ಬೆಂಗಳೂರು : ನಿನ್ನೆ ನಡೆದ ಬಿಬಿಎಂಪಿ ಮಾಸಿಕ ಸಭೆಗೆ ಪಾದರಾಯನಪುರ ಕೊರೊನಾ ಸೋಂಕಿತ ಕಾರ್ಪೊರೇಟರ್ ಹಾಜರಾಗದೇ ಇರುವುದು ಜನಪ್ರತಿನಿಧಿಗಳು ನಿಟ್ಟುಸಿರು ಬಿಡಲು ಕಾರಣವಾಗಿದೆ.
ಸಭೆಯಲ್ಲಿ 198 ಕಾರ್ಪೊರೇಟರ್ಗಳ ಪೈಕಿ 150 ಕ್ಕೂ ಹೆಚ್ಚು ಪಾಲಿಕೆ ಸದಸ್ಯರು ಹಾಜರಿದ್ದರು. ಅದೃಷ್ಟವಶಾತ್ ಪಾದರಾಯನಪುರ ಪಾಲಿಕೆ ಸದಸ್ಯ ಗೈರಾಗಿದ್ದರು. ಹೀಗಾಗಿ ಜನಪ್ರತಿನಿಧಿಗಳು ನಿಟ್ಟುಸಿರು ಬಿಡುವಂತಾಗಿದೆ.
ನಿನ್ನೆ ಕೌನ್ಸಿಲ್ ಸಭೆ ಪೂರ್ತಿ ಬಿಜೆಪಿ ವಿರುದ್ಧ ಪ್ರತಿಭಟನೆ, ಗದ್ದಲಕ್ಕೆ ಸಾಕ್ಷಿಯಾಗಿತ್ತು. 150 ಕ್ಕೂ ಹೆಚ್ಚು ಪಾಲಿಕೆ ಸದಸ್ಯರು, 50 ಕ್ಕೂ ಹೆಚ್ಚು ಅಧಿಕಾರಿಗಳು ಪಾಲಿಕೆ ಸಭೆಯಲ್ಲಿ ಭಾಗಿಯಾಗಿದ್ದು, ಯಾವುದೇ ಕೊರೊನಾ ಮುಂಜಾಗ್ರತೆ ಕ್ರಮಗಳ್ನು ಪಾಲಿಸಿರಲಿಲ್ಲ. ಒಂದು ವೇಳೆ ಕೊರೊನಾ ಸೋಂಕಿತ ಸದಸ್ಯ ಈ ಸಭೆಯಲ್ಲಿ ಭಾಗಿಯಾಗಿದ್ದರೆ ಹಲವರಿಗೆ ಸೋಂಕು ತಗುಲುವ ಸಾಧ್ಯತೆಯಿತ್ತು.