ETV Bharat / state

ಕೊರೊನಾಗೆ ರಾಜ್ಯದಲ್ಲಿ ಬಲಿಯಾದದ್ದು ಇಂದು 104 ಜನ: ಸೋಂಕು ಪ್ರಮಾಣ ಎಲ್ಲೆಲ್ಲಿ, ಎಷ್ಟು? - ಕರ್ನಾಟಕದಲ್ಲಿ ಕೊರೊನಾ ರಣಕೇಕೆ

ಕರ್ನಾಟಕದಲ್ಲಿ ಕೊರೊನಾ ರಣಕೇಕೆ ಹಾಕಿದ್ದು, ಸೋಂಕಿತರ ಸಂಖ್ಯೆಯಿಂದ ಹಿಡಿದು ಸಾವಿನ ಸಂಖ್ಯೆಯು ರಾಜ್ಯದಲ್ಲಿ ಏರುತ್ತಲೇ ಇದೆ.‌ ರಾಜ್ಯದ ಇಂದಿನ ಸಂಪೂರ್ಣ ವರದಿ ಇಲ್ಲಿದೆ.

corona updates in karnataka
ಕರ್ನಾಟಕದಲ್ಲಿ ಕೊರೊನಾ ರಣಕೇಕೆ
author img

By

Published : Jul 16, 2020, 10:19 PM IST

Updated : Jul 16, 2020, 10:53 PM IST

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 4,169 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಸೋಂಕಿತರ ಸಂಖ್ಯೆ 51,422 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 104 ಮಂದಿ ಕೋವಿಡ್ ಗೆ ಬಲಿಯಾಗಿದ್ದು, ಕೊರೊನಾ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿ, 1032 ಕ್ಕೆ ಏರಿಕೆಯಾಗಿದೆ. ಒಟ್ಟು 1263 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 19729 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 30,655 ಆಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 539 ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರೊಂದರಲ್ಲೇ 2,344 ಮಂದಿಗೆ ಪಾಸಿಟಿವ್ ಬಂದಿದೆ.

corona updates in karnataka
ಬಳ್ಳಾರಿ

ಬಳ್ಳಾರಿ: ಬಳ್ಳಾರಿಯಲ್ಲಿಂದು ಹೊಸದಾಗಿ 42 ಕೊರೊನಾ ಪಾಸಿಟಿವ್ ಕೇಸ್ ಗಳು‌ ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 2067ಕ್ಕೆ ಏರಿಕೆಯಾಗಿದೆ. ಈವರೆಗೆ 1166 ಮಂದಿ ಗುಣಮುಖರಾಗಿದ್ದು, 54 ಮಂದಿ ಸಾವನ್ನಪ್ಪಿದ್ದಾರೆ. 847 ಸಕ್ರಿಯ ಪ್ರಕರಣಗಳಿವೆ.

corona updates in karnataka
ಕೊಪ್ಪಳ

ಕೊಪ್ಪಳ: ಜಿಲ್ಲೆಯಲ್ಲಿ ಇಂದು ಮತ್ತೆ 48 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು,ಸೋಂಕಿತರ ಸಂಖ್ಯೆ 416 ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 9 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಅದರ ಜೊತೆಗೆ ಇಂದು 28 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

corona updates in karnataka
ತುಮಕೂರು

ತುಮಕೂರು: ಕಲ್ಪತರ ನಾಡು ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮತ್ತೊಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 18ಕ್ಕೆ ಏರಿಕೆ ಆಗಿದೆ. ಇಂದು ಇಬ್ಬರು ಪೊಲೀಸರು ಸೇರಿದಂತೆ 15 ಮಂದಿಗೆ ಸೋಂಕು ತಗಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 612ಕ್ಕೆ ಏರಿಕೆ ಆಗಿದೆ. ತುಮಕೂರು ತಾಲೂಕಿನ 12 ಮಂದಿಯಲ್ಲಿ, ಸಿರಾ ತಿಪಟೂರು ಗುಬ್ಬಿ ತಾಲೂಕಿನ ತಲಾ ಓರ್ವ ವ್ಯಕ್ತಿಗೆ ಸೋಂಕು ದೃಢವಾಗಿದೆ. ಇದುವರೆಗೂ 222 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

corona updates in karnataka
ಚಾಮರಾಜನಗರ

ಚಾಮರಾಜನಗರ:‌ ಜಿಲ್ಲೆಯಲ್ಲಿಂದು 12 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 217ಕ್ಕೆ ಏರಿಕೆಯಾಗಿದೆ.‌19 ಮಂದಿ ಬಿಡುಗಡೆಯಾಗುವ ಮೂಲಕ‌ ಸಕ್ರಿಯ ಪ್ರಕರಣಗಳ ಸಂಖ್ಯೆ 79ರಷ್ಟಿದೆ ಇವರಲ್ಲಿ 7 ಮಂದಿ ಐಸಿಯುನಲ್ಲಿರುವುದು ಕಳವಳಕಾರಿಯಾಗಿದೆ.

