ಬೆಂಗಳೂರು : ರಾಜ್ಯದಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದ ಹಿನ್ನೆಲೆ ಚೈನ್ ಲಿಂಕ್ ಬ್ರೇಕ್ ಮಾಡಲು ನಿನ್ನೆಯಿಂದ ಟಫ್ ರೂಲ್ಸ್ ಜಾರಿ ಮಾಡಲಾಗಿದೆ.
2ನೇ ಅಲೆಯ ಅಬ್ಬರಕ್ಕೆ ಬ್ರೇಕ್ ಹಾಕಲು ಈ ಹಿಂದೆ ಏಪ್ರಿಲ್ 27 ರಿಂದ 12 ದಿನಗಳ ಕಾಲ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಆದರೆ, ಅದು ಮುಗಿಯುವ ಮುನ್ನವೇ ಮತ್ತೊಮ್ಮೆ ಟಫ್ ರೂಲ್ಸ್ನ ಮೇ 10 ರಿಂದ 24ರವರಗೆ ಅಗತ್ಯ ಸೇವೆ ಹೊರತುಪಡಿಸಿ ಬೇರೆ ಎಲ್ಲ ಚಟುವಟಿಕೆಗೆ ಬ್ರೇಕ್ ಹಾಕಲಾಗಿದೆ.
ಈ ನಡುವೆ ಟಫ್ ರೂಲ್ಸ್ ಜಾರಿ ಇದ್ದರೂ ಜನರ ಓಡಾಟ ಕಡಿಮೆ ಇದ್ದರೂ ಸೋಂಕಿತರ ಸಂಖ್ಯೆ ಮಾತ್ರ ದುಪ್ಪಟ್ಟು ಆಗ್ತಿತ್ತು. ಆದರೆ, ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಇದು ಟಫ್ ರೂಲ್ಸ್ ಪರಿಣಾಮದ ಕಾರಣಕ್ಕೆ ಇಳಿಕೆಯಾಗುತ್ತಿದೆಯಾ? ಅಂದರೆ ಅದಕ್ಕೆ ಅಧಿಕಾರಿಗಳೇ ಉತ್ತರ ಕೊಡಬೇಕು.
ಯಾಕೆಂದರೆ, ಕೊರೊನಾ ಕಂಟ್ರೋಲ್ ಆಗಬೇಕು, ಎಲ್ಲರಿಗೂ ಹರಡುವುದನ್ನ ತಡಿಬೇಕು ಅಂದರೆ ಹೆಚ್ಚು ಹೆಚ್ಚು ಟೆಸ್ಟ್ ಗಳು ಆಗಬೇಕು. ಆಗ ಸೋಂಕಿತರನ್ನ ಗುರುತಿಸಿ ಬೇಗ ಚಿಕಿತ್ಸೆಯನ್ನ ನೀಡಬಹುದು. ಆದರೆ, ಇದೀಗ ಆ ಟೆಸ್ಟಿಂಗ್ ಪ್ರಮಾಣ ಕಡಿಮೆ ಮಾಡಿರುವುದೇ ಇಳಿಕೆಗೆ ಕಾರಣವಾಗಿರಬಹುದು.
ಮುಖ್ಯವಾಗಿ ದೇಶದ ಇತರೆ ನಗರಗಳನ್ನ ಮೀರಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗ್ತಿತ್ತು. ಅಂದಹಾಗೆ ಸೋಂಕು ಇಳಿಕೆಗೆ ಹೊಸ ಮಾರ್ಗವನ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂಡುಕೊಳ್ತಾ ಅನ್ನೋ ಅನುಮಾನ ಕಾಡದೇ ಇರೋಲ್ಲ. ಅಡ್ಡದಾರಿ ಮೂಲಕ ಸೋಂಕು ಇಳಿಕೆ ತೋರಿಸಲು ಹೊರಟಿದ್ಯಾ? ಅಂತ ಪ್ರಶ್ನೆ ಉದ್ಭವಿಸದೇ ಇರದು.
