ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಆರ್ಭಟ ಮುಂದುವರೆದಿದೆ. ಇಬೆಡ್ ಸಿಗದೇ ಓರ್ವ ಸೋಂಕಿತ ಸಾವಿಗೀಡಾಗಿರುವ ಘಟನೆ ನಡೆದಿದೆ.
ಎರಡನೇ ಅಲೆಯ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಒಂದರ ಮೇಲೊಂದು ಮನಕಲಕುವ ಘಟನೆಗಳು ನಡೆಯುತ್ತಿವೆ. ಕೊರೊನಾ ಸೋಂಕಿತರು ಬೆಡ್ ಸಿಗದೆ ಪ್ರಾಣ ಬಿಡುತ್ತಿದ್ದಾರೆ. ಕಳೆದ ರಾತ್ರಿಯಿಂದಲೂ ನಗರದ ನಾಲ್ಕು ಖಾಸಗಿ ಆಸ್ಪತ್ರೆಗೆ ಅಲೆದಾಡಿದ್ರೂ ಸೋಂಕಿತನಿಗೆ ಹಾಸಿಗೆ ಸಿಗಲಿಲ್ಲ. ಕೊನೆಗೆ ಕೆಸಿ ಜನರಲ್ ಆಸ್ಪತ್ರೆಗೆ ಸೋಂಕಿತನ ಕುಟುಂಬಸ್ಥರು ಆತನನ್ನು ರರೆದುಕೊಂಡು ಹೋಗಿದ್ದಾರೆ. ಈ ವೇಳೆ ಕೆಸಿ ಜನರಲ್ ವೈದ್ಯರು ಇಲ್ಲಿ ಆಗಲ್ಲ ವಿಕ್ಟೋರಿಯಾಗೆ ಕರೆದುಕೊಂಡು ಹೋಗಿ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರ ಸಭೆ ಬಳಿಕ ರಾಜ್ಯದಲ್ಲಿ ಕಠಿಣ ನಿಯಮ ಜಾರಿ: ಆರ್.ಅಶೋಕ್
ವೈದ್ಯರ ಹಾಗೂ ಸೋಂಕಿತನ ಕುಟುಂಬಸ್ಥರ ನಡುವೆ ಮಾತುಕತೆ ನಡೆಯುತ್ತಿರುವಾಗಲೇ ಸೋಂಕಿತ ಪ್ರಾಣ ಬಿಟ್ಟಿದ್ದಾನೆ. ಕೆಸಿ ಜನರಲ್ ಆಸ್ಪತ್ರೆ ಬಳಿ ಪಿಕ್ ಅಪ್ ವಾಹನದಲ್ಲೇ 65 ವರ್ಷದ ಸೋಂಕಿತ ಸಾವಿಗೀಡಾಗಿದ್ದಾನೆ. ಮೃತ ದೇಹವನ್ನ ವಾಹನದಲ್ಲೇ ಇಟ್ಟು ಕುಟುಂಬಸ್ಥರು ಪರದಾಡಿದ್ದು, ಕೊನೆಗೆ ಅದೇ ವಾಹನದಲ್ಲಿ ಸೋಂಕಿತನ ಮೃತ ದೇಹವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ.