ETV Bharat / state

ಒಂದೇ ದಿನಕ್ಕೆ 2 ಸಾವಿರ ಗಡಿ ದಾಟಿದ ಸೋಂಕಿತರು.. ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ!? - corona updates in karnataka

ಕರ್ನಾಟಕದಲ್ಲಿ ಕೊರೊನಾ ರಣಕೇಕೆ ಹಾಕಿದ್ದು, ಸೋಂಕಿತರ ಸಂಖ್ಯೆಯಿಂದ ಹಿಡಿದು ಸಾವಿನ ಸಂಖ್ಯೆಯು ರಾಜ್ಯದಲ್ಲಿ ಏರುತ್ತಲೇ ಇದೆ.‌ ರಾಜ್ಯದ ಇಂದಿನ ಸಂಪೂರ್ಣ ವರದಿ ಇಲ್ಲಿದೆ..

corona updates in karnataka
2 ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
author img

By

Published : Jul 17, 2020, 10:28 PM IST

Updated : Jul 17, 2020, 11:25 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಜೊತೆಗೆ ಸಾವಿನ ಪ್ರಮಾಣವೂ ಏರಿಕೆ ಆಗುತ್ತಿದೆ. ‌ಇಂದು ಒಂದೇ ದಿನ 3,693 ಹೊಸ‌ ಪಾಸಿಟಿವ್ ಕೇಸ್​ ಪತ್ತೆಯಾಗಿದ್ರೆ, 115 ಮಂದಿ ಸಾವನ್ನಪ್ಪಿದ್ದಾರೆ. ಇಂದು ಒಂದೇ ದಿನ 2208 ಮಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.

ನಗರದಲ್ಲಿ ಸೋಂಕಿತರ ಸಂಖ್ಯೆ 27,496ಕ್ಕೆ ಏರಿಕೆಯಾಗಿದೆ. ಇಂದು 338 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 6290 ಮಂದಿ ಗುಣಮುಖರಾಗಿದ್ದಾರೆ. 20623 ಸಕ್ರಿಯ ಪ್ರಕರಣಗಳಿವೆ. 75 ಮಂದಿ ಕೊರೊನಾ ಸೋಂಕಿಗೆ ಮೃತಪಟ್ಟಿರುವುದು ಇಂದು ವರದಿಯಾಗಿದೆ. ಒಟ್ಟು ಮರಣದ ಸಂಖ್ಯೆ 582ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 333ಕ್ಕೆ ಏರಿದೆ. 75 ಮಂದಿಯ ಪೈಕಿ 14 ಜನ ತೀವ್ರ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಮನೆಯಲ್ಲೇ ನಿಧನರಾಗಿದ್ದಾರೆ.

corona updates in karnataka
ಬೆಂಗಳೂರು

ಹಾಸನ : ಇಂದು 21 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಸೇರಿ ಒಟ್ಟು 792 ಜನ ಸೋಂಕಿಗೊಳಗಾಗಿದ್ದಾರೆ. ಈದಿನದ ಮತ್ತೊಂದು ಸಾವಿನೊಂದಿಗೆ ಒಟ್ಟು 25 ಜನರು ಈವರೆಗೂ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಹೊಸದಾಗಿ ಪತ್ತೆಯಾದ 21 ಪ್ರಕರಣಗಳಲ್ಲಿ ಅರಕಲಗೂಡು 1, ಅರಸೀಕೆರೆ 5, ಬೇಲೂರು 1, ಚನ್ನರಾಯಪಟ್ಟಣ 3, ಸಕಲೇಶಪುರ 1, ಹಾಸನ ತಾಲೂಕಿಗೆ ಸೇರಿದವರು 9 ಜನ ಹಾಗೂ ಹೊಳೆನರಸೀಪುರ 1 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಒಬ್ಬರು ಮೃತಪಟ್ಟಿದ್ದು, ಒಟ್ಟಾರೆ 21 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಬಳ್ಳಾರಿ: ಗಣಿಜಿಲ್ಲೆಯಲ್ಲಿಂದು ಹೊಸದಾಗಿ 133 ಕೊರೊನಾ ಪಾಸಿಟಿವ್ ಕೇಸ್​ ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 2200ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈ ಒಂದೇ ದಿನಕ್ಕೆ 133 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,200ಕ್ಕೇರಿಕೆಯಾಗಿದೆ. 1207 ಮಂದಿ ಗುಣಮುಖರಾಗಿದ್ದಾರೆ. 54 ಮಂದಿ ಸಾವನ್ನಪ್ಪಿದ್ದು, 939 ಸಕ್ರಿಯ ಪ್ರಕರಣಗಳಿವೆ.

