ETV Bharat / state

ಕೊರೊನಾ ಭೀತಿ: ಕ್ವಾರಂಟೈನ್ ಅವಧಿ ಮುಗಿಯದೆ ಓಡಾಡುತ್ತಿದ್ದವರ ಮೇಲೆ ಕೇಸ್​​ - ಕೊರೊನಾ ವೈರಸ್ ಕರ್ನಾಟಕ ಲೆಟೆಸ್ಟ್ ನ್ಯೂಸ್

ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್​ ಅವಧಿ ಮುಗಿಯುವ ಮುನ್ನವೇ ಮನೆ ಬಿಟ್ಟು ಹೊರಗಡೆ ಓಡಾಡಿದ 7ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ವೈರಸ್ ಹರಡುವ ಭೀತಿಯಿಂದ ಹೋಂ ಕ್ವಾರಂಟೈನ್​ನಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚಿಸಲಾಗಿತ್ತು. ಆದರೆ 14 ದಿನಗಳ ಅವಧಿಗೂ ಮುನ್ನವೇ ಕ್ವಾರಂಟೈನ್​​ಗೆ ಒಳಗಾದವರು ನಗರದ ಹಲವೆಡೆ ಓಡಾಡಿರುವುದು ಬೆಳಕಿಗೆ ಬಂದಿದೆ.

corona-panic-the-case-registered-against-for-home-quarantine, ಕೊರೊನಾ ಭೀತಿ: ಕ್ವಾರಂಟೈನ್ ಅವಧಿ ಮುಗಿಯದೆ ಓಡಾಡುತ್ತಿದ್ದವರ ಮೇಲೆ ಕೇಸ್​​
ಕೊರೊನಾ ಭೀತಿ: ಕ್ವಾರಂಟೈನ್ ಅವಧಿ ಮುಗಿಯದೆ ಓಡಾಡುತ್ತಿದ್ದವರ ಮೇಲೆ ಕೇಸ್​​
author img

By

Published : Mar 23, 2020, 10:21 AM IST

ಬೆಂಗಳೂರು: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವ ಆತಂಕ ಮತ್ತಷ್ಟು ಹೆಚ್ಚಾಗ್ತಿದೆ. ಈಗಾಗಲೇ ಸಿಲಿಕಾನ್ ಸಿಟಿಯ ಏರ್​​ಪೊರ್ಟ್​​​ಗೆ ಬೇರೆ ಬೇರೆ ಕಡೆಯಿಂದ ಬಂದವರನ್ನ ತಪಾಸಣೆ ಮಾಡಿ ಕೋವಿಡ್ 19 ಇರುವವರನ್ನ ಹೋಂ ಕ್ವಾರಟೈಂನ್ ಮಾಡಲಾಗಿತ್ತು. ಶಂಕಿತರ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಇನ್ನೂ ಬೆಂಗಳೂರಿನಲ್ಲಿ 7 ಜನ ಹೋಂ ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ನಗರದಲ್ಲಿ ಸಂಚಾರ ನಡೆಸಿರುವುದು ಪತ್ತೆಯಾಗಿದ್ದು, ಅಂತವರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಲ್ಲದೆ ಹೋಂ ಕ್ವಾರಂಟೈನ್​​ಗೆ ಒಳಗಾದವರು 14 ದಿನ ಮನೆಯಲ್ಲಿ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆ ನಿನ್ನೆ ಮತ್ತು ಇಂದು ಆರೋಗ್ಯ ಇಲಾಖಾಧಿಕಾರಿಗಳು, ನೂಡಲ್ ಆಫೀಸರ್ ಇಶಾಪಂಥ್ ಹಾಗೂ ಠಾಣಾ ವ್ಯಾಪ್ತಿಯ ಪೊಲೀಸರು ಮನೆ ಮನೆಗೆ ತೆರಳಿ ಕೋವಿಡ್-19 ಒಳಗಾಗಿರುವ ವ್ಯಕ್ತಿಗಳು ಹೋಂ ಕ್ವಾರಟೈಂನ್​​ನಲ್ಲಿದ್ದಾರಾ ಎಂಬ ತಪಾಸಣೆ ನಡೆಸಿಲಾಗಿದೆ. ಈ ವೇಳೆ ಸುಮಾರು 7ಕ್ಕೂ ಹೆಚ್ಚು ಜನ ಮನೆ ಬಿಟ್ಟು ಹೊರಗಡೆ ಓಡಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದಂತೆ ಹೋಂ ಕ್ವಾರಟೈಂನ್​ಗೆ ಒಳಗಾದ ವ್ಯಕ್ತಿಗಳು ತಪ್ಪಿಸಿಕೊಂಡು ಹೋದರೆ ಅಥವಾ ಮನೆಯ ಹೊರಗಡೆ ಓಡಾಡಿ ಬೇರೆಯವರಿಗೆ ಸೋಂಕು ಹರಡಿಸಿದರೆ ಅಂತವರ ವಿರುದ್ಧ ಸೆಕ್ಷನ್ 269ರ ಅಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಸದ್ಯ ಸಿಲಿಕಾನ್ ಸಿಟಿಯಲ್ಲಿ 7 ಜನ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದ ವ್ಯಕ್ತಿಗಳು ನಗರದ ಹಲವೆಡೆ ಓಡಾಟ ನಡೆಸಿದ್ದು ಅವರ ವಿರುದ್ಧ ಕೇಸ್​ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.