ಬೆಂಗಳೂರು: ಪೊಲೀಸ್ ಸಿಬ್ಬಂದಿ ಕೊರೊನಾಗೆ ತುತ್ತಾಗುತ್ತಿದ್ದು, ಇದುವರೆಗೆ ರಾಜ್ಯದಲ್ಲಿ 226 ಸಿಬ್ಬಂದಿಗೆ ಸೋಂಕು ತಗುಲಿದೆ.
ಬೆಂಗಳೂರಿನಲ್ಲಿ 190 ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿದೆ. ಇವರನ್ನು 76 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಐವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 9,378 ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 56 ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಈ ಬೆಳವಣಿಗೆಯಿಂದ ಕೊರೊನಾ ವಾರಿಯರ್ಗಳಾದ ಪೊಲೀಸರಲ್ಲಿ ಭೀತಿ ಶುರುವಾಗಿದೆ. ಇದುವರೆಗೆ ಸಿಬ್ಬಂದಿಗೆ ಮಾತ್ರ ಸೋಂಕು ತಗುಲಿತ್ತು, ಆದರೀಗ ಹಿರಿಯ ಅಧಿಕಾರಿಗಳಿಗೂ ವೈರಾಣು ಬಾಧಿಸುತ್ತಿದೆ. ಹೀಗಾಗಿ ಭಯದ ವಾತಾವರಣದಲ್ಲೇ ಅವರು ಕರ್ತವ್ಯ ನಿರ್ವಹಿಸುವಂತಾಗಿದೆ.
ಕೊರೊನಾ ಪಸರಿಸುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರ ರಾತ್ರಿ ಹೊತ್ತು ಕರ್ಫ್ಯೂ ಜಾರಿಗೊಳಿಸಿದೆ. ಭದ್ರತೆ ಮತ್ತು ಮಾಸ್ಕ್ ಹಾಕದೆ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳುವುದು. ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪೊಲೀಸರಿಗೆ ಸವಾಲಾಗಿದೆ. ಹೀಗಾಗಿ, ಠಾಣೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವಿನಾಕಾರಣ ಸಾರ್ವಜನಿಕರನ್ನು ಭೇಟಿಯಾಗುವುದು ಬೇಡ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸೂಚಿಸಿದ್ದಾರೆ.