ಕೊಪ್ಪಳ : ಜಿಲ್ಲೆಯಲ್ಲಿ ಇಂದು ಮತ್ತೆ 15 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 431ಕ್ಕೆ ಏರಿಕೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ 2, ಕುಷ್ಟಗಿ ತಾಲೂಕಿನಲ್ಲಿ 2, ಯಲಬುರ್ಗಾ ತಾಲೂಕಿನಲ್ಲಿ ಒಬ್ಬರಿಗೆ ಹಾಗೂ ಗಂಗಾವತಿ ತಾಲೂಕಿನಲ್ಲಿ 10 ಪ್ರಕರಣ ಸೇರಿ ಇಂದು ಒಟ್ಟು 15 ಸೋಂಕಿತ ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 9 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಅದರ ಜೊತೆಗೆ ಇಂದು 38 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಯಚೂರು : ಜಿಲ್ಲೆಯಲ್ಲಿ ಇಂದು 17 ಹೊಸ ಕೊರೊನಾ ಪ್ರಕರಣ ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 948ಕ್ಕೆ ತಲುಪಿದೆ. ರಾಯಚೂರು ತಾಲೂಕಿನ 13, ಲಿಂಗಸೂಗೂರು 2, ಮಾನವಿ, ಸಿಂಧನೂರು ತಾಲೂಕಿನ ತಲಾ ಒಬ್ಬರಿಗೆ ಸೋಂಕು ತಗುಲಿದೆ. 13 ಜನ ಈವರಗೆ ಮೃತಪಟ್ಟಿದ್ದಾರೆ. ಇದುವರೆಗೆ ಪತ್ತೆಯಾಗಿರುವ 948 ಸೋಂಕಿತರ ಪೈಕಿ 544 ಜನ ಸೋಂಕಿನಿಂದ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 391 ಪ್ರಕರಣ ಸಕ್ರಿಯವಾಗಿವೆ.

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಈ ದಿನ 28 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 226ಕ್ಕೆ ಸೋಂಕಿತರ ಸಂಖ್ಯೆ ಏರಿಕೆ. ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಇಂದು ಐವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಒಟ್ಟು 128 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 226 ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 91 ಸಕ್ರಿಯ ಪ್ರಕರಣಗಳಿವೆ.

ಬೀದರ್: ಜಿಲ್ಲೆಯಲ್ಲಿಂದು ಇಬ್ಬರು ಬಲಿಯಾಗಿದ್ದು, 69 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈಗ ಸೋಂಕಿತರ ಸಂಖ್ಯೆ 1262ಕ್ಕೆ ಏರಿದೆ‌. ಸಾವಿನ ಸಂಖ್ಯೆ 55ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಇಬ್ಬರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. ಅಲ್ಲದೆ ಇಂದು 47 ಜನ ಗುಣಮುಖರಾಗಿ ಮನೆಗೆ ವಾಪಸಾಗಿದ್ದು, ಈವರೆಗೆ 719 ಜನರು ಗುಣಮುಖರಾಗಿದ್ದಾರೆ.

corona updates in karnataka
ಬೀದರ್

ಚಾಮರಾಜನಗರ: ಜಿಲ್ಲೆಯಲ್ಲಿಂದು ಹೊಸದಾಗಿ 17 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 234ಕ್ಕೆ ಏರಿಕೆಯಾಗಿವೆ. 96ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಐಸಿಯುನಲ್ಲಿರುವವರ ಸಂಖ್ಯೆ 7 ರಿಂದ 6 ಕ್ಕಿಳಿದಿದೆ. ಇಂದು ಪತ್ತೆಯಾದ 17 ಪ್ರಕರಣಗಳಲ್ಲಿ 10 ಗ್ರಾಮೀಣ ಭಾಗದಲ್ಲಾಗಿದೆ. ಇವರಲ್ಲಿ ಬೆಂಗಳೂರಿಗೆ ಗುಳೆ ಹೋದವರು ಹೆಚ್ಚಿದ್ದು 5 ವರ್ಷದ ಮಗು, 62 ವರ್ಷದ ವೃದ್ಧ ಇದ್ದಾರೆ. ಇಂದು ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ, ಹೂರ್ದಹಳ್ಳಿ, ಚಾಮರಾಜನಗರ ತಾಲೂಕಿನ ಮೂಡಲ ಅಗ್ರಹಾರ, ಕುದೇರು, ಕಣ್ಣೇಗಾಲ ಗ್ರಾಮದಲ್ಲಿ ಕೊರೊನಾ ಖಾತೆ ತೆರೆದಿದೆ.

