ಎಂಬ ಸಂಸ್ಥೆ 600 ಕೋ. ರೂ ಗುತ್ತಿಗೆ ಪಡೆದು, ವಿಎಂಆರ್ ಸಂಸ್ಥೆಗೆ ಉಪಗುತ್ತಿಗೆ ಕೊಟ್ಟಿದೆ. ಆತ ಇನ್ನೊಬ್ಬ ನಾಯ್ಡು ಎಂಬ ವ್ಯಕ್ತಿಗೆ ಗುತ್ತಿಗೆ ಕೊಟ್ಟಿದ್ದಾನೆ. ಒಂದೂವರೆ ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಪಾಲಿಕೆ ಸದಸ್ಯೆ ಆರೋಪಿಸಿದರು.

protest
ಪಾಲಿಕೆ ಸದ
author img

By

Published : Aug 19, 2020, 3:49 PM IST

ಬೆಂಗಳೂರು: ವಿ.ವಿ.ಪುರಂ ವಾರ್ಡ್​ನ ಸಜ್ಜನ್ ರಾವ್ ಸರ್ಕಲ್ ಬಳಿ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಿ ಮೂರು ವರ್ಷವಾದ್ರೂ ಕೆಲಸ ಪೂರ್ಣಗೊಂಡಿಲ್ಲ ಎಂದು ವಿ.ವಿ.ಪುರಂ ವಾರ್ಡ್ ಸದಸ್ಯೆ ವಾಣಿ ವಿ. ರಾವ್ ಕೌನ್ಸಿಲ್ ಸಭೆಯಲ್ಲಿ ಈ ಹಿಂದೆ ದೂರಿದ್ದರು.

ಮೇಯರ್ ಹಾಗೂ ಆಯುಕ್ತರು ಇಂದು ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಆದ್ರೆ ಆಯುಕ್ತ ಮಂಜುನಾಥ್ ಪ್ರಸಾದ್ ಪರಿಶೀಲನೆಗೆ ಬಾರದ ಹಿನ್ನೆಲೆಯಲ್ಲಿ ಕಾರ್ಪೋರೇಟರ್ ವಾಣಿ ವಿ.ರಾವ್ ಹಾಗೂ ಸಂಘ-ಸಂಸ್ಥೆಗಳ ಸದಸ್ಯರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಬಳಿಕ ಮೇಯರ್ ಗೌತಮ್ ಕುಮಾರ್, ಶಾಸಕ ಉದಯ್ ಗರುಡಾಚಾರ್ ಹಾಗೂ ಪಾಲಿಕೆ ರಸ್ತೆ ಯೋಜನೆ ವಿಭಾಗದ ಮುಖ್ಯ ಇಂಜಿನಿಯರ್ ರಮೇಶ್ ಭೇಟಿ ನೀಡಿ ಪರಿಶೀಲಿಸಿದರು.

ಹೈದರಾಬಾದ್​ನ ಮಧುಕಾನ್ ಎಂಬ ಸಂಸ್ಥೆ 600 ಕೋ. ರೂ ಗುತ್ತಿಗೆ ಪಡೆದು, ವಿಎಂಆರ್ ಸಂಸ್ಥೆಗೆ ಉಪಗುತ್ತಿಗೆ ಕೊಟ್ಟಿದೆ. ಆತ ಇನ್ನೊಬ್ಬ ನಾಯ್ಡು ಎಂಬ ವ್ಯಕ್ತಿಗೆ ಗುತ್ತಿಗೆ ಕೊಟ್ಟಿದ್ದಾನೆ. ವಿ.ವಿ.ಪುರಂ ವಾರ್ಡ್​ನಲ್ಲಿ 20 ಕೋ. ರೂ ಗುತ್ತಿಗೆಯನ್ನು ಬಸಪ್ಪ ಸರ್ಕಲ್‌ನಿಂದ ಕೃಷ್ಣರಾವ್ ಪಾರ್ಕ್​ವರೆಗೆ ವೈಟ್ ಟಾಪಿಂಗ್ ಮಾಡಲು ಗುತ್ತಿಗೆ ಪಡೆದಿದ್ದಾನೆ. ಆದ್ರೆ ವಾಸವಿ ಸಿಗ್ನಲ್​ವರೆಗೆ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ವಾಸವಿ ಸಿಗ್ನಲನಿಂದ ಸಜ್ಜನ್ ರಾವ್ ಸರ್ಕಲ್​ವರೆಗೆ ಕೇವಲ ಕಾಂಕ್ರೀಟ್ ಹಾಕಿ ಹೋಗಿದ್ದಾನೆ. ಒಂದೂವರೆ ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಕೌನ್ಸಿಲರ್ ಆರೋಪಿಸಿದರು.

ಬಳಿಕ ಮೇಯರ್ ಸ್ಥಳ ಪರಿಶೀಲನೆ ನಡೆಸಿ, ಕಾಂಟ್ರಾಕ್ಟರನ್ನು ಸ್ಥಳಕ್ಕೆ ಕರೆಸಿ ಮಾತುಕತೆ ನಡೆಸಿದರು. ನಾಳೆ 9 ಗಂಟೆಗೆ ಕಾಮಗಾರಿಗೆ ಚಾಲನೆ ಕೊಡಿಸುವುದಾಗಿ ಮೇಯರ್ ಭರವಸೆ ನೀಡಿದ್ದಾರೆ. ಅಲ್ಲದೆ ಆ. 30 ರ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ವಾಣಿ ವಿ.ರಾವ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.