ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 100ರಷ್ಟು ಲಸಿಕೆ ಹಂಚಿಕೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಇದಕ್ಕೆ ಶ್ರಮಿಸಿದ ಆರೋಗ್ಯ ಕಾರ್ಯಕರ್ತರಿಗೆ ಜಿಲ್ಲಾಡಳಿತದ ಕಚೇರಿಯಲ್ಲಿ ಸನ್ಮಾನ ನಡೆಸಲಾಯಿತು. ರಾಜ್ಯದಲ್ಲೇ ಪ್ರಥಮವಾಗಿ ಎರಡೂ ಡೋಸ್ ಶೇ100ರಷ್ಟು ಗುರಿಯನ್ನು ಬೆಂಗಳೂರು ನಗರ ತಲುಪಿದೆ.
ಜಿಲ್ಲಾಡಳಿತ ವ್ಯಾಪ್ತಿಯು ಒಟ್ಟು 5 ತಾಲೂಕು ಒಳಗೊಂಡಿದೆ. 7 ಟೌನ್ ಮುನ್ಸಿಪಲ್ ಕೌನ್ಸಿಲ್, 86 ಗ್ರಾಮ ಪಂಚಾಯಿತಿ, 2 ಸಿಟಿ ಮುನ್ಸಿಪಲ್ ಕೌನ್ಸಿಲ್ ಹಾಗೂ 864 ಗ್ರಾಮಗಳಿವೆ.
ಗುರಿ ತಲುಪಲು ಬಳಸಲಾದ ಸಿಬ್ಬಂದಿಗಳ ವಿವರ
40 - ನುರಿತ ವೈದ್ಯರು
39 - ವೈದ್ಯರು
ಆರೋಗ್ಯ ಸಿಬ್ಬಂದಿಗಳು - 300
ಆಶಾ ಕಾರ್ಯಕರ್ತೆಯರು - 832
ಜಿಲ್ಲಾವಾರು ವ್ಯಾಕ್ಸಿನೇಷನ್ ವಿವರ
ಬೆಂಗಳೂರು ನಗರ-100%
ಕೊಡಗು- 90%
ಮಂಡ್ಯ- 84%
ರಾಮನಗರ - 83%
ಉಡುಪಿ- 82%
ಬಾಗಲಕೋಟೆ-81%
ಉತ್ತರ ಕರ್ನಾಟಕ, ಹಾಸನ, ಮೈಸೂರು 79%
ಕೋಲಾರ 78%
ಬೆಂಗಳೂರು ಗ್ರಾಮಾಂತರ & ವಿಜಯಪುರ-77%
ಬೆಳಗಾವಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, 76%
ದಾವಣಗೆರೆ- 75%
ಧಾರವಾಡ, ಚಿತ್ರದುರ್ಗ, ಬೀದರ್, ಗದಗ, ಚಾಮರಾಜನಗರ - 73%
ತುಮಕೂರು & ಚಿಕ್ಕಮಗಳೂರು- 72%
ಶಿವಮೊಗ್ಗ & ಯಾದಗಿರಿ- 70%
ಕೊಪ್ಪಳ- 69%
ಬಳ್ಳಾರಿ, ಹಾವೇರಿ- 68%
ರಾಯಚೂರು- 64%
ಕಲಬುರಗಿ-60%
ಜಿಲ್ಲಾಧಿಕಾರಿ ಜೆ. ಮಂಜುನಾಥ್ ಮಾತನಾಡಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಶೇ100 ಲಸಿಕೆ ಸಾಧನೆ ಆಗಿದೆ. ಬಿಬಿಎಂಪಿ ವ್ಯಾಪ್ತಿ ಒಳಗೊಂಡಂತೆ ಮೊದಲನೇ ಡೋಸ್ ಕೆಲವೇ ದಿನಗಳಲ್ಲಿ ಶೇ 100 ಆಗಿದೆ. ಎರಡೂ ವ್ಯಾಪ್ತಿ ಸೇರಿ 1 ಕೋಟಿ 10 ಲಕ್ಷ ಜನಸಂಖ್ಯೆಗೆ ತಲುಪಬೇಕಿದ್ದು, 96 ಲಕ್ಷ ಜನಕ್ಕೆ ಮೊದಲನೇ ಡೋಸ್ ಆಗಿದೆ.
