ಬೆಂಗಳೂರು: ರಾಜ್ಯದಲ್ಲಿಂದು 13,800 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 26,83,314 ಕ್ಕೆ ಏರಿಕೆ ಆಗಿದೆ.
25,346 ಮಂದಿ ಡಿಸ್ಜಾರ್ಜ್ ಆಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 23,83,758 ಕ್ಕೆ ಏರಿಕೆಯಾಗಿದೆ. ಸದ್ಯ ಸಕ್ರಿಯ ಪ್ರಕರಣಗಳು 2,68,275 ರಷ್ಟು ಇದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 9.69 ರಷ್ಟಿದ್ದು, ಸಾವಿನ ಶೇಕಡವಾರು ಪ್ರಮಾಣ 2.64 ರಷ್ಟಿದೆ. ಕೋವಿಡ್ ಗೆ 365 ಸೋಂಕಿತರು ಇಂದು ಬಲಿಯಾಗಿದ್ದು, ಸಾವಿನ ಸಂಖ್ಯೆ 31,260 ಕ್ಕೆ ಏರಿದೆ.
ಬ್ಲ್ಯಾಕ್ ಫಂಗಸ್ ಸಾವಿನ ಸಂಖ್ಯೆ 122ಕ್ಕೆ ಏರಿಕೆ
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಇಂದು ಸಂಜೆ 5.30ರ ತನಕ ಈವರೆಗೆ 122 ಸೋಂಕಿತರು ಉಸಿರು ಚೆಲ್ಲಿದ್ದಾರೆ. ಈತನಕ 1,914 ಜನರಲ್ಲಿ ಕಪ್ಪು ಮಾರಿ ಪತ್ತೆಯಾಗಿದ್ದು, 67 ಮಂದಿ ಗುಣಮುಖರಾಗಿದ್ದಾರೆ. 1667 ಸೋಂಕಿತರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿಷನ್ 2023: ಒಂದಾದ ಸತೀಶ್ - ಪಟ್ಟಣ್, ಮುನಿಸು ಮರೆತ ಅಂಜಲಿ - ಹೆಬ್ಬಾಳ್ಕರ್!