ಕೋಲಾರ: ಒಂದೇ ದಿನ 40 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಕೊರೊನಾ ಬಾಂಬ್ ಸಿಡಿಸಿದೆ‌. ಈ ಮಧ್ಯೆ ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದು ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಇದರಲ್ಲಿ ಕೋಲಾರ ಜಿಲ್ಲೆಯಲ್ಲಿ ಇದುವರೆಗೂ 8 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಇದುವರೆಗೂ 405 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಬಿಡುಗಡೆಯಾದವರ ಸಂಖ್ಯೆ 143 ಆಗಿದ್ದು, 254 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ದಿನ 30 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 198 ಕ್ಕೆ ಕೊರೊನ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಇಂದು 22 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಒಟ್ಟು 123 ಜನ ಸೋಂಕಿತರು ಜಿಲ್ಲಾ ಕೋವೀಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಯಚೂರು: ಜಿಲ್ಲೆಯಲ್ಲಿ ಕೊರೊನಾಘಾತ ಉಂಟು ಮಾಡಿದೆ. ಇಂದು ಒಂದೇ ದಿನ 117 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 931ಕ್ಕೆ ಏರಿಕೆಯಾಗಿದೆ. ಇಂದು ಬಂದಿರುವ ವರದಿಯಲ್ಲಿ ರಾಯಚೂರು ತಾಲೂಕಿನ 49, ಮಾನವಿ 36, ದೇವದುರ್ಗ 9, ಸಿಂಧನೂರು 15, ಲಿಂಗಸೂಗೂರು ತಾಲೂಕಿನ 8 ಜನರಲ್ಲಿ ಸೋಂಕು ದೃಢವಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಶಾಕ್ ನೀಡಿದ್ದು, 6 ಮಂದಿ ಸಾವನ್ನಪ್ಪಿದರೆ, 238 ಮಂದಿಗೆ ಇಂದು ಕೊರೊನಾ ದೃಢಪಟ್ಟಿದೆ. ಇದರಲ್ಲಿ ಒಬ್ಬರು ಬೆಳಗಾವಿ ಮತ್ತು ಐವರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 238 ಪ್ರಕರಣಗಳು ದೃಢಪಟ್ಟಿದ್ದು ಇದರಲ್ಲಿ 23 ಪ್ರಾಥಮಿಕ ಸಂಪರ್ಕದಿಂದ, 106 ಐಎಲ್ಐ ಪ್ರಕರಣದಲ್ಲಿ, 17 ಸಾರಿ ಪ್ರಕರಣದಲ್ಲಿ, 19 ವಿದೇಶದಿಂದ ಬಂದವರಿಂದ ಪತ್ತೆಯಾಗಿದ್ದರೆ 73 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ2763 ಪ್ರಕರಣಗಳು ದೃಢಪಟ್ಟಿದೆ. ಇಂದು 74 ಮಂದಿ ಗುಣಮುಖರಾಗಿದ್ದು, ಈವರೆಗೆ 1163 ಮಂದಿ ಗುಣಮುಖರಾಗಿದ್ದಾರೆ. 1537 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

corona updates in karnataka
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ‌ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ಒಂದೇ ದಿನ 77 ಸೊಂಕಿತರು ಪತ್ತೆಯಾಗಿದ್ದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟಂತಾಗಿದೆ. ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ 28, ಚಿಂತಾಮಣಿ 19,ಗೌರಿಬಿದನೂರು 17,ಬಾಗೇಪಲ್ಲಿ 8, ಶಿಡ್ಲಘಟ್ಟ 3 ಹಾಗೂ ಗುಡಿಬಂಡೆಯಲ್ಲಿ 2 ಸೊಂಕಿತ ಪ್ರಕರಣಗಳು ಪತ್ತೆಯಾಗಿದೆ ಒಟ್ಟಾರೆ ಜಿಲ್ಲೆಯಾದ್ಯಂತ 77 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟಿದೆ.

ಉಡುಪಿ: ನಗರದಲ್ಲಿಂದು 109 ಮಂದಿಗೆ ಪಾಸಿಟಿವ್ ದೃಢವಾಗಿದೆ. ಈ ಹಿನ್ನೆಲೆ ಜನತೆ ಆತಂಕಗೊಂಡಿದ್ದಾರೆ . ಇಂದು 80 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಒಟ್ಟು ಸೊಂಕಿತರ ಸಂಖ್ಯೆ 1895 ಕ್ಕೆ ಏರಿಕೆಯಾಗಿದೆ.

ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಯಾದಗಿರಿಯಲ್ಲಿಂದು ಮತ್ತೆ 34 ಕೊರೊನಾ ಪಾಸಿಟಿವ್ ಕೆಸ್‌ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1535 ಕ್ಕೆ ಏರಿಕೆಯಾದಂತಾಗಿದೆ. ಜಿಲ್ಲೆಯಲ್ಲಿ ದಿನೇ ದಿನೇ SARI ಮತ್ತು ILI ಪ್ರಕರಣಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಪೈಕಿ ಇಲ್ಲಿಯವರೆಗೆ 1083 ಜನ ಕೊರೊನಾ ವೈರಸ್ ನಿಂದ ಗುಣಮುಖರಗಿ ಬಿಡುಗಡೆ ಹೊಂದಿದ್ದು 451 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ ಒಬ್ಬರು ಮೃತಪಟ್ಟಿರುತ್ತಾರೆ.

ಚಿತ್ರದುರ್ಗ: 21 ಜನರಿಗೆ ಇಂದು ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 154 ಕ್ಕೆ ಏರಿಕೆಯಾಗಿದೆ. ಒಬ್ಬರು ಕೋವಿಡ್‍ನಿಂದ ಮೃತಪಟ್ಟಿರುವ ಪ್ರಕರಣ ವರದಿಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಮೂವರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 96 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 55 ಸಕ್ರಿಯ ಪ್ರಕರಣಗಳು ಇವೆ.

ಉತ್ತರಕನ್ನಡ : ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಹಾವಳಿ ಮುಂದುವರಿದಿದ್ದು, 51 ಮಂದಿಗೆ ಸೋಂಕು ಧೃಡಪಟ್ಟಿದೆ. ಪತ್ತೆಯಾದ ಸೋಂಕಿತರ ಪೈಕಿ ಹಳಿಯಾಳದಲ್ಲಿ 17 , ಶಿರಸಿಯಲ್ಲಿ 12,ಭಟ್ಕಳ 8, ಮುಂಡಗೋಡ 4, ಯಲ್ಲಾಪುರ 2, ಅಂಕೋಲಾ 5, ಸಿದ್ದಾಪುರ 1, ಕಾರವಾರ 1, ಹೊನ್ನಾವರದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಇಂದು ಏಂಟು ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಅದರಲ್ಲಿ ಕಾರವಾರದ 6 ಮಂದಿ ಹಾಗೂ ಶಿರಸಿ ಮತ್ತು ದಾಂಡೇಲಿ ತಲಾ ಓರ್ವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 825 ಕ್ಕೆ ಏರಿಕೆಯಾಗಿದ್ದು, 322 ಮಂದಿ ಗುಣಮುಖರಾಗಿದ್ದು, 491 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ.

ಮೈಸೂರು: ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಶತಕ ಮೀರುತ್ತಿರುವುದರಿಂದ ದಿನೇದಿನೇ ಆತಂಕದ ವಾತಾವರಣದಲ್ಲಿ ಜನರು ಬದುಕುವಂತಾಗಿದೆ. ಮೈಸೂರಿನಲ್ಲಿ ಗುರುವಾರ 130 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಕ್ರಿಯ ಪ್ರಕರಣ 739ಕ್ಕೇರಿದೆ. ಮೂವರ ಸಾವಿನಿಂದ ಸಾವಿನ ಸಂಖ್ಯೆ ಅರ್ಧ ಶತಕ ಪೂರೈಸಿದರೆ, ಗುಣಮುಖರಾದ 28 ಮಂದಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ 29713 ಮಂದಿಗೆ ಕೊರೊನಾ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 28,437 ಮಂದಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ. ಈವರೆಗೆ 531 ಮಂದಿ ಡಿಸ್ಚಾರ್ಜ್ ಆಗಿದ್ದು, 739 ಸಕ್ರಿಯ ಪ್ರಕರಣಗಳಿವೆ.

corona updates in karnataka
ವಿಜಯಪುರ

ವಿಜಯಪುರ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಒಂದೇ ದಿನ ಬರೋಬರಿ 144 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಪಾಸಿಟಿವ್ ಸಂಖ್ಯೆ ಸಾವಿರ ಗಡಿದಾಟಿದ್ದು ಒಟ್ಟು 1120 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಇದರ ಜತೆ ಬಿಡುಗಡೆಯಾದವರ ಸಂಖ್ಯೆ ಇಲ್ಲಿಯವರೆಗೆ 719ಕ್ಕೆ ಏರಿದೆ. ಈವರೆಗೆ 1120 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೂ ಕೂಡ 2135 ಜನರ ವರದಿ ಬರಬೇಕಿದೆ. 1528 ಜನ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

corona updates in karnataka
ವಿಜಯಪುರ

ಗದಗ: ನಗರದಲ್ಲಿ ಇಂದು 44 ಸೋಂಕು ಸೋಂಕು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕುನೂರು ಗಡಿ ದಾಟಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ 414 ಜನ ಕೊರೊನಾ ಸಂಕಿಗೆ ಒಳಗಾಗಿದ್ದಾರೆ.

