ETV Bharat / state

ದಯಮಾಡಿ ಯುವ ವಕೀಲರಿಗೆ ನೆರವು ನೀಡಿ: ಸಿಎಂಗೆ ಮನವಿ

ಕಿರಿಯ ವಕೀಲರ ನೆರವಿಗೆ ಧಾವಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಜೆ.ಎಮ್‌ ಅನಿಲ್ ಕುಮಾರ್‌ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ, ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನ್ಯಾಯಾಲಯಗಳು ಲಾಕ್‌ಡೌನ್​ ಗೆ ಬೆಂಬಲ ನೀಡಿವೆ. ಇದರ ಪರಿಣಾಮವಾಗಿ ಯುವ ಹಾಗೂ ಕಿರಿಯ ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಬೇರೆ ವಲಯದವರಿಗೆ ವಿವಿಧ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದೆ. ಅದರಂತೆ ವಕೀಲರಿಗೂ ಆರ್ಥಿಕ ನೆರವು ನೀಡಲು ಮುಂದಾಗಬೇಕು ಎಂದು ಕೋರಿದ್ದಾರೆ.

ಯುವ ವಕೀಲರಿಗೆ ನೆರವು ನೀಡುವಂತೆ ಮನವಿ
ಯುವ ವಕೀಲರಿಗೆ ನೆರವು ನೀಡುವಂತೆ ಮನವಿ
author img

By

Published : Mar 27, 2020, 5:09 PM IST

ಬೆಂಗಳೂರು : ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ವೃತ್ತಿ ನಿರ್ವಹಿಸುವ ಕಿರಿಯ ವಕೀಲರಿಗೆ ಸೂಕ್ತ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿ ಬೆಂಗಳೂರು ವಕೀಲರ ಸಂಘದ(ಎಎಬಿ) ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದ್ದಾರೆ.

ಯುವ ವಕೀಲರಿಗೆ ನೆರವು ನೀಡುವಂತೆ ಮನವಿ
ಯುವ ವಕೀಲರಿಗೆ ನೆರವು ನೀಡುವಂತೆ ಮನವಿ

ಕಿರಿಯ ವಕೀಲರ ನೆರವಿಗೆ ಧಾವಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಜೆ.ಎಮ್‌ ಅನಿಲ್ ಕುಮಾರ್‌ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನ್ಯಾಯಾಲಯಗಳು ಲಾಕ್‌ಡೌನ್​ ಗೆ ಬೆಂಬಲ ನೀಡಿವೆ. ಇದರ ಪರಿಣಾಮವಾಗಿ ಯುವ ಹಾಗೂ ಕಿರಿಯ ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಬೇರೆ ವಲಯದವರಿಗೆ ವಿವಿಧ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದೆ. ಅದರಂತೆ ವಕೀಲರಿಗೂ ಆರ್ಥಿಕ ನೆರವು ನೀಡಲು ಮುಂದಾಗಬೇಕು ಎಂದು ಕೋರಿದ್ದಾರೆ.

ವಕೀಲರಿಂದ ಸಂಗ್ರಹವಾದ ಹಣವನ್ನು ಈ ಸಂದರ್ಭದಲ್ಲಿ ಭಾರತೀಯ ವಕೀಲರ ಪರಿಷತ್ ಹಾಗೂ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರು ತಕ್ಷಣವೇ ಯುವ ಮತ್ತು ಕಿರಿಯ ವಕೀಲರಿಗೆ ನೆರವು ನೀಡಲು ವಿನಿಯೋಗಿಸಬೇಕು. ರಾಜ್ಯ ವಕೀಲರ ಪರಿಷತ್ ಯುವ ನ್ಯಾಯವಾದಿಗಳ ನೆರವಿಗೆ ಸಹಾಯ ಹಸ್ತ ಚಾಚಬೇಕು. ರಾಜ್ಯ ಸರ್ಕಾರವೂ ವಕೀಲರ ಬಗ್ಗೆ ಕಾಳಜಿ ತೋರಿಸಬೇಕು ಎಂದು ಎಎಬಿ ಅಧ್ಯಕ್ಷ ರಂಗನಾಥ್ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.