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 76 ಸೋಂಕಿತರು ಪತ್ತೆಯಾಗಿದ್ದಾರೆ. ಅತಿ ಹೆಚ್ಚು 22 ಪ್ರಕರಣ ಕುಮಟಾದಲ್ಲಿದ್ದು, ಉಳಿದಂತೆ ಹೊನ್ನಾವರದಲ್ಲಿ 19, ಭಟ್ಕಳದಲ್ಲಿ 9, ಹಳಿಯಾಳ 6 ಮಂದಿಗೆ ಶಿರಸಿಯಲ್ಲಿ 5, ಕಾರವಾರದಲ್ಲಿ 5, ಮುಂಡಗೋಡ 4, ಅಂಕೋಲಾ 4, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 901ಕ್ಕೆ ಏರಿಕೆಯಾಗಿದ್ದು, 322 ಮಂದಿ ಗುಣಮುಖರಾಗಿದ್ದಾರೆ. 569 ಮಂದಿಗೆ ಚಿಕಿತ್ಸೆ ಚಿಕಿತ್ಸೆ ಮುಂದುವರಿದಿದೆ. 10 ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ.

ಹಾವೇರಿ : ಜಿಲ್ಲೆಯಲ್ಲಿ ಶುಕ್ರವಾರ 56 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಹಾವೇರಿ ಜಿಲ್ಲಾಡಳಿತ ಈ ಕುರಿತಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಇದರಿಂದ ಸೋಂಕಿತರ ಸಂಖ್ಯೆ 390ಕ್ಕೇರಿದೆ. ರಾಣೇಬೆನ್ನೂರು ತಾಲೂಕಿನಲ್ಲಿ 36, ಹಾವೇರಿ ತಾಲೂಕಿನಲ್ಲಿ 12 ಮತ್ತು ಶಿಗ್ಗಾಂವಿ ತಾಲೂಕಿನಲ್ಲಿ 8 ಪ್ರಕರಣ ವರದಿಯಾಗಿವೆ. ಕೋವಿಡ್ ಆಸ್ಪತ್ರೆಯಿಂದ 33 ಗುಣಮುಖರು ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 108ಕ್ಕೇರಿದೆ. ಅದರಲ್ಲಿ ಎರಡು ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕ್ಕಬಳ್ಳಾಪುರ : ನಗರದಲ್ಲಿ 16,ಚಿಂತಾಮಣಿ 2,ಬಾಗೇಪಲ್ಲಿ 4,ಶಿಡ್ಲಘಟ್ಟ1,ಗೌರಿಬಿದನೂರು 6 ಮತ್ತು ಗುಡಿಬಂಡೆಯಲ್ಲಿ 2 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 608ಕ್ಕೇರಿವೆ. ಗೌರಿಬಿದನೂರಿನ 59 ವರ್ಷದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸೋಂಕಿತರ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿವೆ. ಒಟ್ಟು 608 ಸೋಂಕಿತರಲ್ಲಿ 316 ಜನ ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದು, 273 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗ: ಇಂದು ಮತ್ತೆ 60 ಸೋಂಕಿತರು ಪತ್ತೆಯಾಗಿದ್ದಾರೆ‌. ಜಿಲ್ಲೆಯಲ್ಲಿ 762 ಜನ ಸೋಂಕಿತರಾಗಿದ್ದಾರೆ. ಇಂದು ಆಸ್ಪತ್ರೆಯಿಂದ 37 ಜನ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೂ 317 ಜನ ಬಿಡುಗಡೆಯಾದಂತಾಗಿದೆ. ಒಟ್ಟು 14 ಜನ ಕೊರೊನಾದಿಂದ ಸಾವಿಗೀಡಾಗಿದ್ದಾರೆ.

corona updates in karnataka
ಶಿವಮೊಗ್ಗ

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಕ್ಕೆ ಇಬ್ಬರು ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 24ಕ್ಕೇರಿದೆ. 31 ಮಂದಿಯಲ್ಲಿ ಸೋಂಕು ಕಾಣಿಸಿದೆ. ಸೋಂಕಿತರ ಸಂಖ್ಯೆ 689 ಆಗಿದೆ. ದಾವಣಗೆರೆಯಲ್ಲಿ 17, ಹರಿಹರ 7, ಜಗಳೂರು 5, ಚನ್ನಗಿರಿ ಹಾಗೂ ಹೊನ್ನಾಳಿಯಲ್ಲಿ ತಲಾ ಒಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ‌. ಇಂದು ಜಿಲ್ಲೆಯಲ್ಲಿ 50 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಇದುವರೆಗೆ 544 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 121 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

