ಬೆಂಗಳೂರು: ಬಿಜೆಪಿ ನಾಯಕರಲ್ಲೂ ಕೊರೊನಾ ಭೀತಿ ಕಾಡುತ್ತಿದೆ. ಹೀಗಾಗಿ ಅವರು ಕೊರೊನಾ ವೈರಸ್ನಿಂದ ಬಚಾವಾಗಲು ಹ್ಯಾಂಡ್ ಸ್ಯಾನಿಟೈಸರನ್ನು ಬಳಸುತ್ತಿದ್ದಾರೆ.
ಬಿಜೆಪಿಯ ಹಲವು ನಾಯಕರು ತಮ್ಮ ಕಾರುಗಳಲ್ಲಿ ಸ್ಯಾನಿಟೈಸರ್ ಬಳಕೆಗೆ ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಮ್ಮ ಕಾರಿನಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇರಿಸಿದ್ದು, ಕೊರೊನಾ ವೈರಸ್ ತಗುಲುವ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಇತ್ತ ನಳೀನ್ ಕುಮಾರ್ ಕಟೀಲ್ ಕಾರಿನ ಚಾಲಕನಿಗೂ ಸಹ ಸ್ಯಾನಿಟೈಸರ್ನಿಂದ ಕೈ ಸ್ವಚ್ಛಗೊಳಿಸಿಕೊಂಡೇ ಕಾರಿನ ಬಾಗಿಲು ತೆಗೆಯಲು ಸೂಚನೆ ನೀಡಿದ್ದಾರೆ.
ಇನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಕೂಡ ತಮ್ಮ ಕಾರಿನಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಸುತ್ತಿದ್ದಾರೆ. ತಮ್ಮೊಂದಿಗೆ ಕಾರಿನಲ್ಲಿ ಅದನ್ನು ಕೊಂಡೊಯ್ಯುತ್ತಿದ್ದಾರೆ.