ETV Bharat / state

ಕ್ಯಾನ್ಸರ್​ ರೋಗಿಗಳಿಗೆ ಕೊರೊನಾ ಮಾರಕ, ರೊಟೀನ್​ ಚೆಕಪ್​ಗೆ ಬರಬೇಡಿ ಎಂದು ಎಚ್ಚರಿಸಿದ ಕಿದ್ವಾಯಿ ನಿರ್ದೇಶಕ - corona lock down

ಕರೋನಾ ಎಫೆಕ್ಟ್ ಇದ್ದರೂ, ಕಿದ್ವಾಯಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ರೊಟೀನ್ ಚೆಕ್ ಅಪ್ ಗೆ ಬರಬೇಡಿ ಕೇವಲ ತುರ್ತು ಚಿಕಿತ್ಸೆಗೆ ಬನ್ನಿ ಎಂದರೂ ಜನ ಕೇಳುತ್ತಿಲ್ಲಎಂದು ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ. ರಾಮಚಂದ್ರ ತಿಳಿಸಿದ್ದಾರೆ.

ಕ್ಯಾನ್ಸರ್ ರೋಗಿಗಳಿಗೆ ಕೊರೊನಾ ಮಾರಕ
author img

By

Published : Apr 6, 2020, 1:56 PM IST

ಬೆಂಗಳೂರು: ಕೊರೊನಾ ವೈರಸ್ ಕ್ಯಾನ್ಸರ್ ರೋಗಿಗಳಿಗೂ ಮಾರಕವಾಗಬಹುದು. ಯಾಕೆಂದರೆ, ಕಿಮೋ ಥೆರಪಿ, ರೇಡಿಯೋ ಥೆರಪಿ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಅಂಥವರಿಗೆ ಕೊರೊನಾ ಸೋಂಕು ತಗುಲಿದರೆ ಮಾರಕವಾಗಲಿದೆ.‌ ಹೀಗಾಗಿ ರೋಟಿನ್ ಚೆಕ್ ಅಪ್ ಗಳಿಗೆ ಆಸ್ಪತ್ರೆಗೆ ಬರಬೇಡಿ ಎಂದು ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ. ರಾಮಚಂದ್ರ ತಿಳಿಸಿದ್ದಾರೆ.

ಕರೋನಾ ಎಫೆಕ್ಟ್ ಇದರೂ, ಕಿದ್ವಾಯಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ರೊಟೀನ್ ಚೆಕ್ ಅಪ್ ಗೆ ಬರಬೇಡಿ ಕೇವಲ ತುರ್ತು ಚಿಕಿತ್ಸೆಗೆ ಬನ್ನಿ ಎಂದರೂ ಜನ ಕೇಳುತ್ತಿಲ್ಲ ಅಂತ ತಿಳಿಸಿದ್ದಾರೆ..

ಡಾ. ರಾಮಚಂದ್ರ

ಇನ್ನು ಕೊರೊನಾ ಹೆಚ್ಚಾಗುತ್ತಿದ್ದು, ಲಾಕ್ ಡೌನ್ ಮಾಡಿರುವ ಕಾರಣದಿಂದಾಗಿ ಇದೀಗ ಕ್ಯಾನ್ಸರ್ ರೋಗಿಗಳಿಗೆ ರಕ್ತದ ಕೊರತೆ ಕೂಡ ಇದೆ. ಹೀಗಾಗಿ, ರಕ್ತ ದಾನಿಗಳು ಮುಂದೆ ಬಂದರೆ ಅನುಕೂಲ ವಾಗಲಿದೆ. ಕಿದ್ವಾಯಿಯಲ್ಲಿ 24 ಗಂಟೆಗಳ‌ ಕಾಲ ಬ್ಲಡ್ ಬ್ಯಾಂಕ್ ತೆರೆದಿದ್ದು, ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ..

ಇನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಎರಡು ವಾರ ವಿಳಂಬವಾದರೆ ಯಾವುದೇ ತೊಂದರೆ ಆಗುವುದಿಲ್ಲ. ಒಂದು ವೇಳೆ ಕ್ಯಾನ್ಸರ್ ರೋಗಿಗಳಿಗೆ ಕೊರೊನಾ ಸೋಂಕು ತಗುಲಿದರೆ ಅದರ ತೀವ್ರತೆ ಹೆಚ್ಚಾಗಿರುತ್ತೆ. ಇದು ಕುಟುಂಬದ ಸದಸ್ಯರಿಗೂ ಇತರರಿಗೂ ಸಮಸ್ಯೆ ಆಗುತ್ತದೆ. ಹೀಗಾಗಿ ತುರ್ತುಪರಿಸ್ಥಿತಿ ಇರುವವರು, ಅಂದರೆ ಉಸಿರಾಟ ತೊಂದರೆ, ನೋವು ಇರುವವರು ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ ಅಂತ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.