corona updates in karnataka
ದಾವಣಗೆರೆ

ಬೆಳಗಾವಿ: ನಗರದಲ್ಲಿ ಒಂದೇ ದಿನಕ್ಕೆ ಕಿಲ್ಲರ್ ಕೊರೊನಾಗೆ ನಾಲ್ವರು ಮೃತರಾಗಿದ್ದು, ಹೊಸದಾಗಿ ಜಿಲ್ಲೆಯಲ್ಲಿಂದು 95 ಜನರಿಗೆ ಸೋಂಕು ವಕ್ಕರಿಸಿದೆ. ಬೆಳಗಾವಿಯಲ್ಲಿ ಕಿಲ್ಲರ್ ಕೊರೊನಾಗೆ ಮೃತಪಟ್ಟವರ ಸಂಖ್ಯೆ 21ಕ್ಕೇರಿಕೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 789ಕ್ಕೇರಿಕೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 391 ಕೊರೊನಾ ಪಾಸಿಟಿವ್ ಆ್ಯಕ್ಟಿವ್ ಕೇಸ್ ಗಳಿದ್ದು, ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.

ಉಡುಪಿ: ಉಡುಪಿ ಜಿಲ್ಲೆಯಲ್ಲಿಂದು 84 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು‌ ಸೋಂಕಿತರ ಸಂಖ್ಯೆ ‌1,979ಕ್ಕೆ‌ ಏರಿಕೆಯಾಗಿದೆ. 429 ಸಕ್ರಿಯ ಪ್ರಕರಣಗಳಿದ್ದರೆ, ಇಂದು 81 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

ತುಮಕೂರು: ಕಲ್ಪತರು ನಾಡಿನಲ್ಲಿ ಇಂದು ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ 18 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 630ಕ್ಕೆ ಏರಿಕೆಯಾಗಿದೆ. 345 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 26,261 ಮಂದಿಯಲ್ಲಿ ಗಂಟಲು ದ್ರವದ ಮಾದರಿ ತೆಗೆಯಲಾಗಿದ್ದು, 21,624 ಮಂದಿಯಲ್ಲಿ ನೆಗೆಟಿವ್ ಕಂಡುಬಂದಿದೆ. ಇದುವರೆಗೂ 18 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕಲಬುರಗಿ: ಕಲಬುರಗಿಯಲ್ಲಿ ಮತ್ತೆ 89 ಜನರಲ್ಲಿ ಕೊರೊನಾ ಸೋಂಕು ಧೃಡಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2592 ಕ್ಕೆ ಏರಿಕೆಯಾಗಿದೆ. ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ 38ಜನ‌ ಕೊರೊನಾಗೆ ಬಲಿಯಾಗಿದ್ದಾರೆ. ಇಂದು ಜಿಲ್ಲೆಯಲ್ಲಿ 42 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ‌ಬಿಡುಗಡೆಯಾಗಿದ್ದಾರೆ.

corona updates in karnataka
ಕಲಬುರಗಿ

ರಾಮನಗರ : ಜಿಲ್ಲೆಯಲ್ಲಿ 17 ಕೊರೊನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಜಿಲ್ಲೆಯಲ್ಲಿ ದಾಖಲಾಗಿರುವ 414 ಪ್ರಕರಣಗಳ ಪೈಕಿ 272 ಜನರು ಗುಣಮುಖರಾಗಿದ್ದರೆ. ಇದುವರೆಗೆ ಒಟ್ಟು 13577 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 10860 ಪರೀಕ್ಷಾ ವರದಿಯ ಫಲಿತಾಂಶ ನೆಗೆಟಿವ್ ಬಂದಿದೆ.

ಮೈಸೂರು: 93 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳು 805 ಕ್ಕೇರಿದೆ. ಸಂಪರ್ಕಿತರಿಂದ 38 ಮಂದಿಗೆ, ಅಂತರ್ ಜಿಲ್ಲೆ ಹಾಗೂ ರಾಜ್ಯ ಪ್ರಯಾಣದಿಂದ 17ಮಂದಿಗೆ, ಐಎಲ್‌ಐ ಪ್ರಕರಣದಿಂದ 24 , 11 ಎಸ್‌ಎಆರ್ ಐ , ಮೂವರ ಗರ್ಭಿಣಿಯರಿಗೆ ಸೇರಿದಂತೆ ಒಟ್ಟು 93 ಮಂದಿಗೆ ಸೋಂಕು ದೃಢಪಟ್ಟಿದ್ದು, 7 ಜನ ಸೋಂಕಿಗೆ ಮೃತಪಟ್ಟಿದ್ದು, 20 ಮಂದಿ ಡಿಸ್ಚಾರ್ಜ್ ಆಗಿದ್ದಾರೆ .

