ಬೆಂಗಳೂರು: ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಸೋಂಕು ಹಿನ್ನೆಲೆ ಸದ್ಯ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಆಸ್ಪತ್ರೆಗೆ ಹೋಗುವ ವೇಳೆ ಮಾಡಿದ ಅವಾಂತರ ಸಂಬಂಧ ಇವರ ಮೇಲೆ ಜೆ.ಜೆ.ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ ತನಿಖೆ ಮುಂದುವರೆದಿದೆ.
- " class="align-text-top noRightClick twitterSection" data="">
ಈ ಸಂಬಂಧ ವಿಡಿಯೋ ಮಾಡಿ ಫೇಸ್ಬುಕ್ನಲ್ಲಿ ಈ ರೀತಿ ಸ್ಪಷ್ಟನೆ ನೀಡಿದ್ದಾರೆ. ಪಾಸಿಟಿವ್ ಇದ್ರೂ ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿಲ್ಲ ಎಂಬ ಮೆಸೇಜ್ ಪಾಸ್ ಆಗಿದೆ. ನಾನು ಜನಪ್ರತಿನಿಧಿಯಾಗಿ ಬುದ್ಧಿ ಹೇಳುವ ಶಕ್ತಿಯನ್ನ ದೇವರು ನನಗೆ ಕೊಟ್ಟಿದ್ದಾರೆ. ಹೀಗಾಗಿ ಆ ಥರ ಮಾಡಲು ಸಾಧ್ಯ ಇಲ್ಲ, ಕೆಲವರು ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ. ನಾನು ಮನೆಯಲ್ಲಿ ಕ್ವಾರಂಟೈನ್ ಆಗ್ತೀನಿ ಎಂದು ಯಾರು ಹೇಳಿದ್ದು? ಕಾನೂನು ಎಲ್ಲರಿಗೂ ಒಂದೇ. ನಾನು ನನ್ನ ವಾರ್ಡ್ನಲ್ಲಿ ಕೊರೊನಾ ಇರುವವರನ್ನ ಆಸ್ಪತ್ರೆ ದಾಖಲಿಸಲು ಸಹಾಯ ಮಾಡ್ದೆ, ಅವರ ಜೊತೆ ಸಂಪರ್ಕ ಇರುವವರಮ್ನ ಕ್ವಾರಂಟೈನ್ ಮಾಡ್ದೆ, ಇಷ್ಟಿದ್ದೂ ನಾನು ತಪ್ಪು ಮಾಡಲು ಆಗುತ್ತಾ?
ನನಗೆ ಕೊರೊನಾ ಇರುವ ಮೆಸೇಜ್ ಬೇಗನೆ ತಲುಪಿಲ್ಲ. ನನಗೆ ತಡರಾತ್ರಿ ಮೆಸೇಜ್ ಬಂದಾಗ ನಾನು ತಕ್ಷಣವೇ ಫ್ಯಾಮಿಲಿ ಇಂದ ಮೊದಲು ಸೆಪರೇಟ್ ಆಗಿ, ಮುಂಜಾನೆಯವರೆಗೆ ಕಾದು, ಫ್ರೆಶ್ ಅಪ್ ಆಗಿ ಆ್ಯಂಬುಲೆನ್ಸ್ ಹತ್ತಿ ಅಲ್ಲಿಂದ ವಿಕ್ಟೋರಿಯಾಗೆ ಬಂದೆ. ಕೆಲವರು ನನ್ನ ಮೇಲೆ ವಿನಾಕಾರಣ ಆರೋಪ ಮಾಡಿದ್ದಾರೆ. ನನಗೆ ಕಾನೂನು ಅಂದರೆ ಏನು? ಕೊರೊನಾ ನಿಯಮ ಉಲ್ಲಂಘನೆ ಮಾಡಿದರೆ ಏನಾಗುತ್ತೆ ? ಅನ್ನೋದು ಗೊತ್ತು ಎಂದಿದ್ದಾರೆ.
ಸದ್ಯ ದೇವರ ದಯದಿಂದ ನಾನು ಚೆನ್ನಾಗಿದ್ದೇನೆ. ನಾನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಪೆಷಲ್ ವಾರ್ಡ್ ಕೊಟ್ಟರೂ ತಗೊಂಡಿಲ್ಲ. ನಮ್ಮ ಪಾದರಾಯನಪುರ, ಟ್ಯಾನಿರೋಡ್, ಶಿವಾಜಿನಗರ ಹೀಗೆ ಎಲ್ಲಾ ಜನತೆ ಜನರಲ್ ವಾರ್ಡ್ ನಲ್ಲಿದ್ದಾರೆ , ಅವರ ಜೊತೆಯೇ ಇರ್ತೇನೆ ಎಂದು ಇಲ್ಲಿಯೇ ಇದ್ದೇನೆ. ಪಾದರಾಯನಪುರ ಜನ ಭಯ ಪಡುವ ಅವಶ್ಯಕತೆ ಇಲ್ಲ. ಸದ್ಯ ಪಾದಾರಯನಪುರ ಸೀಲ್ಡೌನ್ ಏರಿಯಾ ಆಗಿದೆ. ಅದಷ್ಟು ಬೇಗ ಕ್ಲಿಯರ್ ಆಗುತ್ತೆ ಸುಳ್ಳು ಸುದ್ದಿ ಹಬ್ಬಿಸಬೇಡಿ , ಸ್ಟೇ ಹೋಂ ಸ್ಟೇ ಸೇಫ್ ಎಂದಿದ್ದಾರೆ.