ETV Bharat / state

ಆನೇಕಲ್​​ನ ಕೊರೊನಾ ಸೋಂಕಿತ ವ್ಯಕ್ತಿ ಸಾವು

ಆನೇಕಲ್​​ನಲ್ಲಿ ಪತ್ತೆಯಾದ ಮೊಟ್ಟಮೊದಲ ಕೊರೊನಾ ಸೋಂಕಿತ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

corona-patient-died-in-anekal
corona-patient-died-in-anekal
author img

By

Published : May 20, 2020, 4:08 PM IST

ಆನೇಕಲ್​: ತಾಲೂಕಿನಲ್ಲಿ ಪತ್ತೆಯಾದ ಮೊಟ್ಟ ಮೊದಲ ಕೊರೊನಾ ಸೋಂಕಿತ ಸಾವನ್ನಪ್ಪಿದ್ದಾನೆ. 17 ನೇ ತಾರೀಖಿನಂದು ಆಸ್ಪತ್ರೆಗೆ ದಾಖಲಾಗಿದ್ದ. 18 ನೇ ತಾರೀಖಿನಂದು ಕೊರೊನಾ ಸೋಂಕು ದೃಢಪಟ್ಟಿತ್ತು.

ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆಯನ್ನು ನೀಡಲಾಗಿತ್ತು. ಸೋಂಕಿತ ಇಂದು 12:30 ಕ್ಕೆ ಮೃತಪಟ್ಟಿರುವುದು ದೃಢವಾಗಿದೆ.‌ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಸೋಂಕಿತ ವ್ಯಕ್ತಿ ವೃತ್ತಿಯಲ್ಲಿ ಫಿಜಿಯೋಥೆರಪಿಸ್ಟ್ ಆಗಿದ್ದರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ತಮಿಳುನಾಡಿನ ವೇಲೂರಿಗೆ ಪ್ರಯಾಣ ಬೆಳೆಸಿ ವೇಲೂರಿನಿಂದ ಅತ್ತಿಬೆಲೆ ಮೂಲಕ ಅನಂತನಗರಕ್ಕೆ ಬಂದಿದ್ದರು. ಹೆಬ್ಬಗೋಡಿ ಅನಂತನಗರಕ್ಕೆ ಬಂದ ನಂತರ ಚಂದಾಪುರದ ಜಿಪಿಆರ್ ಬಡಾವಣೆ ಸೇರಿದಂತೆ ಹಲವು ಕಡೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಹೋಗಿದ್ದರು.

ಇನ್ನು ಅಪಾರ್ಟ್ಮೆಂಟ್ ನಲ್ಲಿದ್ದಾಗ ತನ್ನ ಸ್ನೇಹಿತ ಹಾಗೂ ಮನೆಯಲ್ಲಿ ಕೆಲಸ ಮಾಡುವಾಕೆ ಹಾಗೂ ಸೆಕ್ಯೂರಿಟಿ ಜೊತೆ ಸಂಪರ್ಕ ಹೊಂದಿದ್ದ. 17 ನೇ ತಾರೀಖಿನಂದು ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 18 ರಂದು ಕೊರೊನಾ ಪಾಸಿಟಿವ್ ಎಂದು ದೃಢಪಟ್ಟ ನಂತರ ಆತನಿದ್ದ ಅಪಾರ್ಟ್​ಮೆಂಟ್​ ಸುತ್ತಮುತ್ತ 100ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಆತನ ಪತ್ನಿ ಸೇರಿದಂತೆ ಪ್ರಾಥಮಿಕ ಸಂಪರ್ಕ ಹೊಂದಿದ್ದವನ್ನು ಕ್ವಾರಂಟೈನ್ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.