ಬಿಬಿಎಂಪಿ ಸುತ್ತ ಇರುವ ತಾಲೂಕು, ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ 2 ಡೋಸ್ ಲಸಿಕೆ ಸಂಪೂರ್ಣವಾಗಿದೆ ಎಂದರು. ಇಂಡಸ್ಟ್ರಿಯಲ್ ಸ್ಥಳಗಳಲ್ಲಿ ಹೊರರಾಜ್ಯ, ಜಿಲ್ಲೆಯಿಂದಲೂ ಬರುವುದರಿಂದ ವ್ಯಾಕ್ಸಿನ್ ಹಂಚಿಕೆ ಶೇ100 ಕ್ಕಿಂತ ಹೆಚ್ಚಾಗಿದೆ ಎಂದರು.
ಬೆಂಗಳೂರು ನಗರ ಜಿಲ್ಲೆಯ ಜನಸಂಖ್ಯೆಯಲ್ಲಿ (ಟಾರ್ಗೆಟೆಡ್ ಪಾಪ್ಯುಲೇಷನ್) ಹಾಗೂ ಹೊರರಾಜ್ಯ ಜಿಲ್ಲೆಯವರೂ ಸೇರಿ ಒಟ್ಟು 13 ಲಕ್ಷ 26 ಸಾವಿರ ಜನರಿಗೆ ಮೊದಲನೇ ಡೋಸ್ ಕೊಡಲಾಗಿದೆ. ಈ ಪೈಕಿ ನಗರ ಜಿಲ್ಲೆಯ ನಿವಾಸಿಗಳೇ ಆದ 10 ಲಕ್ಷ 32 ಸಾವಿರ ಜನಕ್ಕೆ ಸೆಕೆಂಡ್ ಡೋಸ್ ಕೂಡಾ ಕೊಡಲಾಗಿದ್ದು, ಶೇ100ರಷ್ಟು ಗುರಿ ತಲುಪಲಾಗಿದೆ ಎಂದರು. ಉಳಿದ 3 ಲಕ್ಷ ಜನ ನಗರ ಜಿಲ್ಲೆಯ ಹೊರಗಿನವರಾಗಿದ್ದು, ಫೋನ್ ಮಾಡಿ ಎರಡನೇ ಡೋಸ್ ಗೆ 84 ದಿನ ಆಗಿದ್ದು ಹಾಕಿಸಿಕೊಳ್ಳುವಂತೆ ಮನವಿ ಮಾಡಲಾಗ್ತಿದೆ ಎಂದರು.
ಪರಿಹಾರ ಧನ
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ನಿಂದ ಮೃತಪಟ್ಟ ಅರ್ಹ 2050 ಫಲಾನುಭವಿಗಳಿಗೆ 50 ಸಾವಿರ ರುಪಾಯಿ ಕೋವಿಡ್ ಪರಿಹಾರ ನಿಧಿ ವಿತರಿಸಲು ಈಗಾಗಲೇ 500 ಚೆಕ್ ಗಳು ಸಿದ್ಧವಾಗಿವೆ. ಅಧಿವೇಶನ ಮುಗಿದ ಬಳಿಕ ವಿತರಣೆ ಆಗಲಿದೆ. ಕೆಲವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇನ್ನು ಕೆಲವರು ರಾಜ್ಯ ಬಿಟ್ಟು ಹೋಗಿದ್ದಾರೆ. ಕೆಲವರು ಬೇಡ ಎಂದಿದ್ದು, ಉಳಿದ ಎಲ್ಲರಿಗೂ ಚೆಕ್ ವಿತರಣೆ ಆಗಲಿದೆ ಎಂದರು.
ಓದಿ: ಮತಾಂತರದ ವಿಧೇಯಕದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನೈತಿಕತೆ ಉಳಿಸಿಕೊಂಡಿಲ್ಲ: ಹೆಚ್ಡಿಕೆ ವಾಗ್ದಾಳಿ