ಪಾಸಿಟಿವಿಟಿ ರೇಟ್ ಜಾಸ್ತಿಯಾಗ್ತಿದ್ದಂತೆ ಕೊರೊನಾ ಟೆಸ್ಟ್ ಸಂಖ್ಯೆಯನ್ನ ಅರ್ಧಕ್ಕೆ ಇಳಿಸಿದೆ. ನಿನ್ನೆ ಬೆಂಗಳೂರಿನಲ್ಲಿ ಬರೋಬ್ಬರಿ 50% ಪಾಸಿಟಿವಿಟಿ ರೇಟ್ ದಾಖಲಾಗಿದೆ. ನಿನ್ನೆ ನಗರದಲ್ಲಿ ಕೊರೊನಾ ಟೆಸ್ಟ್ ಮಾಡಿದ್ದು ಕೇವಲ 32,862 ಮಂದಿಗೆ ಮಾತ್ರ. ಇದರಲ್ಲಿ ಸೋಂಕು 16,747 ಪತ್ತೆಯಾಗಿದೆ. ಈ ಮೊದಲು ನಿತ್ಯ 65 ಸಾವಿರದವರೆಗೆ ಕೋವಿಡ್ ಟೆಸ್ಟ್ನ್ನು ನಡೆಸಲಾಗುತ್ತಿತ್ತು. ಆದರೆ, ಇದೀಗ ಅರ್ಧಕ್ಕೆ ಇಳಿಸಿದೆ.
ಇತ್ತ ಕೊರೊನಾ ಟಾಸ್ಕ್ ಫೋರ್ಸ್ ಕಮಿಟಿ ಕೊರೊನಾ ಕಂಟ್ರೋಲ್ಗಾಗಿ ಟೆಸ್ಟ್ನ್ನು 1 ಲಕ್ಷಕ್ಕೆ ಏರಿಸಲು ಸಲಹೆ ನೀಡಿತ್ತು. ಆದರೆ, ಉಲ್ಟಾ ಮಾಡಿದ ಬಿಬಿಎಂಪಿ ಟೆಸ್ಟ್ ಪ್ರಮಾಣ ಅರ್ಧಕ್ಕೆ ಇಳಿಕೆ ಮಾಡಿದೆ. ದೇಶದ ಎಲ್ಲಾ ಮಹಾನಗರಕ್ಕಿಂತ ಬೆಂಗಳೂರಲ್ಲೇ ಅಧಿಕ ಸೋಂಕು ಪತ್ತೆಯಾಗ್ತಿದೆ. ಹೀಗಾಗಿ, ದೇಶದ ಮುಂದೆ ಬೆತ್ತಲಾಗೋ ಭಯದಲ್ಲಿ ಟೆಸ್ಟ್ ಇಳಿಕೆ ಮಾಡಿತಾ? ಬಿಬಿಎಂಪಿ ಅನ್ನೋ ಮಾತು ಸದ್ಯ ಕೇಳಿ ಬರ್ತಿದೆ.