ಧಾರವಾಡ: ಜಿಲ್ಲೆಯಲ್ಲಿ ಒಂದೇ‌ ದಿನ 176 ಜನರಿಗೆ ಸೋಂಕು ಹರಡಿದೆ. ಇದರಿಂದ ಸೋಂಕಿತರ ಸಂಖ್ಯೆ 1574ಕ್ಕೇರಿದೆ. ಇಂದು 42 ಜನ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟಾರೆ 524 ಜನರು ಗುಣಮುಖರಾಗಿದಂತೆ ಆಗಿದೆ. 1005 ಸಕ್ರಿಯ ಪ್ರಕರಣಗಳಿವೆ. ಒಟ್ಟು 44 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ‌ 700 ರ ಗಡಿ‌ ದಾಟಿದೆ. ಇಂದು ಜಿಲ್ಲೆಯಲ್ಲಿ 58 ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 702 ಕ್ಕೆ ತಲುಪಿದೆ. ಇಂದು ಆಸ್ಪತ್ರೆಯಿಂದ 36 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೊಂಕಿನಿಂದ ಇಂದು ಒಬ್ಬರು ಸಾವನ್ನಪ್ಪಿದ್ದು, ಈವರೆಗೆ ಜಿಲ್ಲೆಯಲ್ಲಿ 13 ಜನ ಸೋಂಕಿತರು ಮೃತರಾಗಿದ್ದಾರೆ.

corona updates in karnataka
ಶಿವಮೊಗ್ಗ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮೆರೆದಿದ್ದು, ಮೂವರನ್ನು ಸಾವಿಗೀಡಾಗಿದ್ದು, 94 ಜನರಿಗೆ ಸೋಂಕು ವಕ್ಕರಿಸಿದೆ. ಅಥಣಿಯ 48 ವರ್ಷ ವಯಸ್ಸಿನ ಮಹಿಳೆ, ರಾಯಭಾಗದ 28 ವರ್ಷ ವಯಸ್ಸಿನ ಪುರುಷ ಹಾಗೂ ರಾಮದುರ್ಗದ 56 ವರ್ಷ ವಯಸ್ಸಿನ ಪುರುಷ ಕೊರೊನಾಗೆ ಪ್ರಾಣಚೆಲ್ಲಿದ್ದಾರೆ. ಕೊರೊನಾ ಅಟ್ಟಹಾಸಕ್ಕೆ ಬೆಳಗಾವಿಯಲ್ಲಿ ಮೃತರ ಸಂಖ್ಯೆ 17 ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 694 ಆಗಿದೆ.

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಇದರೊಂದಿಗೆ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ. ಆಳಂದ ತಾಲೂಕಿನ ಧಂಗಾಪೂರ ಗ್ರಾಮದ 55 ವರ್ಷದ ವ್ಯಕ್ತಿ (ಪಿ.47420) ಜುಲೈ 11 ರಂದು ತೀವ್ರ ಉಸಿರಾಟ ಸಮಸ್ಸೆಯಿಂದ ಆಸ್ಪತ್ರೆಗೆ ದಾಖಲಾಗಿ ಜುಲೈ 13 ರಂದು ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಹೊಸದಾಗಿ 123 ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2503 ಗೆ ಏರಿಕೆಯಾಗಿದೆ.

ಮಂಡ್ಯ: ಸಕ್ಕರೆ ಕಾಯಿಲೆ, ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದ ಕೊರೊನಾ ಸೋಂಕಿತ 60 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ. ಇನ್ನು ಜಿಲ್ಲೆಯಲ್ಲಿ 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 27 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 798ಕ್ಕೇ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 579 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 217 ಆಗಿದೆ.

corona updates in karnataka
ಮಂಡ್ಯ

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು,ಆತಂಕ ಮೂಡಿಸಿದೆ.ಜಿಲ್ಲೆಯಲ್ಲಿ ಹೊಸದಾಗಿ 39 ಕೋವಿಡ್ ಪ್ರಕರಣಗಳು ದೃಡ ಪಟ್ಟಿದ್ದು,ನಾಲ್ವರು ಮೃತ ಪಟ್ಟಿರುವುದು ವರದಿಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 587 ಕ್ಕೆ ಏರಿಕೆ ಆಗಿದ್ದರೆ,ಇಲ್ಲಿಯವರೆಗೆ 25 ಜನ ಮೃತ ಪಟ್ಟಿದ್ದಾರೆ. ಗುಣಮುಖರಾದವರ ಸಂಖ್ಯೆ 220 ಇದ್ದು, ಸಕ್ರಿಯ ಪ್ರಕರಣ 346 ಇವೆ.

Last Updated : Jul 16, 2020, 10:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.