ಬೆಂಗಳೂರು: ಕೊರೊನಾ ವೈರಸ್ನಿಂದ ಭಾರತ ಲಾಕ್ಡೌನ್ ಆಗಿರುವ ಹಿನ್ನೆಲೆ ರಾಜ್ಯ ಸರ್ಕಾರವೂ ಸಹ ಬಡವರಿಗೆ ರೇಷನ್ ನೀಡಲು ಮುಂದಾಗಿದೆ. ಈ ಹಿನ್ನೆಲೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಕಡು ಬಡವರಿಗೆ ರೇಷನ್ ಕಿಟ್ ನೀಡುವ ಯೋಜನೆಗೆ ಚಾಲನೆ ನೀಡಿದರು.
ಕಾರ್ಮಿಕ ಇಲಾಖೆಯಿಂದ 1 ಲಕ್ಷ ರೇಷನ್ ಕಿಟ್ಗಳನ್ನು ನೀಡುತ್ತಿದ್ದು, ಇಂದು ಕೆ.ಆರ್.ಪುರದಲ್ಲಿ ಕಾರ್ಮಿಕ ಇಲಾಖೆ ಕೂಡಾ 6 ಸಾವಿರ ರೇಷನ್ ಕಿಟ್ಗಳನ್ನು ನೀಡಿದೆ. ಇವನ್ನು ಕಡು ಬಡವರಿಗೆ ನೀಡಲಾಯಿತು. ಬಳಿಕ ಮಾತನಾಡಿದ ಅವರು, ಈಗಾಗಲೇ ಕೆಆರ್ ಪುರ ಕ್ಷೇತ್ರದಲ್ಲಿ 40 ಸಾವಿರ ಕಿಟ್ಗಳನ್ನು ವಿತರಿಸಿದ್ದೇವೆ.
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯೂ ಸಹ 6 ಸಾವಿರ ಕಿಟ್ಗಳನ್ನು ನೀಡಿದೆ. ಪ್ರತಿಯೊಂದು ರೇಷನ್ ಕಿಟ್ಗಳು ಕಡು ಬಡವರು, ನಿರ್ಗತಿಕರು, ದಿನಗೂಲಿ ನೌಕರರಿಗೆ ನೀಡಬೇಕೆಂದು ಈಗಾಗಲೇ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಎಲ್ಲೆಲ್ಲಿ ಸಮಸ್ಯೆಗಳಿಗೆ ಸಿಲುಕಿದ್ದಾರೆ ಎಂದು ಗಮನಿಸಬೇಕೆಂದು ಸಚಿವ ಭೈರತಿ ಬಸವರಾಜ ಹೇಳಿದ್ರು.