ರಾಜಧಾನಿ ಬೆಂಗಳೂರಿನ ಕೇಸ್ ಡೀಟೈಲ್ಸ್
ದಿನಾಂಕ - ಸೋಂಕಿತರ ಸಂಖ್ಯೆ- ಸಾವು
ಮೇ 1 | 19,353 | 162 ಸಾವು | |
ಮೇ 2 | 21,199 | 64 ಸಾವು | |
ಮೇ 3 | 22,112 | 115 ಸಾವು | |
ಮೇ 4 | 20,870 | 132 ಸಾವು | |
ಮೇ 5 | 23,106 | 161 ಸಾವು | |
ಮೇ 6 | 23,706 | 139 ಸಾವು | |
ಮೇ 7 | 21,376 | 346 ಸಾವು | |
ಮೇ 8 | 18, 473 | 285 ಸಾವು | |
ಮೇ 9 | 20,897 | 281 ಸಾವು | |
ಮೇ10 | 16,747 | 374 ಸಾವು |
ಅಂದಹಾಗೆ, ಬೆಂಗಳೂರು ಒಂದರಲ್ಲೇ ನಿತ್ಯ ಒಂದು ಲಕ್ಷ ಮಂದಿಗೆ ಕೋವಿಡ್ ಟೆಸ್ಟ್ ಮಾಡಲು ತಾಂತ್ರಿಕ ಸಲಹೆ ಸಮಿತಿ ಸಲಹೆ ನೀಡಿತ್ತು. ಆದರೆ, ಇದೀಗ ಅದರ ಪ್ರಮಾಣ ಕಡಿಮೆ ಆಗಿದ್ದು, ರಾಜ್ಯಾದ್ಯಂತ ಒಂದೂವರೆ ಲಕ್ಷ ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ನಿತ್ಯ 1,70,000ಕ್ಕೂ ಹೆಚ್ಚು ಜನರಿಗೆ ಮಾಡುತ್ತಿದ್ದ ಪರೀಕ್ಷೆ ಇದೀಗ ಒಂದು ವಾರದಿಂದ ಇಳಿಕೆಯಾಗಿದೆ.
ರಾಜ್ಯದ ಕೋವಿಡ್ ಪರೀಕ್ಷೆಯ ಅಂಕಿಅಂಶ
ದಿನಾಂಕ- ಕೋವಿಡ್ ಪರೀಕ್ಷೆ-ಸೋಂಕಿತರ ಸಂಖ್ಯೆ
ಏಪ್ರಿಲ್ -27 | 1,70,116 | 31,830 |
ಏಪ್ರಿಲ್ -28 | 1,71,997 | 39,047 |
ಏಪ್ರಿಲ್ -29 | 1,75,816 | 35,024 |
ಏಪ್ರಿಲ್ -30 | 1,89,793 | 48,296 |
ಮೇ- 01 | 1,77,982 | 40,990 |
ಮೇ- 02 | 1,58,365 | 37,733 |
ಮೇ- 03 | 1,49,090 | 44,438 |
ಮೇ- 04 | 1,53,707 | 44,631 |
ಮೇ- 05 | 1,55,224 | 50,112 |
ಮೇ- 06 | 1,64,441 | 49,058 |
ಮೇ- 07 | 1,58,902 | 48,781 |
ಮೇ- 08 | 1,57,027 | 47,563 |
ಮೇ- 09 | 1,46,491 | 47,930 |
ಮೇ- 10 | 1,24,110 | 39,305 |
ನಿನ್ನೆ ರಾಜ್ಯಾದ್ಯಂತ ಕೇವಲ 1,24,100 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈ ಹಿಂದೆ ನಿತ್ಯ 2 ಲಕ್ಷ ಸನಿಹ ಮುಟ್ಟುತ್ತಿದ್ದ ಕೋವಿಡ್ ಪರೀಕ್ಷೆ, ಇದೀಗ ಕಡಿಮೆ ಆಗಿದೆ. ಈ ಮೂಲಕ ಪಾಸಿಟಿವಿಟಿ ರೇಟ್ ಕಡಿಮೆ ಮಾಡಿಕೊಳ್ಳಲು ಮುಂದಾಗ್ತಿದೆ. ಇತರೆ ರಾಜ್ಯಗಳ ಮುಂದೆ ಹೋಗುವ ಮಾನವನ್ನ ಉಳಿಸಕೊಳ್ಳಲು ಕೋವಿಡ್ ಟೆಸ್ಟ್ ಪ್ರಮಾಣವನ್ನೇ ಕಡಿಮೆ ಮಾಡಲಾಗಿದ್ಯಾ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಓದಿ: ಸಾರ್ವಜನಿಕರ ಮೇಲೆ ಅನಗತ್ಯ ಬಲ ಪ್ರಯೋಗ ಬೇಡ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