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 311 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು 8 ಮಂದಿ ಸಾವಿಗೀಡಾಗಿದ್ದಾರೆ. ಇಂದು ಕೊರೊನಾದಿಂದ ಮೃತಪಟ್ಟ 8 ಮಂದಿಯಲ್ಲಿ ಇಬ್ಬರು ಉತ್ತರಕನ್ನಡ ಜಿಲ್ಲೆಯವರಾಗಿದ್ದು ,1 ಮಂದಿ ದಾವಣಗೆರೆ ಮತ್ತು 5 ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 3074 ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಇಂದು 115 ಮಂದಿ ಗುಣಮುಖರಾಗಿದ್ದು ಈವರೆಗೆ 1278 ಮಂದಿ ಗುಣಮುಖರಾಗಿದ್ದಾರೆ. 1725 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿತ್ರದುರ್ಗ: ಜಿಲ್ಲೆಯಲ್ಲಿಂದು 24 ಜನರಿಗೆ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 178 ಕ್ಕೆ ಏರಿಕೆಯಾಗಿದೆ. ಇದುವರೆಗೆ ಮೂವರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 103 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 69 ಸಕ್ರಿಯ ಪ್ರಕರಣಗಳು ಇವೆ.

ಧಾರವಾಡ: ಜಿಲ್ಲೆಯಲ್ಲಿ ಇಂದು ಒಂದೇ‌ ದಿನ 157 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಸೋಂಕಿತರ ಸಂಖ್ಯೆ 1731 ಕ್ಕೇರಿದೆ. ಈ ವರೆಗೆ ಒಟ್ಟು 593 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.1086 ಸಕ್ರಿಯ ಪ್ರಕರಣಗಳಿವೆ.

ಮಂಡ್ಯ: ಮಿಮ್ಸ್‌ನಲ್ಲಿ ಕೊರೊನಾ ಚಿಕಿತ್ಸೆಗೆ ದಾಖಲಾಗಿದ್ದ ಚನ್ನಪಟ್ಟಣ ಮೂಲದ ಸೋಂಕಿತೆ ಹಾಗೂ ಮದ್ದೂರು ತಾಲೂಕಿನ ಸೋಂಕಿತ ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ.ಇಂದು 22 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 820ಕ್ಕೇರಿದೆ. ಸಕ್ರಿಯ ಪ್ರಕರಣಗಳು 237 ಇದ್ದು, 579 ಮಂದಿ ಗುಣಮುಖರಾಗಿದ್ದಾರೆ.

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ರಣಕೇಕೆ ಹಾಕಿದೆ. ಇಂದು ಮತ್ತೆ 118 ಪ್ರಕರಣ ದಾಖಲಾಗಿದ್ದು, ಒಟ್ಟು ಪ್ರಕರಣ ಸಂಖ್ಯೆ 1238ಕ್ಕೆ ಏರಿದೆ. 85 ವರ್ಷದ ವೃದ್ಧ ಕೊವಿಡ್​ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆ: ಕೋವಿಡ್​ನಿಂದ ಇಂದು ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ 29 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು,ಸೋಂಕಿತರ ಸಂಖ್ಯೆ 616 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 216 ಇದ್ದು, ಸಕ್ರಿಯ ಪ್ರಕರಣ 374 ಇವೆ.

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಕ್ಕೆ ಇಬ್ಬರು ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 24ಕ್ಕೇರಿದೆ. 31 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 689 ಆಗಿದೆ. ದಾವಣಗೆರೆಯಲ್ಲಿ 17, ಹರಿಹರ 7, ಜಗಳೂರು 5, ಚನ್ನಗಿರಿ ಹಾಗೂ ಹೊನ್ನಾಳಿಯಲ್ಲಿ ತಲಾ ಒಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ‌. ಇಂದು ಜಿಲ್ಲೆಯಲ್ಲಿ 50 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಇದುವರೆಗೆ 544 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 121 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗದಗ: ಗದಗನಲ್ಲಿ ಇಂದು ಕೊರೊನಾ ಮಹಾಸ್ಫೋಟವಾಗಿದೆ. ಇದೇ ಮೊದಲ ಬಾರಿಗೆ ಒಂದೇ ದಿನಕ್ಕೆ 60 ಜನರಿಗೆ ಕೊವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಗದಗನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 473 ಕ್ಕೆ ಏರಿಕೆಯಾಗಿದೆ.

Last Updated : Jul 17, 2020, 11:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.